
ದೆಹಲಿ(ಜು.13): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಪತ್ನಿಗೆ ಉದ್ಯಮಿ ಪಾಲುದಾರರೇ ವಂಚಿಸಿದ್ದಾರೆ. ಸೆಹ್ವಾಗ್ ಪತ್ನಿ ಆರತಿ ಸೆಹ್ವಾಗ್ ಸಹಿ ನಕಲು ಮಾಡಿ ಬರೊಬ್ಬರಿ 4.5 ಕೋಟಿ ರೂಪಾಯಿ ಪಂಗನಾಮ ಹಾಕಿದ್ದಾರೆ. ಇದೀಗ ಆರತಿ ಸೆಹ್ವಾಗ್ ದೆಹಲಿ ಪೊಲೀಸರಿಗೆ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಧೋನಿ ಹುಟ್ಟುಹಬ್ಬದಂದೇ ಗಾಳಿ ಸುದ್ದಿಗೆ ತೆರೆ ಎಳೆದ ಸೆಹ್ವಾಗ್..!
ಆರತಿ ಸೆಹ್ವಾಗ್ ಉದ್ಯಮಿ ಪಾಲುದಾರರು ಸಾಲಗಾರರಿಂದ 4.5ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಸಾಲ ಪಡೆಯಲು ಆರತಿ ಸೆಹ್ವಾಗ್ ಸಹಿಯನ್ನು ನಕಲು ಮಾಡಿದ್ದಾರೆ. ಇಷ್ಟೇ ಅಲ್ಲ ವಿರೇಂದ್ರ ಸೆಹ್ವಾಗ್ ಹೆಸರು ಹೇಳಿ ಸಾಲಗಾರಿಂದ ಹೆಚ್ಚಿನ ದಾಖಲೆ ಸಲ್ಲಿಸದೆ ಸಾಲ ಪಡೆಯಲಾಗಿದೆ. ಬಳಿಕ ಸಾಲ ಮರುಪಾವತಿಸದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಧೋನಿಗೆ 2-3 ಪಂದ್ಯಗಳಿಗೆ ನಿಷೇಧ ಹೇರಬೇಕಿತ್ತು ಎಂದ ಸೆಹ್ವಾಗ್..!
ಸಾಲ ಮರುಪಾವತಿಸದಿದ್ದಾಗ ಸಾಲಗಾರರು ಕೋರ್ಟ್ ಮೊರೆ ಹೋಗಿದ್ದಾರೆ. ವಿಚಾರಣೆ ವೇಳೆ ಸೆಹ್ವಾಗ್ ಪತ್ನಿ ಸಹಿ ಇರುವುದಾಗಿ ತಿಳಿಸಿದ್ದಾರೆ. ಆಶ್ಚರ್ಯಗೊಂಡ ಸೆಹ್ವಾಗ್ ಕುಟುಂಬ ತಕ್ಷಣವೇ ಪೊಲೀಸರಿಗೆ ದೂರು ನೀಡಿದೆ. ತಾನು ಯಾವುದೇ ಸಹಿ ಮಾಡಿಲ್ಲ. ಈ ಕುರಿತು ತನಿಖೆ ನಡೆಸಿ ನ್ಯಾಯ ಒದಗಿಸಲು ಆರತಿ ಸೆಹ್ವಾಗ್ ಕೋರಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.