ನವೆಂಬರ್‌ವರೆಗೆ ಧೋನಿಗೆ ವಿಶ್ರಾಂತಿ; ಬಾಂಗ್ಲಾ ಸರಣಿಗೂ ಅಲಭ್ಯ?

By Web Desk  |  First Published Sep 22, 2019, 2:52 PM IST

ಟೀಂ ಇಂಡಿಯಾ ಹಿರಿಯ ಕ್ರಿಕೆಟಿ ಎಂ.ಎಸ್.ಧೋನಿಯನ್ನು ಮತ್ತೆ ಮೈದಾನದಲ್ಲಿ ನೋಡಲು ಕಾತರರಾಗಿರುವ ಅಭಿಮಾನಿಗಳಿಗೆ ನಿರಾಸೆಯಾಗುವುದು ಖಚಿತ. ಕಾರಣ ಧೋನಿ ಮುಂಬರುವ ಬಾಂಗ್ಲಾದೇಶ ಹಾಗೂ ವಿಜಯ್ ಹಜಾರೆ ಟೂರ್ನಿಗೂ ಅಲಭ್ಯರಾಗಲಿದ್ದಾರೆ.


ರಾಂಚಿ(ಸೆ.22): ವಿಶ್ವಕಪ್ ಟೂರ್ನಿ ಬಳಿಕ  ಟೀಂ ಇಂಡಿಯಾದಿಂದ ದೂರ ಉಳಿದಿರುವ ಕ್ರಿಕೆಟಿಗ ಎಂ.ಎಸ್.ಧೋನಿ ಸದ್ಯ ನವೆಂಬರ್ ವರೆಗೆ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ. ವಿಶ್ವಕಪ್ ಟೂರ್ನಿ ಬಳಿಕ ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದ ಧೋನಿ, ತವರಿನ ಸೌತ್ ಆಫ್ರಿಕಾ ಸರಣಿಯಿಂದಲೂ ವಿಶ್ರಾಂತಿ ಪಡೆದಿದ್ದರು. ಇದೀಗ ಬಾಂಗ್ಲಾದೇಶ ವಿರುದ್ದದ ಟಿ20 ಸರಣಿಗೂ ಧೋನಿ ಗೈರಾಗಲಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ: ನೆಚ್ಚಿನ ಕ್ರಿಕೆಟಿಗನ ಹೆಸರು ಬಹಿರಂಗ ಪಡಿಸಿದ ಕಾಜಲ್ ಅಗರ್ವಾಲ್!

Tap to resize

Latest Videos

undefined

ವಿಶ್ವಕಪ್ ಟೂರ್ನಿ ಬಳಿಕ ಧೋನಿ ವಿದಾಯ ಹೇಳಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಆದರೆ ವಿದಾಯ ಗಾಸಿಪ್‌ಗೆ ತೆರೆ ಎಳೆದ ಧೋನಿ, ಭಾರತೀಯ ಸೇನೆ ಜೊತೆ ಸೇವೆ ಸಲ್ಲಿಸಲು ಕಾಶ್ಮೀರಕ್ಕೆ ತೆರಳಿದರು. ಈ ಮೂಲಕ ವಿಂಡೀಸ್ ಪ್ರವಾಸಕ್ಕೆ ಗೈರಾದರು. ಸದ್ಯ ನಡೆಯುತ್ತಿರುವ ಸೌತ್ ಆಫ್ರಿಕಾ ಸರಣಿಗೂ ಧೋನಿ ಅಲಭ್ಯ ಎಂದು ಖಚಿತಪಡಿಸಿದ್ದರು. ಇದೀಗ ಮುಂದಿನ ಬಾಂಗ್ಲಾದೇಶ ವಿರುದ್ದದ ಟಿ20 ಸರಣಿ ಹಾಗೂ ವಿಜಯ್ ಹಜಾರೆ ಟೂರ್ನಿಗೂ ಧೋನಿ ಲಭ್ಯವಿಲ್ಲ ಎಂದು ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿದೆ.

ಇದನ್ನೂ ಓದಿ: ಧೋನಿ IPL ಭವಿಷ್ಯ; CSK ಮಾಲೀಕ ಬಿಚ್ಚಿಟ್ಟ ಸೀಕ್ರೆಟ್!

ಭವಿಷ್ಯದಲ್ಲಿ ಖಾಯಂ ವಿಕೆಟ್ ಕೀಪರ್ ಸ್ಥಾನ ಭರ್ತಿ ಮಾಡಲು ರಿಷಬ್ ಪಂತ್‌ಗೆ ಹೆಚ್ಚಿನ ಅವಕಾಶ ನೀಡಬೇಕಿದೆ. ಈ ನಿಟ್ಟಿನಲ್ಲಿ ಧೋನಿಗೆ ಹೆಚ್ಚು ವಿಶ್ರಾಂತಿ ಮೋರೆ ಹೋಗಿದ್ದಾರೆ. ಯುವ ಕ್ರಿಕೆಟಿಗರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಬಿಸಿಸಿಐ ಕೂಡ ಧೋನಿ ನಿರ್ಧಾರವನ್ನು ಗೌರವಿಸಲಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಇದನ್ನೂ ಓದಿ: ಧೋನಿ ನಿವೃತ್ತಿ ಸುದ್ದಿ; BCCI ಆಯ್ಕೆ ಸಮಿತಿ ಸ್ಪಷ್ಟನೆ!

ಇತ್ತೀಚೆಗೆ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಭಾರಿ ಗೊಂದಲ ಸೃಷ್ಟಿಸಿತ್ತು. ಧೋನಿ ವಿದಾಯ ಹೇಳಲಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಸ್ವತಃ ವಿರಾಟ್ ಕೊಹ್ಲಿಯೇ ಈ ಕುರಿತು ಸ್ಪಷ್ಟನೆ ನೀಡಿದ್ದರು. ಇದೀಗ ಧೋನಿ  ಮತ್ತಷ್ಟು ವಿಶ್ರಾಂತಿ ಪಡೆದಿರುವುದು ವಿದಾಯಕ್ಕೆ ಸಜ್ಜಾಗುತ್ತಿದ್ದಾರೆ ಅನ್ನೋ ಮಾತುಗಳಿಗೆ ಪುಷ್ಠಿ ನೀಡುವಂತಿದೆ.

click me!