ಇನಿಂಗ್ಸ್‌ನಲ್ಲಿ 10 ವಿಕೆಟ್‌- ಕುಂಬ್ಳೆ ದಾಖಲೆ ಸರಿಗಟ್ಟಿದ ಮಣಿಪುರ ವೇಗಿ

By Web DeskFirst Published Dec 13, 2018, 10:01 AM IST
Highlights

ಬಿಸಿಸಿಐ ದೇಸಿ ಟೂರ್ನಿಯಲ್ಲಿ ಮಣಿಪುರ ವೇಗಿ ದಾಖಲೆ ಬರೆದಿದ್ದಾನೆ. ಈ ಮೂಲಕ ದಿಗ್ಗಜ ಅನಿಲ್ ಕುಂಬ್ಳೆ ದಾಖಲೆಯನ್ನ ಸರಿಗಟ್ಟಿದ್ದಾರೆ. ಇಲ್ಲಿದೆ ಯುವ ವೇಗಿಯ ಸಾಧನೆ ಇಲ್ಲಿದೆ.

ನವದೆಹಲಿ(ಡಿ.13): ಮಣಿಪುರದ ಎಡಗೈ ವೇಗಿ ರೆಕ್ಸ್‌ ರಾಜಕುಮಾರ್‌ ಸಿಂಗ್‌, ಅನಂತಪುರದ ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯವಾದ ಅಂಡರ್‌-19 ಕೂಚ್‌ ಬಿಹಾರ್‌ ಕ್ರಿಕೆಟ್‌ ಟೂರ್ನಿಯ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ, ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ. 

 

Video of the ten wicket by Rex Rajkumar Singh. https://t.co/T6ktrb9mjP

— J. (@CricCrazyJohns)

 

ಇದರೊಂದಿಗೆ ರೆಕ್ಸ್‌, ಭಾರತದ ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. 2ನೇ ಇನಿಂಗ್ಸ್‌ನಲ್ಲಿ ಅರುಣಾಚಲ ಪ್ರದೇಶ ಕೇವಲ 36 ರನ್‌ಗಳಿಗೆ ಆಲೌಟ್‌ ಆಯಿತು. 9.5 ಓವರ್‌ ಬೌಲಿಂಗ್‌ ಮಾಡಿದ ರೆಕ್ಸ್‌ 6 ಮೇಡನ್‌ ಸಹಿತ ಕೇವಲ 11 ರನ್‌ಗಳನ್ನು ನೀಡಿ 10 ವಿಕೆಟ್‌ ಪಡೆದರು.

click me!