
ನವದೆಹಲಿ(ಆ.01): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ನಡುವಿನ ವೈಮನಸ್ಸು ಮತ್ತೊಮ್ಮೆ ಜಗಜ್ಜಾಹೀರಾಗಿದ್ದು, ರೋಹಿತ್ ಶರ್ಮಾ ಮಾಡಿದ ಒಂದು ಟ್ವೀಟ್ ಇದೀಗ ಭಾರತ ಕ್ರಿಕೆಟ್ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಕೊಹ್ಲಿ-ರೋಹಿತ್ ಕೋಲ್ಡ್ ವಾರ್; ಕೊನೆಗೂ ಸ್ಪಷ್ಟನೆ ನೀಡಿದ ನಾಯಕ!
'ನಾನು ದೇಶಕ್ಕಾಗಿ ಕಣಕ್ಕಿಳಿಯುತ್ತೇನೆಯೇ ಹೊರತು, ಕೇವಲ ತಂಡಕ್ಕಾಗಿ ಆಡುವುದಿಲ್ಲ' ಎಂದು ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು ಸುಮಾರು ಒಂದೂವರೆ ಲಕ್ಷ ಜನ ಲೈಕ್ ಮಾಡಿದ್ದಾರೆ. 2019ರ ವಿಶ್ವಕಪ್ ವೇಳೆಯಲ್ಲಿಯೇ ಕೊಹ್ಲಿ-ರೋಹಿತ್ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿವೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.
ವಿಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ಮೂರು ಕನ್ನಡಿಗರಿಗೆ ಸ್ಥಾನ
ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ್ದ ನಾಯಕ ಕೊಹ್ಲಿ ಈ ರೀತಿಯ ಗಾಳಿ ಸುದ್ದಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು. ನನ್ನ ಹಾಗೂ ರೋಹಿತ್ ನಡುವೆ ಭಿನ್ನಾಭಿಪ್ರಾಯಗಳಿವೆ ಎನ್ನುವುದು ಹಾಸ್ಯಾಸ್ಪದವಾದದ್ದು ಹಾಗೆಯೇ ಆದಾರರಹಿತವಾದದ್ದು ಎಂದು ಸ್ಪಷ್ಟನೆ ನೀಡಿದ್ದರು.
ಟೀಂ ಇಂಡಿಯಾ ವಿಂಡೀಸ್ ಪ್ರವಾಸ: ವೇಳಾಪಟ್ಟಿ ಪ್ರಕಟ
ಭಾರತ ತಂಡವು ಆಗಸ್ಟ್ 03ರಿಂದ ತನ್ನ ಅಭಿಯಾನ ಆರಂಭಿಸಲಿದ್ದು, ಮೂರು ಟಿ20, ಆ ಬಳಿಕ ಮೂರು ಏಕದಿನ ಮತ್ತು ಕೊನೆಯಲ್ಲಿ ಎರಡು ಟೆಸ್ಟ್ ಚಾಂಪಿಯನ್ಸ್‌ಶಿಪ್ ಪಂದ್ಯಗಳನ್ನಾಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.