
ಹೈದರಾಬಾದ್(ಏ.06): ಐಪಿಎಲ್ ಲೀಗ್ ಟೂರ್ನಿಯ 19ನೇ ಪಂದ್ಯ ಅಲ್ಪಮೊತ್ತದಲ್ಲೂ ಸಖತ್ ಮನರಂಜನೆ ನೀಡಿದೆ. ಮುಂಬೈ ಇಂಡಿಯನ್ಸ್ ನೀಡಿದ 137 ರನ್ ಸುಲಭ ಟಾರ್ಗೆಟ್, ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಚೇಸ್ ಮಾಡಲು ಸಾಧ್ಯವಾಗಿಲ್ಲ. ಅಲ್ಜಾರಿ ಜೋಸಫೆ ದಾಳಿಗೆ ನಲುಗಿದ ರೈಸರ್ಸ್ 17.4 ಓವರ್‌ಗಳಲ್ಲಿ 96 ರನ್‌ಗೆ ಆಲೌಟ್ ಆಯಿತು. ಇದರೊಂದಿಗೆ ಮುಂಬೈ 40 ರನ್ ಗೆಲುವು ಸಾಧಿಸಿತು.
137 ರನ್ ಟಾರ್ಗೆಟ್ ತವರಿನಲ್ಲಿ ಸನ್ ರೈಸರ್ಸ್ ತಂಡಕ್ಕೆ ಸುಲಭ ತುತ್ತಾಗಿತ್ತು. ಆದರೆ ಹೈದರಾಬಾದ್ ತಂಡಕ್ಕೆ ಮುಂಬೈ ಬೌಲರ್‌ಗಳು ಶಾಕ್ ನೀಡಿದರು. ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋ ಜೊತೆಯಾಟ 33 ರನ್‌ಗಳಿಗೆ ಅಂತ್ಯವಾಯಿತು. ಬೈರ್‌ಸ್ಟೋ 16 ರನ್ ಸಿಡಿಸಿ ಔಟಾದರೆ, ವಾರ್ನರ್ 15 ರನ್‌ಗೆ ಸುಸ್ತಾದರು.
ವಿಜಯ್ ಶಂಕರ್ ಕೂಡ ತಂಡಕ್ಕೆ ನೆರವಾಗಲಿಲ್ಲ. ಕೇವಲ 5 ರನ್ ಸಿಡಿಸಿ ಔಟಾದರು. ಮನೀಶ್ ಪಾಂಡೆ ಆಟ 16 ರನ್‌ಗೆ ಅಂತ್ಯವಾಯಿತು. ಯೂಸುಫ್ ಪಠಾಣ್ ಡಕೌಟ್ ಆದರು. ಸಂಕಷ್ಟದಲ್ಲೂ ಹೈದರಾಬಾದ್ ಅಭಿಮಾನಿಗಳಲ್ಲಿ ಗೆಲುವಿನ ಆಸೆ ಚಿಗುರಿಸಿದ ದೀಪಕ್ ಹೂಡ 20 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ರಶೀದ್ ಖಾನ್ ಔಟಾದರು. ಮೊಹಮ್ಮದ್ ನಬಿ 11 ರನ್ ಸಿಡಿಸಿ ಪೆವಿಲಿಯನ್ ಸೇರಿದರು.
ಅಲ್ಜಾರಿ ಜೋಸೆಫ್ ದಾಳಿಗೆ ತತ್ತರಿಸಿದ ಹೈದರಾಬಾದ್ ವಿಕೆಟ್ ಉಳಿಸಿಕೊಳ್ಳಲು ಪರದಾಡಿತು. ಬರೋಬ್ಬರಿ 6 ವಿಕೆಟ್ ಕಬಳಿಸೋ ಮೂಲಕ ರೈಸರ್ಸ್ ತಂಡವನ್ನು 17.4 ಓವರ್‌ಗಳಲ್ಲಿ 96 ರನ್‌ಗೆ ಆಲೌಟ್ ಮಾಡಿದರು. ಈ ಮೂಲಕ ಮುಂಬೈ 40 ರನ್ ಗೆಲುವು ಸಾಧಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.