ಭಜ್ಜಿಗಿಲ್ಲ ಖೇಲ್‌ ರತ್ನ: ಪಂಜಾಬ್‌ ಸರ್ಕಾರ ತನಿಖೆಗೆ ಆದೇಶ

By Web Desk  |  First Published Aug 1, 2019, 1:28 PM IST

ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಹೆಸರನ್ನು ಖೇಲಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡುವಲ್ಲಿ ರಾಜ್ಯ ಕ್ರೀಡಾ ಇಲಾಖೆ ವಿಳಂಬ ಮಾಡಿದ್ದರ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..


ಚಂಡೀಗಢ(ಆ.01): ಭಾರತ ಕ್ರಿಕೆಟ್‌ ತಂಡದ ಹಿರಿಯ ಆಟಗಾರ ಹರ್ಭಜನ್‌ ಸಿಂಗ್‌ ಹೆಸರನ್ನು ಪ್ರತಿಷ್ಠಿತ ಖೇಲ್‌ ರತ್ನ ಪ್ರಶಸ್ತಿಗೆ ಶಿಫಾರಸು ಮಾಡುವಲ್ಲಿ ರಾಜ್ಯ ಕ್ರೀಡಾ ಇಲಾಖೆ ವಿಳಂಬ ಮಾಡಿದ್ದರ ಕುರಿತು ತನಿಖೆ ನಡೆಸುವಂತೆ ಪಂಜಾಬ್‌ ಸರ್ಕಾರ ಆದೇಶಿಸಿದೆ.

ಚಂದ್ರಯಾನ್ 2 ಸಕ್ಸಸ್: ಪಾಕ್ ಕಾಲೆಳೆದ ಭಜ್ಜಿ

Tap to resize

Latest Videos

undefined

ತಡವಾಗಿ ಅರ್ಜಿ ಸಲ್ಲಿಸಿದ ಕಾರಣ, ಖೇಲ್‌ ರತ್ನ ಪ್ರಶಸ್ತಿಗೆ ಶಿಫಾರಸುಗೊಂಡ ಕ್ರೀಡಾಪಟುಗಳ ಪಟ್ಟಿಯಿಂದ ಹರ್ಭಜನ್‌ ಹೆಸರನ್ನು ಕೈಬಿಡಲಾಗಿತ್ತು. ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ತಮಗೆ ನ್ಯಾಯ ಕೊಡಿಸುವಂತೆ ಭಜ್ಜಿ, ಪಂಜಾಬ್‌ನ ಕ್ರೀಡಾ ಸಚಿವ ರಾಣಾ ಗುರ್ಮಿತ್‌ ಸಿಂಗ್‌ಗೆ ಮನವಿ ಸಲ್ಲಿಸಿದ್ದರು. ಸಚಿವರು ಬುಧವಾರ ಈ ಪ್ರಕರಣವನ್ನು ತನಿಖೆ ಮಾಡುವಂತೆ ಕ್ರೀಡಾ ನಿರ್ದೇಶಕರಿಗೆ ಆದೇಶಿಸಿದ್ದಾರೆ.

39 ವರ್ಷದ ಹರ್ಭಜನ್ ಸಿಂಗ್, ಭಾರತ ಪರ 103 ಟೆಸ್ಟ್ ಪಂದ್ಯಗಳನ್ನಾಡಿ 417 ವಿಕೆಟ್ ಕಬಳಿಸಿದ್ದಾರೆ. ಇನ್ನು 236 ಏಕದಿನ ಪಂದ್ಯಗಳನ್ನಾಡಿ 269 ವಿಕೆಟ್ ಕಬಳಿಸಿದ್ದಾರೆ. ಇನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಭಜ್ಜಿ 780 ವಿಕೆಟ್ ಪಡೆದು ಮಿಂಚಿದ್ದಾರೆ. ಅಲ್ಲದೇ 2007ರ ಟಿ20 ವಿಶ್ವಕಪ್ ಹಾಗೂ 2011ರ ಎಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು.

 

click me!