KKR ತಂಡಕ್ಕೆ ಕೋಚ್ ಜಾಕ್ ಕಾಲಿಸ್ ಗುಡ್ ಬೈ!

By Web Desk  |  First Published Jul 14, 2019, 4:11 PM IST

ಸತತ 9 ವರ್ಷಗಳ ಕಾಲ ಕೋಲ್ಕತಾ ನೈಟ್ ರೈಡರ್ಸ್ ತಂಡ ಜೊತೆ ಆಟಗಾರನಾಗಿ ಬಳಿಕ ಕೋಚ್ ಆಗಿ ಗುರುತಿಸಿಕೊಂಡಿದ್ದ ಜಾಕ್ ಕಾಲಿಸ್ ಇದೀಗ ವಿದಾಯ ಹೇಳಿದ್ದಾರೆ. ಕಾಲಿಸ್ ದಿಢೀರ್ ವಿದಾಯಕ್ಕೆ ಕಾರಣಳೇನು? ಇಲ್ಲಿದೆ ವಿವರ.


World cup Final: ಇಂಗ್ಲೆಂಡ್ vs ನ್ಯೂಜಿಲೆಂಡ್ ಪಂದ್ಯದ ಸ್ಕೋರ್ ಎಷ್ಟು?

ಕೋಲ್ಕತಾ(ಜು.14): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹೋರಾಟ ಅಂತ್ಯಗೊಳ್ಳುತ್ತಿದ್ದಂತೆ ಇದೀಗ ಅಭಿಮಾನಿಗಳ ಚಿತ್ತ ಮುಂದಿನ ಐಪಿಎಲ್ ಟೂರ್ನಿಯತ್ತ ನೆಟ್ಟಿದೆ. ಇತ್ತ ಫ್ರಾಂಚೈಸಿಗಳು ಈಗಾಗಲೇ ಮಹತ್ವದ ಸಭೆ ನಡೆಸಿ ತಯಾರಿ ಕೂಡ ಆರಂಭಿಸಿದೆ. ಇದರ ಬೆನ್ನಲ್ಲೇ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಮುಖ್ಯ ಕೋಚ್ ಜಾಕ್ ಕಾಲಿಸ್ ವಿದಾಯ ಹೇಳಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಐಪಿಎಲ್‌ ಮಾದರಿ ಅಳವಡಿಸಲು ಕೊಹ್ಲಿ ಇಂಗಿತ!

9 ವರ್ಷಗಳಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡದ ಜೊತೆಗಿದ್ದ ಜಾಕ್ ಕಾಲಿಸ್ ಇದೀಗ ವಿದಾಯ ಹೇಳಿದ್ದಾರೆ. 2011ರಲ್ಲಿ ಆಟಗಾರನಾಗಿ ಕೆಕೆಆರ್ ತಂಡ ಸೇರಿಕೊಂಡ ಕಾಲಿಸ್, 2015ರಲ್ಲಿ ಕೋಚ್ ಜವಾಬ್ದಾರಿ ವಹಿಸಿಕೊಂಡರು. ಇದೀಗ ಕಾಲಿಸ್ ವಿದಾಯ ಹೇಳಿದ್ದಾರೆ. ಕಾಲಿಸ್ ಜೊತೆಗೆ ಸಹಾಯಕ ಕೋಚ್ ಸೈಮನ್ ಕ್ಯಾಟಿಚ್ ಕೂಡ ಗುಡ್ ಬೈ ಹೇಳಿದ್ದಾರೆ.

ಇದನ್ನೂ ಓದಿ: ಹೀಗೆಂದಾದರೂ ನೋಡಿದ್ದೀರಾ ಈ ಐಪಿಎಲ್ ನಿರೂಪಕಿಯನ್ನು..!

ಸತತ 9 ವರ್ಷಗಳಿಂದ ಕೆಕೆಆರ್ ಜೊತೆಗಿದ್ದೆ. ಆಟಗಾರನಾಗಿ, ಮುಖ್ಯ ಕೋಚ್ ಆಗಿ ವಿವಿದ ಜವಾಬ್ದಾರಿ ನಿರ್ವಹಿಸಿದ್ದೇನೆ. ಇದೀಗ ಹೊಸ ಅವಕಾಶಗಳತ್ತ ಗಮನ ಕೇಂದ್ರಿಕರಿಸಿದ್ದೇನೆ. ಈ ಸಂದರ್ಭದಲ್ಲಿ ತಂಡದ ಮ್ಯಾನೇಜ್ಮೆಂಟ್, ಮಾಲೀಕ, ಆಟಗಾರರಿಗೆ ಧನ್ಯವಾದ ಹೇಳಲು ಇಚ್ಚಿಸುತ್ತೇನೆ ಎಂದು ಕಾಲಿಸ್ ಹೇಳಿದ್ದಾರೆ. 
 

click me!