
ಸಿಡ್ನಿ[ಜ.05]: ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್’ನಲ್ಲಿ ಟೀಂ ಇಂಡಿಯಾ ಮೂರನೇ ದಿನವೂ ಬಿಗಿ ಹಿಡಿತ ಸಾಧಿಸಿದೆ. ಸಿಡ್ನಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್’ನ ಮೂರನೇ ದಿನದಂತ್ಯಕ್ಕೆ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 236 ರನ್ ಬಾರಿಸಿದ್ದು, ಇನ್ನೂ 386 ರನ್’ಗಳ ಹಿನ್ನಡೆಯಲ್ಲಿದೆ.
ಒಂದು ಕಾಲದಲ್ಲಿ ಜಗತ್ತಿನ ಯಾವ ಮೂಲೆಯಲ್ಲಿ ಕ್ರಿಕೆಟ್ ಟೂರ್ನಿ ನಡೆದರೂ ಚಾಂಪಿಯನ್ ಆಗಿ ಹೊರಹೊಮ್ಮುತ್ತಿದ್ದ ಕಾಂಗರೂಗಳ ಪಡೆ ಇದೀಗ ತವರಿನಲ್ಲೂ ಗೆಲ್ಲಲೂ ತಡಕಾಡುತ್ತಿದೆ. ಏಕದಿನ ಕ್ರಿಕೆಟ್’ನಲ್ಲಿ 5 ಬಾರಿ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿರುವ ಆಸಿಸ್ ಇದೀಗ ಮೊದಲ ಬಾರಿಗೆ ತನ್ನ ನೆಲದಲ್ಲೇ ಭಾರತ ಎದುರು ಸರಣಿ ಸೋಲಿನತ್ತ ಮುಖ ಮಾಡಿದೆ.
ಮೂರನೇ ದಿನದಂತ್ಯದ ವೇಳೆಗೆ ಪೀಟರ್ ಹ್ಯಾಂಡ್ಸ್’ಕಂಬ್ 28 ಹಾಗೂ ಪ್ಯಾಟ್ ಕಮ್ಮಿನ್ಸ್ 25 ರನ್ ಬಾರಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕೊನೆಯ 15 ಓವರ್’ಗಳ ಆಟವನ್ನು ಮಳೆ ಬಲಿಪಡೆದಿದ್ದರಿಂದ ಆಸಿಸ್ ಆಲೌಟ್ ಭೀತಿಯಿಂದ ಪಾರಾಯಿತು. ಆಸ್ಟ್ರೇಲಿಯಾದ ಪ್ರತಿಭಾನ್ವಿತ ಬ್ಯಾಟ್ಸ್’ಮನ್ ಶಾನ್ ಮಾರ್ಷ್ ಸರಣಿಯುದ್ಧಕ್ಕೂ ಪದೇ-ಪದೇ ಫೇಲ್ ಆಗುತ್ತಿದ್ದು, ಇನ್ನೊಂದು ಅವಕಾಶ ಸಿಗಲಿ ಎಂದು ದೇವರ ಮೊರೆ ಹೋಗಿದ್ದಾರೆ ಅಭಿಮಾನಿಯೊಬ್ಬ ಕಾಲೆಳೆದಿದ್ದಾನೆ.
ಮೂರನೇ ದಿನದಾಟ ಕಂಡ ಟ್ವಿಟರಿಗರು ಏನಂದ್ರು ಅಂತ ನೀವೇ ಒಮ್ಮೆ ನೋಡಿಬಿಡಿ...
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.