ಮಧ್ಯಂತರ ಬಜೆಟ್: ಕ್ರೀಡೆಗೆ 2216 ಕೋಟಿ ರುಪಾಯಿ ಮೀಸಲು

Published : Feb 02, 2019, 10:14 AM IST
ಮಧ್ಯಂತರ ಬಜೆಟ್: ಕ್ರೀಡೆಗೆ 2216 ಕೋಟಿ ರುಪಾಯಿ ಮೀಸಲು

ಸಾರಾಂಶ

ವಿತ್ತ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಮಧ್ಯಂತರ ಬಜೆಟ್ ಮಂಡಿಸಿದರು. ಈ ಬಾರಿ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ಕ್ಕೆ ಮೀಸಲಿಡುವ ಮೊತ್ತ, ರಾಷ್ಟ್ರೀಯ ಕ್ರೀಡಾಭಿವೃಧ್ಧಿ ನಿಧಿ (ಎನ್‌ಎಸ್‌ಡಿಎಫ್), ಕ್ರೀಡಾಪಟುಗಳಿಗೆ ನೀಡುವ ಪ್ರೋತ್ಸಾಹ ಧನದಲ್ಲಿ ಭಾರೀ ಏರಿಕೆಯಾಗಿದೆ.

ನವದೆಹಲಿ(ಫೆ.02): ಕೇಂದ್ರ ಸರ್ಕಾರ ಶುಕ್ರವಾರ ಮಧ್ಯಂತರ ಬಜೆಟ್‌ನಲ್ಲಿ ಕ್ರೀಡೆಗೆ ಹೆಚ್ಚುವರಿ ₹214.20 ಕೋಟಿ ನೆರವು ಘೋಷಿಸಿದೆ. ಕಳೆದ ವರ್ಷ ₹2002.72 ಕೋಟಿ ಹಂಚಿಕೆಯಾಗಿತ್ತು. 2019- 20ರ ಹಣಕಾಸು ವರ್ಷದಲ್ಲಿ ಕ್ರೀಡೆಗೆ ₹2216.92 ಕೋಟಿ ಮೀಸಲಿಡಲಾಗಿದೆ.

ಐಎಎಸ್ ಅಧಿಕಾರಿಗಳ ತರಬೇತಿಗೆ ಬಜೆಟ್ ಲ್ಲಿ ಭರ್ಜರಿ ಕೊಡುಗೆ

ವಿತ್ತ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಮಧ್ಯಂತರ ಬಜೆಟ್ ಮಂಡಿಸಿದರು. ಈ ಬಾರಿ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ಕ್ಕೆ ಮೀಸಲಿಡುವ ಮೊತ್ತ, ರಾಷ್ಟ್ರೀಯ ಕ್ರೀಡಾಭಿವೃಧ್ಧಿ ನಿಧಿ (ಎನ್‌ಎಸ್‌ಡಿಎಫ್), ಕ್ರೀಡಾಪಟುಗಳಿಗೆ ನೀಡುವ ಪ್ರೋತ್ಸಾಹ ಧನದಲ್ಲಿ ಭಾರೀ ಏರಿಕೆಯಾಗಿದೆ. ಸಾಯ್‌ಗೆ ಹೆಚ್ಚುವರಿ ₹55 ಕೋಟಿ ನೆರವು ಘೋಷಿಸಲಾಗಿದೆ. ಕಳೆದ ವರ್ಷ ₹395 ಕೋಟಿ ಹಂಚಿಕೆಯಾಗಿತ್ತು. ಆ ಮೊತ್ತವನ್ನು ಈ ಬಾರಿ ₹450 ಕೋಟಿಗೆ ಏರಿಕೆ ಮಾಡಲಾಗಿದೆ. ದೇಶದ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಶಿಬಿರಗಳು, ಕ್ರೀಡಾ ಪರಿಕರಗಳು ಹಾಗೂ ಇನ್ನಿತರ ಸೌಕರ್ಯಗಳನ್ನು ಸಾಯ್ ಪೂರೈಸಲಿದೆ.

ಐಪಿಎಲ್ 2019: ಇಲ್ಲಿದೆ RCB ತಂಡದ ಬೆಸ್ಟ್ ಪ್ಲೇಯಿಂಗ್ ಇಲೆವೆನ್ !

ಇದೇ ವೇಳೆ, ರಾಷ್ಟ್ರೀಯ ಕ್ರೀಡಾಭಿವೃದ್ಧಿ ನಿಧಿ ₹2 ಕೋಟಿಯಿಂದ ₹70 ಕೋಟಿಗೆ ಏರಿಕೆ ಮಾಡಲಾಗಿದೆ. ಕ್ರೀಡಾಪಟುಗಳ ಪ್ರೋತ್ಸಾಹಧನವನ್ನು ₹62 ಕೋಟಿಯಿಂದ ₹89 ಕೋಟಿಗೆ ಏರಿಸಲಾಗಿದೆ. ಕ್ರೀಡಾಪಟುಗಳಿಗೆ ಬಹುಮಾನ ಮೊತ್ತ ರೂಪದಲ್ಲಿ ನೀಡಲು ಹೆಚ್ಚುವರಿ ₹94.07 ಕೋಟಿ ನೆರವು ಘೋಷಿಸಲಾಗಿದೆ. ಬಹುಮಾನ ಮೊತ್ತಕ್ಕಾಗಿ ಕಳೆದ ವರ್ಷ ಹಂಚಿಕೆಯಾಗಿದ್ದ ₹316.93 ಕೋಟಿ ಮೊತ್ತ ಈ ವರ್ಷ ₹411 ಕೋಟಿಗೆ ಏರಿಕೆಯಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಖೇಲೋ ಇಂಡಿಯಾ ಕಿರಿಯರ ಕ್ರೀಡಾಕೂಟಕ್ಕೆ ₹550.69 ಕೋಟಿ ಬದಲಿಗೆ ಮುಂದಿನ ಆವೃತ್ತಿಯಿಂದ ₹601 ಕೋಟಿ ಮೀಸಲಿಡುವುದಾಗಿ ಘೋಷಿಸಲಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒಂದು ಕುಟುಂಬ, ಒಂದು ಅಕಾಡೆಮಿಯಿಂದ ಹಾಕಿ ವಿಶ್ವಕಪ್‌ನಲ್ಲಿ ಐವರು ಕಣಕ್ಕೆ! ಭಾರತ ಪರ ವಿಶ್ವಕಪ್ ಆಡಿದ ಮೊದಲ ತಾಯಿ-ಮಗ ಜೋಡಿ
ಹಾಕಿ ವಿಶ್ವಕಪ್‌ 2026: 1975ರ ಬಳಿಕ ಮತ್ತೊಂದು ವಿಶ್ವಕಪ್‌ ಮೇಲೆ ಭಾರತದ ಕಣ್ಣು; ಭಾರತ-ಪಾಕ್‌ ಪಂದ್ಯ ಯಾವಾಗ?