
ನವದೆಹಲಿ(ಡಿ.13): ಜ.5 ರಿಂದ ಫೆ. 1 ರವರೆಗೆ ಯುಎಇಯಲ್ಲಿ ನಡೆಯಲಿರುವ ಎಎಫ್‌ಸಿ ಏಷ್ಯನ್ ಕಪ್ ಫುಟ್ಬಾಲ್ ಪಂದ್ಯಾವಳಿಗೆ 34 ಆಟಗಾರರ ಭಾರತ ಸಂಭವನೀಯ ತಂಡ ಪ್ರಕಟಗೊಂಡಿದೆ. ಇದರಲ್ಲಿ 18 ಅಂಡರ್-23 ಆಟಗಾರರು ಸಹ ಇದ್ದಾರೆ.
ಡಿ.16ರಿಂದ ನವದೆಹಲಿಯಲ್ಲಿ ಮೊದಲ ಹಂತದ ಅಭ್ಯಾಸ ಶಿಬಿರ ನಡೆಯಲಿದ್ದು, ಆ ಬಳಿಕ ಡಿ.20ರಿಂದ ಅಬು ಧಾಬಿಯಲ್ಲಿ 2ನೇ ಹಂತದ ಶಿಬಿರ ನಡೆಯಲಿದೆ. ಅದರಲ್ಲಿ 28 ಆಟಗಾರರು ಪಾಲ್ಗೊಳ್ಳಲಿದ್ದಾರೆ. 23 ಸದಸ್ಯರ ಅಂತಿಮ ತಂಡವನ್ನು ಪ್ರಕಟಿಸಲು ಡಿ.26 ಕೊನೆ ದಿನವಾಗಿದೆ. ಜ.6ರಂದು ಥಾಯ್ಲೆಂಡ್ ವಿರುದ್ಧ ಭಾರತ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.