
ಸಿಡ್ನಿ[ಜ.04]: ಟೀಂ ಇಂಡಿಯಾ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ಸಿಡ್ನಿ ಟೆಸ್ಟ್’ನಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಅಮ್ಮನ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್’ನ ಎರಡನೇ ದಿನ ಅಜೇಯ 159 ಸಿಡಿಸಿದ ಬಳಿಕ ಟ್ವೀಟ್ ಮಾಡಿದ 21 ವರ್ಷದ ಪಂತ್, 'ನನ್ನ ಸುಖ-ದುಃಖಗಳಲ್ಲಿ ಸದಾ ಜೊತೆ ನಿಲ್ಲುವ ಅಮ್ಮ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ನನ್ನೆಲ್ಲ ಒತ್ತಡಗಳನ್ನು ನಿಭಾಯಿಸುವ ನಿನಗೆ ಅನಂತ ವಂದನೆಗಳು. ನನ್ನ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. I Love You So much' ಎಂದು ಟ್ವೀಟ್ ಮೂಲಕ ಶುಭಕೋರಿದ್ದಾರೆ.
2019ರ ವರ್ಷವನ್ನು ಶತಕದೊಂದಿಗೆ ಆರಂಭಿಸಿರುವ ರಿಷಭ್ ಪಂತ್ ಸಿಡ್ನಿ ಟೆಸ್ಟ್’ನಲ್ಲಿ ಕೇವಲ 137 ಎಸೆತಗಳಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. ಅವರ ಅಮೋಘ ಇನ್ನಿಂಗ್ಸ್’ನಲ್ಲಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹ ಸೇರಿತ್ತು. 7ನೇ ವಿಕೆಟ್’ಗೆ ರವೀಂದ್ರ ಜಡೇಜಾ ಜತೆ 204 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 600ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ರವೀಂದ್ರ ಜಡೇಜಾ [81 ರನ್] ಔಟ್ ಆಗುತ್ತಿದ್ದಂತೆ ನಾಯಕ ವಿರಾಟ್ ಕೊಹ್ಲಿ 622 ರನ್’ಗಳಾಗಿದ್ದಾಗ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.