
ದೆಹಲಿ(ಮೇ.04): ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಗೆದ್ದು ಪ್ಲೇ ಆಫ್ ಆಸೆ ಜೀವಂತವಾಗಿರಿಸೋ ಆತ್ಮವಿಶ್ವಾಸದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟಿದ್ದಾರೆ. ರಿಯಾನ್ ಪರಾಗ್ ಏಕಾಂಗಿ ಹೋರಾಟ ನಡೆವೆಯೂ ಡೆಲ್ಲಿ ಮಾರಕ ದಾಳಿಗೆ ತುತ್ತಾದ ರಾಜಸ್ಥಾನ 9 ವಿಕೆಟ್ ನಷ್ಟಕ್ಕೆ 115 ರನ್ ಸಿಡಿಸಿದೆ. ಮೂಲಕ ಡೆಲ್ಲಿ ತಂಡಕ್ಕೆ 116 ರನ್ ಸುಲಭ ಗುರಿ ನೀಡಿದೆ.
ಟಾಸ್ ಗೆದ್ದ ರಾಜಸ್ಥಾನ ಚೇಸಿಂಗ್ ಬದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ರಾಜಸ್ಥಾನ ಟಾಸ್ ಗೆದ್ದಿದ್ದೇ ಬಂತು, ಕ್ರೀಸಿಗಳಿದಾಗ ಎಲ್ಲವೂ ಉಲ್ಟಾ ಆಗಿತ್ತು. ಆರಂಭದಲ್ಲೇ ಇಶಾಂತ್ ಶರ್ಮಾ ದಾಳಿಗೆ ತತ್ತರಿಸಿತು. ಅಮಿತ್ ಮಿಶ್ರಾ ಕೂಡ ಸ್ಪಿನ್ ಮೋಡಿ ಮಾಡೋ ಮೂಲಕ ರಾಜಸ್ಥಾನಕ್ಕೆ ಶಾಕ್ ಮೇಲೆ ಶಾಕ್ ನೀಡಿದರು.
ನಾಯಕ ಅಜಿಂಕ್ಯ ರಹಾನೆ 2, ಲಿವಿಂಗ್ ಲಿಯಾಮ್‌ಸ್ಟೋನ್ 14, ಸಂಜುಸಾಮ್ಸನ್ 5, ಮಹಿಪಾಲ್ ಲೊಮ್ರೊರ್ 8, ಶ್ರೇಯಸ್ ಗೋಪಾಲ್ 12, ಸ್ಟುವರ್ಟ್ ಬಿನ್ನಿ ಶೂನ್ಯ, ಕೆ ಗೌತಮ್ 6 ರನ್ ಸಿಡಿಸಿ ಔಟಾದರು. ಇತ್ತ ರಿಯಾನ್ ಪರಾಗ್ ಏಕಾಂಗಿ ಹೋರಾಟ ನೀಡಿದರು. ಆದರೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ.
ಅದ್ಬುತ ಪ್ರದರ್ಶನ ನೀಡಿದ 17 ವರ್ಷದ ರಿಯಾನ್ ಆಕರ್ಷಕ ಅರ್ಧಶತಕ ಸಿಡಿಸಿದರು. ಈ ಮೂಲಕ IPL ಟೂರ್ನಿಯಲ್ಲಿ ಹಾಫ್ ಸೆಂಚುರಿ ಸಿಡಿಸಿದ ಅತೀ ಕಿರಿಯ ಕ್ರಿಕೆಟಿಗ ಅನ್ನೋ ದಾಖಲೆ ಬರೆದರು. ಅಂತಿಮ ಎಸೆತದಲ್ಲಿ ರಿಯಾನ್ ಪರಾಗ್ ಔಟಾದರು. ಪರಾದ್ 50 ರನ್ ಸಿಡಿಸಿದರು. ಈ ಮೂಲಕ ರಾಜಸ್ಥಾನ 9 ವಿಕೆಟ್ ನಷ್ಟಕ್ಕೆ 115 ರನ್ ಸಿಡಿಸಿತು
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.