ಅಶ್ವಿನ್‌ಗೆ ಮತ್ತೊಂದು ಶಾಕ್, ಕನ್ನಡಿಗ KL ರಾಹುಲ್‌ಗೆ ಜಾಕ್‌ಪಾಟ್..?

By Web Desk  |  First Published Aug 24, 2019, 4:32 PM IST

ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪಾಲಿಗೆ ಕರಾಳ ದಿನಗಳು ಎದುರಾಗುತ್ತಿದ್ದು, ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿದೆ. ಇದೀಗ ಐಪಿಎಲ್‌ನಿಂದಲೂ ಕಹಿ ಸುದ್ದಿಯೊಂದು ಹೊರಬೀಳುವ ಸಾಧ್ಯತೆಯಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಬೆಂಗಳೂರು[ಆ.24]: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದು ಆಘಾತ ಅನುಭವಿಸುತ್ತಿರುವ ಟೀಂ ಇಂಡಿಯಾ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪಾಲಿಗೆ ಇದೀಗ ಮತ್ತೊಂದು ಆಘಾತಕಾರಿ ಸುದ್ದಿ ಹೊರಬೀಳುವ ಸಾಧ್ಯತೆಯಿದೆ. ಆದರೆ ಆ ಸುದ್ದಿ ಕನ್ನಡಿಗ ಕೆ.ಎಲ್ ರಾಹುಲ್ ಪಾಲಿಗೆ ಶುಭ ಸುದ್ದಿಯಾಗಲಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಕೊಹ್ಲಿಗೆ ಜೈ ಎಂದ್ರೆ ಮಾತ್ರ ಭವಿಷ್ಯ, ವಿರುದ್ಧ ನಿಂತ್ರೆ ಕರಿಯರ್ ಕ್ಲೋಸ್!

Latest Videos

undefined

ಮುಂಬರುವ 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ಮೊಹಾಲಿ ಮೂಲದ ಫ್ರಾಂಚೈಸಿ ಕಿಂಗ್ಸ್ XI ಪಂಜಾಬ್ ತಂಡವು ನಾಯಕ ಅಶ್ವಿನ್ ಅವರನ್ನು ಬೇರೆ ತಂಡಕ್ಕೆ ನೀಡಿ ಬದಲಿ ಆಟಗಾರನನ್ನು ಖರೀದಿಸಲು ಮನಸು ಮಾಡಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಇದರ ಜತೆಗೆ ಕನ್ನಡಿಗ ಕೆ.ಎಲ್ ರಾಹುಲ್’ಗೆ ಪಂಜಾಬ್ ತಂಡದ ನಾಯಕತ್ವ ನೀಡಲು ಫ್ರಾಂಚೈಸಿ ಒಲವು ತೋರಿದೆ ಎನ್ನಲಾಗಿದೆ.

ಒಂದು ವಿಕೆಟ್, 3 ಅಪರೂಪದ ದಾಖಲೆ: ಇದು ಬುಮ್ರಾ ಮ್ಯಾಜಿಕ್..!

ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡವು 32 ವರ್ಷದ ಅಶ್ವಿನ್ ಅವರನ್ನು ಖರೀದಿಸಲು ಮನಸು ಮಾಡಿದೆ ಎನ್ನಲಾಗಿದೆ. ಇದಷ್ಟೇ ಅಲ್ಲದೇ ರಾಜಸ್ಥಾನ ಕೂಡಾ ಅಶ್ವಿನ್ ಅವರನ್ನು ತಮ್ಮ ತೆಕ್ಕೆಗೆ ಸೆಳೆಯಲು ಕಸರತ್ತು ನಡೆಸುತ್ತಿದೆ. ಕಳೆದ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದ ಕೃಷ್ಣಪ್ಪ ಗೌತಮ್ ಅವರನ್ನು ನೀಡಿ ಅಶ್ವಿನ್ ಅವರನ್ನು ಖರೀದಿಸಲು ರಾಜಸ್ಥಾನ ಫ್ರಾಂಚೈಸಿ ಪ್ಲಾನ್ ಮಾಡಿದೆ ಎನ್ನಲಾಗಿದೆ.

2018ರ ಹರಾಜಿನ ವೇಳೆ ಅಶ್ವಿನ್ ಅವರನ್ನು ಕಿಂಗ್ಸ್ XI ಪಂಜಾಬ್ 7.6 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಜೊತೆಗೆ ತಂಡದ ನಾಯಕತ್ವವನ್ನು ನೀಡಲಾಗಿತ್ತು. ಆದರೆ ಅಶ್ವಿನ್ ನಾಯಕತ್ವದಲ್ಲಿ ಕಳೆದೆರಡು ಆವೃತ್ತಿಯಲ್ಲಿ ಪಂಜಾಬ್ ಕ್ರಮವಾಗಿ ಆರು ಹಾಗೂ ಏಳನೇ ಸ್ಥಾನದೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿತ್ತು. ಅಶ್ವಿನ್ ಪಂಜಾಬ್ ಪರ 28 ಪಂದ್ಯಗಳನ್ನಾಡಿ 25 ವಿಕೆಟ್’ಗಳನ್ನು ಪಡೆದಿದ್ದರು. 

click me!