ಇಂಡೋ-ಆಸಿಸ್ ಟೆಸ್ಟ್: ಪರ್ತ್ ಪಂದ್ಯಕ್ಕೆ ಭಾರತ ತಂಡ ಪ್ರಕಟ!

By Web Desk  |  First Published Dec 13, 2018, 11:25 AM IST

ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಹಾಗಾದರೆ ಪರ್ತ್ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಸ್ಥಾನ ಪಡೆದ ಕ್ರಿಕೆಟಿಗರು ಯಾರು? ಇಲ್ಲಿದೆ ವಿವರ.


ಪರ್ತ್(ಡಿ.13): ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಇದೀಗ 2ನೇ ಪಂದ್ಯಕ್ಕೆ ಸಜ್ಜಾಗಿದೆ. ನಾಳೆ(ಡಿ.14)ಯಿಂದ ನಡೆಯಲಿರುವ 2ನೇ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ 13 ಸದಸ್ಯರ ತಂಡ ಪ್ರಕಟಸಿದೆ.

ಇದನ್ನೂ ಓದಿ: ಇನಿಂಗ್ಸ್‌ನಲ್ಲಿ 10 ವಿಕೆಟ್‌- ಕುಂಬ್ಳೆ ದಾಖಲೆ ಸರಿಗಟ್ಟಿದ ಮಣಿಪುರ ವೇಗಿ

Tap to resize

Latest Videos

ದ್ವಿತೀಯ ಟೆಸ್ಟ್ ಪಂದ್ಯದಿಂದ ರೋಹಿತ್ ಶರ್ಮಾಗೆ ಕೊಕ್ ನೀಡಲಾಗಿದೆ. ರೋಹಿತ್ ಬದಲು ಹನುಮಾ ವಿಹಾರಿಗೆ ಅವಕಾಶ ನೀಡಲಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಮಿಂಚಿದ ಆರ್ ಅಶ್ವಿನ್‌ಗೂ ವಿಶ್ರಾಂತಿ ನೀಡಲಾಗಿದೆ. ಆದರೆ ವೇಗಿ ಉಮೇಶ್ ಯಾದವ್ ಕೂಡ 13 ಮಂದಿ ಸದಸ್ಸರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: ರವಿ ಶಾಸ್ತ್ರಿ ಹಾಗೂ ಕೊಹ್ಲಿಗಾಗಿ ನಿಯಮ ಉಲ್ಲಂಘಿಸಿದ ಬಿಸಿಸಿಐ!

ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಹನುಮಾ ವಿಹಾರಿ, ರಿಷಬ್ ಪಂತ್, ರವಿಂದ್ರ ಜಡೇಜಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್

click me!