ಕಿಂಗ್‌ ಕೊಹ್ಲಿ ದಾಖಲೆ, ರಾಹುಲ್‌ ದ್ರಾವಿಡ್‌ ರೆಕಾರ್ಡ್‌ ಬ್ರೇಕ್‌ ಮಾಡಿದ ವಿರಾಟ್‌!

By Santosh NaikFirst Published Sep 27, 2022, 11:13 AM IST
Highlights

ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 63 ರನ್ ಬಾರಿಸಿದರು. ಈ ಹಾದಿಯಲ್ಲಿ ವಿರಾಟ್‌ ಕೊಹ್ಲಿ ಹಾಲಿ ಟೀಮ್‌ ಇಂಡಯಾ ಕೋಚ್‌ ಹಾಗೂ ಭಾರತ ತಂಡದ ಮಾಜಿ ಆಟಗಾರ ರಾಹುಲ್‌ ದ್ರಾವಿಡ್‌ ಅವರ ಅಪರೂಪದ ದಾಖಲೆಯನ್ನು ಮುರಿದಿದ್ದಾರೆ.

ಬೆಂಗಳೂರು (ಸೆ. 27):  ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಆಕರ್ಷಕ 63 ರನ್‌ ಸಿಡಿಸುವ ಮೂಲಕ ಗಮನಸೆಳೆದರು. ಈ ಅದ್ಭುತ ಇನ್ನಿಂಗ್ಸ್‌ನಲ್ಲಿ ಕೊಹ್ಲಿ 4 ಆಕರ್ಷಕ ಸಿಕ್ಸರ್‌ಗಳನ್ನು ಸಿಡಿಸಿದ್ದರು. ಅದರೊಂದಿಗೆ ಇದರ ಹಾದಿಯಲ್ಲಿ ಅಪರೂಪದ ಸ್ಥಾನವನ್ನೂ ವಿರಾಟ್‌ ಕೊಹ್ಲಿ ಪಡೆದುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್‌ ತೆಂಡುಲ್ಕರ್‌ ಬಳಿಕ ಗರಿಷ್ಠ ರನ್‌ ಬಾರಿಸಿದ ಭಾರತದ ಆಟಗಾರ ಎನಿಸಿಕೊಂಡಿದ್ದಾರೆ. ಈ ಹಾದಿಯಲ್ಲಿ ಅವರು ಹಾಲಿ ಟೀಮ್‌ ಇಂಡಿಯಾ ಕೋಚ್, ವಾಲ್‌ ಖ್ಯಾತಿಯ ರಾಹುಲ್‌ ದ್ರಾವಿಡ್‌ ಅವರನ್ನು ಹಿಂದೆ ಹಾಕಿದ್ದಾರೆ. ಸಚಿನ್‌ ತೆಂಡುಲ್ಕರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಾಗೂ ಭಾರತದ ಪರವಾಗಿ ಗರಿಷ್ಠ ರನ್‌ ಬಾರಿಸಿದ ಬ್ಯಾಟ್ಸ್‌ಮನ್‌ ಎನಿಸಿದ್ದಾರೆ. ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನದಲ್ಲಿ ಸಚಿನ್‌ ತೆಂಡುಲ್ಕರ್‌, 34, 357 ರನ್‌ಗಳನ್ನು ಬಾಆರಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಆಟಗಾರನೊಬ್ಬನ ಗರಿಷ್ಠ ರನ್‌ ಆಗಿದೆ. ವಿರಾಟ್‌ ಕೊಹ್ಲಿ ಪ್ರಸ್ತುತ 24,078 ರನ್‌ಗಳೊಂದಿಗೆ ಭಾರತದ ಪರವಾಗಿ ಗರಿಷ್ಠ ರನ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ರಾಹುಲ್‌ ದ್ರಾವಿಡ್‌, 24,064 ರನ್‌ಗಳೊಂದಿಗೆ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ.

ವಿರಾಟ್‌ ಕೊಹ್ಲಿಯ ಬಗ್ಗೆ ಮಾತನಾಡುವುದಾದರೆ, 2008ರಲ್ಲಿ ತಮ್ಮ ಕ್ರಿಕೆಟ್‌ ಜೀವನವನ್ನು ಆರಂಭಿಸಿದ್ದರು. ಆರಂಭಿಕ ದಿನಗಳಲ್ಲಿ ಕೇವಲ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರವೇ ಕೊಹ್ಲಿ ಅಡುತ್ತಿದ್ದರು. ಆ ಬಳಿಕ ಟೆಸ್ಟ್‌ ಹಾಗೂ ಟಿ20 ತಂಡಕ್ಕೂ ಆಗಮಿಸಿದ ವಿರಾಟ್‌ ಕೊಹ್ಲಿ, ಆಧುನಿಕ ಕ್ರಿಕೆಟ್‌ನ ದಿ ಬೆಸ್ಟ್‌ ಬ್ಯಾಟ್ಸ್‌ಮನ್‌ (HIGHEST Run getter in International Cricket) ಎನಿಸಿಕೊಂಡಿದ್ದಾರೆ. ಈವರೆಗೂ ಆಡಿರುವ 262 ಏಕದಿನ ಪಂದ್ಯಗಳಿಂದ ವಿರಾಟ್‌ ಕೊಹ್ಲಿ 12, 344 ರನ್‌ ಬಾರಿಸಿದ್ದು, 43 ಶತಕ ಸಿಡಿಸಿದ್ದಾರೆ.

2011ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ: ವಿರಾಟ್‌ ಕೊಹ್ಲಿ (Virat Kohli)  2011ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆದರೆ, ಮೊದಲ 20 ಟೆಸ್ಟ್‌ ಪಂದ್ಯಗಳು ಅವರ ಪಾಲಿಗೆ ಉತ್ತಮವಾಗಿರಲಿಲ್ಲ. ಆದರೆ, ಒಮ್ಮೆ ಟೆಸ್ಟ್‌ ತಂಡದ ನಾಯಕನಾದ ಬಳಿಕ, ವಿರಾಟ್‌ ಕೊಹ್ಲಿಯ ಆಟದ ಶೈಲಿಯೇ ಬದಲಾಯಿತು. ಈವರೆಗೂ ಆಡಿರುವ 102 ಟೆಸ್ಟ್‌ ಪಂದ್ಯಗಳಿಂದ ಕೊಹ್ಲಿ 8074 ರನ್‌ ಬಾರಿಸಿದ್ದಾರೆ. ಆದರೆ, ಟಿ20 ಕ್ರಿಕೆಟ್‌ನಲ್ಲಿ ಆರಂಭದಿಂದಲೂ ಕೊಹ್ಲಿ ಒಂದೇ ರೀತಿಯ ಲಯವನ್ನು ಕಂಡುಕೊಂಡು ಬಂದಿದ್ದಾರೆ. ಅಂತಾರಾಷ್ಟ್ರೀಯ ಟಿ29ಯಲ್ಲಿ 50 ಹಾಗೂ ಅದಕ್ಕಿಂತ ಹೆಚ್ಚಿನ ಸರಾಸರಿಯನ್ನು ಕಾಯ್ದುಕೊಂಡ ವಿಶ್ವದ ಕೆಲವೇ ಕೆಲವು ಕ್ರಿಕೆಟಿಗರಲ್ಲಿ ವಿರಾಟ್‌ ಕೊಹ್ಲಿ ಕೂಡ ಒಬ್ಬರಾಗಿದ್ದಾರೆ. 107 ಟಿ20 ಪಂದ್ಯಗಳನ್ನು ಆಡಿರುವ ಕೊಹ್ಲಿ 3660 ರನ್‌ ಬಾರಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೂ ಮುನ್ನ ಭಾರತಕ್ಕೆ ಆಘಾತ, ಮೂವರು ಆಟಗಾರರು ಔಟ್‌!

ಭಾರತೀಯ ಕ್ರಿಕೆಟರ್‌ಗಳ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ, ದ್ರಾವಿಡ್‌ (Rahul Dravid) ಅವರ ದಾಖಲೆ ಮುರಿದಿದ್ದರೂ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್‌ ಮನ್‌ಗಳ ಪಟ್ಟಿಯಲ್ಲಿ ದ್ರಾವಿಡ್‌ ಅವರೇ ಕೊಹ್ಲಿಗಿಂತ ಮುಂದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಅಲ್ಲದೆ, ಏಷ್ಯಾ ಹಾಗೂ ಐಸಿಸಿ ಟೀಮ್‌ಗಳ ಪರವಾಗಿಯೂ ದ್ರಾವಿಡ್‌ ಆಡಿದ್ದು, ಈ ಮೂಲಕ 24, 208 ರನ್ ಬಾರಿಸಿದ್ದಾರೆ. ಆದರೆ, ವಿರಾಟ್‌ ಕೊಹ್ಲಿ ಈವರೆಗೂ ಯಾವುದೇ ಏಷ್ಯಾ ಇಲೆವೆನ್‌ ಅಥವಾ ಐಸಿಸಿ ಇಲೆವೆನ್‌ನ ಅಂತಾರಾಷ್ಟ್ರೀಯ ಪಂದ್ಯ ಆಡಿಲ್ಲ.

Ind vs Aus ಟಿ20 ಸರಣಿ ಗೆಲ್ಲುತ್ತಿದ್ದಂತೆಯೇ ವಿರಾಟ್ ಕೊಹ್ಲಿಯನ್ನು ಬಿಗಿದಪ್ಪಿಕೊಂಡ ರೋಹಿತ್ ಶರ್ಮಾ..!

ವಿರಾಟ್ ಕೊಹ್ಲಿ (Most Runs International Cricket india) ಅವರು 2022ರ ಸೆಪ್ಟೆಂಬರ್‌ನಲ್ಲಿ  ನಡೆದ ಏಷ್ಯಾ ಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ 66 ಎಸೆತಗಳಲ್ಲಿ 122 ರನ್ ಬಾರಿಸಿದಾಗ ರಿಕಿ ಪಾಂಟಿಂಗ್ ಅವರ 71 ಶತಕಗಳ ದಾಖಲೆ ಸರಿಗಟ್ಟುವ ಮೂಲಕ ಅತಿ ಹೆಚ್ಚು ಅಂತರರಾಷ್ಟ್ರೀಯ ಶತಕಗಳನ್ನು ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ದಾಖಲೆಯ 100 ಶತಕಗಳೊಂದಿಗೆ ಸಚಿನ್ ತೆಂಡುಲ್ಕರ್ ಅಗ್ರಸ್ಥಾನದಲ್ಲಿದ್ದಾರೆ.

click me!