ರಾಜಸ್ಥಾನ ಮಣಿಸಿ 2ನೇ ಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್

Published : May 04, 2019, 07:19 PM ISTUpdated : May 04, 2019, 07:23 PM IST
ರಾಜಸ್ಥಾನ ಮಣಿಸಿ 2ನೇ ಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್

ಸಾರಾಂಶ

ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಆದರೆ ರಾಜಸ್ಥಾನ ರಾಯಲ್ಸ್ ಟೂರ್ನಿಯಿಂದಲೇ ಹೊರಬಿದ್ದಿದೆ. ರೋಚಕ ಹೋರಾಟದ ಹೈಲೈಟ್ಸ್ ಇಲ್ಲಿದೆ.  

ದೆಹಲಿ(ಮೇ.04): ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಅಂತಿಮ ಲೀಗ್ ಹೋರಾಟ ಕಡಿಮೆ ಸ್ಕೋರ್ ಆಗಿದ್ದರೂ ರೋಚಕ ಹೋರಾಟ ಮೂಡಿಬಂತು. ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್ ಗೆಲುವು ಸಾಧಿಸಿತು. ಈ ಮೂಲಕ ಡೆಲ್ಲಿ ಅಂಕಪಟ್ಟಿಯಿಂದ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟರೆ, ಇತ್ತ ಪ್ಲೇ ಆಫ್‌ಗೆ ಇದ್ದ ಕೊನೆಯ ಅವಕಾಶವನ್ನೂ ರಾಜಸ್ಥಾನ ರಾಯಲ್ಸ್ ಕಳೆದುಕೊಂಡಿತು. 

ಇದನ್ನೂ ಓದಿ: ಲಾಸ್ಟ್ ಪಂದ್ಯಕ್ಕೂ ಮುನ್ನ ಫ್ಯಾನ್ಸ್‌ಗೆ ಕೊಹ್ಲಿ ಮೆಸೇಜ್!

ಗೆಲುವಿಗೆ 116ರನ್ ಟಾರ್ಗೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಎಂದಿನಂತ ಆರಂಭ ಉತ್ತಮವಾಗಿರಲಿಲ್ಲ. 16 ರನ್ ಸಿಡಿಸಿದ ಶಿಖರ್ ಧವನ್ ವಿಕೆಟ್ ಪತನಗೊಳ್ಳುತ್ತಿದ್ದಂತೆ, ರಾಜಸ್ಥಾನ ತಂಡದಲ್ಲಿ ಹೊಸ ಹುರುಪು ಮೂಡಿತು. ಧವನ್ ಬೆನ್ನಲ್ಲೇ ಪೃಥ್ವಿ ಶಾ ಕೇವಲ 8 ರನ್ ಸಿಡಿಸಿ ಔಟಾದರು. ನಾಯಕ ಶ್ರೇಯಸ್ ಅಯ್ಯರ್ ಹೋರಾಟ 15 ರನ್‌ಗೆ ಅಂತ್ಯವಾಯಿತು.

ಇದನ್ನೂ ಓದಿ: ತುಂಟ ರಸೆಲ್, ಖಾಸಗಿ ವಿಡಿಯೋ ವೈರಲ್..!

ಕೊಲಿನ್ ಇನ್‌ಗ್ರಾಂ 12 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ರಿಷಬ್ ಪಂತ್ ಹೋರಾಟ ಮುಂದುವರಿಸಿದರು. ಶೆರ್ಫಾನೆ ರುದ್‌ಫೋರ್ಡ್ 12 ರನ್ ಸಿಡಿಸಿ ಔಟಾದರು. ಭರ್ಜರಿ ಸಿಕ್ಸರ್ ಸಿಡಿಸಿದ ಪಂತ್ ಆಕರ್ಷಖ ಅರ್ಧಶತಕ ಸಿಡಿಸಿದರು. ಇಷ್ಟೇ ಅಲ್ಲ ಇನ್ನೂ ಎಸೆತ ಬಾಕಿ 23 ಎಸೆತ ಬಾಕಿ ಇರುವಂತೆ ತಂಡಕ್ಕೆ 5 ವಿಕೆಚ್ ಗೆಲುವು ತಂದುಕೊಟ್ಟರು. ಪಂತ್ ಅಜೇಯ 53 ರನ್ ಸಿಡಿಸಿ ಮಿಂಚಿದರು.   
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana