ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಬೆಂಗಳೂರಿನಲ್ಲಿಂದು ಮುಖಾಮುಖಿಯಾಗುತ್ತಿದೆ. ಈಗಾಗಲೇ 5 ಸೋಲು ಕಂಡಿರುವ ಬೆಂಗಳೂರು ಒಂದಡೆಯಾದರೆ, 5 ರಲ್ಲಿ 2 ಪಂದ್ಯ ಗೆದ್ದಿರುವ ಡೆಲ್ಲಿ ಮತ್ತೊಂದೆಡೆ ಹೋರಾಟಕ್ಕೆ ಸಿದ್ಧವಾಗಿದೆ. ಇವರಿಬ್ಬರ ಹೋರಾಟದಲ್ಲಿ ಯಾರು ಫೇವರಿಟ್? ಇಲ್ಲಿದೆ ಮಾಹಿತಿ.
ಬೆಂಗಳೂರು(ಏ.07): ಐಪಿಎಲ್ 12ನೇ ಆವೃತ್ತಿಯಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡುತ್ತಿರುವ ಏಕೈಕ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಆರಂಭಿಕ 5 ಪಂದ್ಯಗಳನ್ನು ಸೋತು ಇದೀಗ 6ನೇ ಅದೃಷ್ಠ ಪರೀಕ್ಷೆಗೆ ಮುಂದಾಗಿದೆ. ತವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಹೋರಾಟಕ್ಕೆ ವಿರಾಟ್ ಕೊಹ್ಲಿ ಬಾಯ್ಸ್ ಅಭ್ಯಾಸ ನಡೆಸಿದ್ದಾರೆ. ಆದರೆ ಈ ಪಂದ್ಯದಲ್ಲಾದರೂ ಸೋಲಿನಿಂದ ಹೊರಬರುತ್ತಾ ಅನ್ನೋ ಅಭಿಮಾನಿಗಳ ಪ್ರಶ್ನೆಗೆ ಖಚಿತ ಉತ್ತರವಿಲ್ಲ.
ಇದನ್ನೂ ಓದಿ: 5 ಪಂದ್ಯ ಸೋತರೂ RCBಗೆ ಇನ್ನೂ ಇದೇ ಪ್ಲೇ ಆಫ್ ಅವಕಾಶ!
undefined
ಆನ್ ಪೇಪರ್‌ನಲ್ಲಿ RCB ಬಲಿಷ್ಠ ತಂಡ. ವಿಶ್ವದ ಶ್ರೇಷ್ಠ ಚುಟುಕು ಕ್ರಿಕೆಟ್ ಬ್ಯಾಟ್ಸ್‌ಮನ್, ಬೌಲರ್‌ಗಳನ್ನು ಹೊಂದಿರುವ RCB ತಂಡ ಸೋಲಿನಿಂದ ಜರ್ಝರಿತವಾಗಿದೆ. ಆರಂಭಿಕ 4 ಪಂದ್ಯದ ಸೋಲು ಹೆಚ್ಚಿನ ನೋವು ತಂದಿಲ್ಲ. ಆದರೆ ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧದ ಸೋಲು ಮಾತ್ರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. 205 ರನ್ ಸಿಡಿಸಿ, 7 ಬೌಲರ್‌ಗಳನ್ನು ಆಡಿಸಿದ್ದರೂ ಗೆಲುವು ಸಿಗಲಿಲ್ಲ.
ಇದನ್ನೂ ಓದಿ: IPL 2019: ಹೈದರಾಬಾದ್‌ಗೆ ಸೋಲಿನ ಶಾಕ್ ನೀಡಿದ ಮುಂಬೈ!
ತಂಡದಲ್ಲಿ ಬದಲಾವಣೆ:
ಇಂದಿನ ಪಂದ್ಯದಲ್ಲೂ ಕೆಲ ಬದಲಾವಣೆ ಮಾಡಲು ನಾಯಕ ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ. ಕಳೆದ ಪಂದ್ಯದಲ್ಲಿ ಕೆಂಗಣ್ಣಿಗೆ ಗುರಿಯಾಗಿರುವ ಮೊಹಮ್ಮದ್ ಸಿರಾಜ್ ಹೊರಗುಳಿಯುವ ಸಾಧ್ಯತೆ ಹೆಚ್ಚು. ಕಳಪೆ ಫೀಲ್ಡಿಂಗ್ ಹಾಗೂ ದುಬಾರಿ ಬೌಲಿಂಗ್‌ನಿಂದ ಸಿರಾಜ್ ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಇನ್ನು ಬ್ಯಾಟಿಂಗ್ ವಿಭಾಗದಲ್ಲ ಯಾವುದೇ ಬದಲಾವಣೆ ಸಾಧ್ಯತೆಗಳಿಲ್ಲ. ಕಾರಣ ಕೊಹ್ಲಿ, ಎಬಿ ಡಿವಿಲಿಯರ್ಸ್, ಪಾರ್ಥೀವ್ ಪಟೇಲ್ ಸೇರಿದಂತೆ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ.
ಬ್ಯಾಟ್ಸ್‌ಮನ್‌ಗಳ ಹೋರಾಟ:
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟ್ಸ್‌ಮನ್ ಪಾಲಿಗೆ ಸ್ವರ್ಗ. ಬೌಂಡರಿ ಸಿಕ್ಸರ್‌ಗಳ ಮಳೆ ಸುರಿಯಲಿದೆ. ಹೀಗಾಗಿ ಈ ಪಂದ್ಯ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಪಾರ್ಥೀವ್ ಪಟೇಲ್ ಹಾಗೂ ಡೆಲ್ಲಿ ತಂಡದ ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ ಹಾಗೂ ಶಿಖರ್ ಧವನ್ ನಡುವಿನ ಹೋರಾಟವಾಗಿ ಬಂಬಿತವಾಗಿದೆ.