
ನವದೆಹಲಿ[ಜು.14]: ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆ, ಅಮೆರಿಕ ಕ್ರಿಕೆಟ್ ತಂಡದ ಹಂಗಾಮಿ ಕೋಚ್ ಆಗಿ ನೇಮಕಗೊಂಡಿದ್ದಾರೆ. ಕಳೆದ ತಿಂಗಳಷ್ಟೇ ಅಮೆರಿಕ ಕ್ರಿಕೆಟ್ ಮಂಡಳಿಯ ನಿರ್ದೇಶಕರಾಗಿ ನೇಮಕಗೊಂಡಿದ್ದ ಅವರು, ಹೆಚ್ಚುವರಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಕ್ರಿಕೆಟ್‌ಗೆ ಎಂಟ್ರಿಕೊಟ್ಟ ದೊಡ್ಡಣ್ಣ-ಅಮೆರಿಕಕ್ಕೆ ಏಕದಿನ ಮಾನ್ಯತೆ!
ಪ್ರಧಾನ ಕೋಚ್ ಆಗಿದ್ದ ಪುಬುಡು ದಾಸ್ಸಾನಾಯಕೆ ದಿಢೀರ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಮೋರೆ ಹೆಗಲಿಗೆ ಕೋಚಿಂಗ್ ಜವಾಬ್ದಾರಿ ನೀಡಲಾಗಿದೆ. ಪುಬುಡು ದಾಸ್ಸಾನಾಯಕೆ ಮಾರ್ಗದರ್ಶನದಲ್ಲಿ ಹಾಂಕಾಂಗ್ ತಂಡವನ್ನು ಮಣಿಸಿ ಅಮೆರಿಕ ಐಸಿಸಿ ಏಕದಿನ ಮಾನ್ಯತೆ ಪಡೆದುಕೊಂಡಿತ್ತು.
ಇದೇ ವೇಳೆ ಭಾರತದ ಮಾಜಿ ಆಟಗಾರರಾದ ಸುನಿಲ್ ಜೋಶಿ ಹಾಗೂ ಪ್ರವೀಣ್ ಆಮ್ರೆ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸುನಿಲ್ ಜೋಶಿ ಈ ಹಿಂದೆ ಬಾಂಗ್ಲಾದೇಶ ಸ್ಪಿನ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.