ಕಾರು ರ‍್ಯಾಲಿ ವೇಳೆ ಅರ್ಜುನ ಪ್ರಶಸ್ತಿ ವಿಜೇತ ಗೌರವ್ ಗಿಲ್ ಕಾರಿಗೆ ಸಿಕ್ಕಿ ಮೂವರು ಮೃತರಾದ ಧಾರುಣ ಘಟನೆ ಶನಿವಾರ ಸಂಭವಿಸಿದೆ. ಪರಿಣಾಮ ಮೋಟಾರ್ ರ‍್ಯಾಲಿಯನ್ನೇ ಸ್ಥಗಿತಗೊಳಿಸಲಾಗಿದೆ. ಈ ಕುರಿತಾದ ವರದಿ ಇಲ್ಲಿದೆ...
ಬಾರ್ಮರ್ (ಸೆ.22): ಭಾರತದ ಖ್ಯಾತ ಮೋಟಾರ್ ರ‍್ಯಾಲಿ ಚಾಂಪಿಯನ್ ಗೌರವ್ ಗಿಲ್ ಕಾರಿಗೆ ಅಡ್ಡ ಬಂದ ಮೂವರು ಸಾವನ್ನಪ್ಪಿದ ಘಟನೆ ಶನಿವಾರ ಇಲ್ಲಿ ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್ಶಿಪ್ ವೇಳೆ ಸಂಭವಿಸಿದೆ.
ದಕ್ಷಿಣ ಡೇರ್ ರ‍್ಯಾಲಿ: ಗೌರವ್ ಗಿಲ್ ಮಡಿಲಿಗೆ ಚಾಂಪಿಯನ್ ಪ್ರಶಸ್ತಿ!
ಮೋಟಾರ್‌ಸ್ಪೋಟ್ಸ್’ನಲ್ಲಿ ಅರ್ಜುನ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದ ಗಿಲ್ ಸಹ ಅಪಘಾತದಲ್ಲಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡರವನ್ನು ನರೇಂದ್ರ, ಪುಷ್ಪಾ ಹಾಗೂ ಇವರಿಬ್ಬರ ಮಗ ಜಿತೇಂದ್ರ ಎಂದು ಗುರುತಿಸಲಾಗಿದೆ.
ಕಮಿಷನರ್ ಸಾಹೇಬ್ರೇ... ಇದೇನಾ ಟ್ರಾಫಿಕ್ ಪೊಲೀಸಿಂಗ್ ಅಂದ್ರೆ?
ರ‍್ಯಾಲಿ ಕಾರಣ ರಸ್ತೆ ಬಂದ್ ಮಾಡಲಾಗಿತ್ತು. ಆದರೂ ಭದ್ರತಾ ಸಿಬ್ಬಂದಿ ಜತೆ ವಾಗ್ವಾದ ನಡೆಸಿ ದ್ವಿಚಕ್ರ ವಾಹನದಲ್ಲಿ ರಸ್ತೆಗಿಳಿದ ನರೇಂದ್ರ ಕುಟುಂಬ, 145 ಕಿ.ಮೀ ವೇಗದಲ್ಲಿ ಆಗಮಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಪ್ರಾಣ ಬಿಟ್ಟಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಘಟನೆಯಿಂದಾಗಿ ರ‍್ಯಾಲಿ ರದ್ದುಗೊಳಿಸಲಾಯಿತು.