5 ಪಂದ್ಯ ಸೋತರೂ RCBಗೆ ಇನ್ನೂ ಇದೇ ಪ್ಲೇ ಆಫ್ ಅವಕಾಶ!

Published : Apr 06, 2019, 09:56 PM ISTUpdated : Apr 06, 2019, 10:12 PM IST
5 ಪಂದ್ಯ ಸೋತರೂ RCBಗೆ ಇನ್ನೂ ಇದೇ ಪ್ಲೇ ಆಫ್ ಅವಕಾಶ!

ಸಾರಾಂಶ

ಆರಂಭಿಕ 5 ಪಂದ್ಯಗಳನ್ನ ಸೋತಿರುವ RCB ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಡುತ್ತಾ? ಈ ಪ್ರಶ್ನೆ ಇದೀಗ ಅಭಿಮಾನಿಗಳಲ್ಲಿ ಕಾಡುತ್ತಿದೆ. ಸೋಲನ್ನೇ ಹಾಸು ಹೊದ್ದು ಮಲಗಿರುವ ಬೆಂಗಳೂರು ತಂಡಕ್ಕೆ ಅವಕಾಶ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಬೆಂಗಳೂರು(ಏ.06): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತೀವ್ರ ಹಿನ್ನಡೆ ಅನುಭವಿಸಿದೆ. ಆರಂಭಿಕ 5 ಪಂದ್ಯಗಳನ್ನೂ ಸೋತು ಗೆಲುವಿಗಾಗಿ ಪರಿತಪಿಸುತ್ತಿದೆ. ಕಳೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 205 ರನ್ ಸಿಡಿಸಿ ಪಂದ್ಯವನ್ನು ಕೈಚೆಲ್ಲಿತು. RCB ತಂಡದಲ್ಲೇನೋ ಸಮಸ್ಯೆ ಇದೆ ಅನ್ನೋದು ಸತ್ಯ. ಆದರೆ 5 ಪಂದ್ಯ ಸೋತಿದೆ ಅನ್ನೋ ಕಾರಣಕ್ಕೆ ಪ್ಲೇ ಆಫ್ ಅವಕಾಶವಿಲ್ಲ ಎಂದಲ್ಲ.

ಇದನ್ನೂ ಓದಿ: ಹೊಸ ಕಾರು ಖರೀದಿಸಿದ ಹಾರ್ದಿಕ್ ಪಾಂಡ್ಯ- ಬೆಲೆ 2.19 ಕೋಟಿ!

ಪ್ಲೇ ಆಫ್ ಹಂತಕ್ಕೇರಲು ಕನಿಷ್ಟ 7 ಪಂದ್ಯ ಗೆಲ್ಲಲೇಬೇಕು. ಹಾಗಂತ 7 ಪಂದ್ಯ ಗೆದ್ದರೆ ಸಾಕು ಎಂದಲ್ಲ. ಸದ್ಯ RCB ಪರಿಸ್ಥಿತಿ ಶೋಚನೀಯವಾಗಿದೆ ಅನ್ನೋದು ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಅವಕಾಶ ಇನ್ನೂ ಕೈತಪ್ಪಿಹೋಗಿಲ್ಲ ಅನ್ನೋದೇ ಸಮಾಧಾನ.  7 ಪಂದ್ಯಗಳನ್ನ ಸೋತು ಪ್ರಶಸ್ತಿ ಗೆದ್ದ ಉದಾಹರಣೆಗಳಿವೆ. 2009ರಲ್ಲಿ ಡೆಕ್ಕನ್ ಚಾರ್ಜಸ್ ಲೀಗ್ ಹಂತದಲ್ಲಿ 7 ಪಂದ್ಯಗಳನ್ನು ಸೋತಿತ್ತು. ಆದರೆ ಇನ್ನುಳಿದ 7 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿತ್ತು. ಬಳಿಕ ಚಾಂಪಿಯನ್ ಆಗಿ ಮರೆದಾಡಿತ್ತು. 

ಇದನ್ನೂ ಓದಿ: 205 ರನ್ ಸಿಡಿಸಿ, 7 ಬೌಲರ್ ಇದ್ರೂ ರಸೆಲ್ ಸುನಾಮಿಗೆ ಕೊಚ್ಚಿ ಹೋಯ್ತು RCB

2010ರಲ್ಲಿ CSK ಲೀಗ್ ಹಂತದಲ್ಲಿ 7 ಪಂದ್ಯಗಳನ್ನು ಸೋತಿತ್ತು. ಅಂಕಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿತ್ತು. ಬಳಿಕ CSK ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2014ರಲ್ಲಿ ಮುಂಬೈ ಇಂಡಿಯನ್ಸ್ ಆರಂಭಿಕ 5 ಪಂದ್ಯಗಳನ್ನು ಸೋತು ಬಳಿಕ ಚಾಂಪಿಯನ್ ಆಗಿತ್ತು. ಇದೀಗ ಬೆಂಗಳೂರು ಕೂಡ ಆರಂಭಿಕ 5 ಪಂದ್ಯಗಳನ್ನು ಸೋತಿದೆ. ಇನ್ನುಳಿದ ಪಂದ್ಯ ಗೆದ್ದರೆ ಪ್ಲೇ ಆಫ್ ಅವಕಾಶ ಖಚಿತವಾಗಲಿದೆ. ಆದರೆ ಮುಂದಿನ ಪಂದ್ಯಗಳಲ್ಲಿ ಕಮ್‌ಬ್ಯಾಕ್ ಮಾಡಲೇಬೇಕು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಬ್ಬಬ್ಬಾ..! ಲಿಯೋನೆಲ್ ಮೆಸ್ಸಿ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ಒಂದು ದಿನದ ಚಾರ್ಜ್ ಇಷ್ಟೊಂದಾ?
ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ!