ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿ ವೇಳೆ ಹಾರ್ದಿಕ್ ಪಾಂಡ್ಯ, ಅಭಿಮಾನಿಯ ಕಷ್ಟಕ್ಕೆ ನೆರವಾಗಿದ್ದಾರೆ. ಪಾಂಡ್ಯ ಪ್ರದರ್ಶನ ನೋಡಲು ಆಗಮಿಸಿದ ಅಭಿಮಾನಿ ಅಪಘಾತಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದರು. ಈ ವಿಚಾರ ತಿಳಿದ ಪಾಂಡ್ಯ ಅಭಿಮಾನಿಗೆ ಎಲ್ಲಾ ನೆರವು ನೀಡಿದ್ದಾರೆ. ಪಾಂಡ್ಯ ಸಹಾಯಕ್ಕೆ ಅಭಿಮಾನಿ ಕುಟುಂಬಸ್ಥರು ಕೈಮುಗಿದು ಧನ್ಯವಾದ ಹೇಳಿದ್ದಾರೆ.
ಇಂದೋರ್(ಸೆ.26): ಟೀಂ ಇಂಡಿಯಾ ಕ್ರಿಕೆಟಿಗರು ವಿಶ್ವದೆಲ್ಲೆಡೆ ಅಬಿಮಾನಿಗಳಿದ್ದಾರೆ. ಆದರೆ ಭಾರತದಲ್ಲಿನ ಅಭಿಮಾನಿಗಳು ಕ್ರಿಕೆಟಿಗರನ್ನು ದೇವರಂತೆ ಕಾಣುತ್ತಾರೆ. ಅದರಲ್ಲೂ ಕೆಲ ಕ್ರಿಕೆಟಿಗರಿಗೆ ಕಟ್ಟಾ ಅಭಿಮಾನಿಗಳಿದ್ದಾರೆ. ಟೀಂ ಇಂಡಿಯಾ ಎಲ್ಲೇ ಪಂದ್ಯ ಆಡಿದರೂ ಈ ಅಭಿಮಾನಿಗಳು ಹಾಜರಿರುತ್ತಾರೆ. ಏಳು ಬೀಳುಗಳಲ್ಲಿ ನೆಚ್ಚಿನ ಕ್ರಿಕೆಟಿಗರಿಗೆ ಬೆಂಬಲ ಸೂಚಿಸುತ್ತಾರೆ. ಇವರಲ್ಲಿ ಸಚಿನ್ ತೆಂಡುಲ್ಕರ್ ಕಟ್ಟಾ ಅಭಿಮಾನಿ ಸುಧೀರ್ ಗೌತಮ್, ಧೋನಿ ಅಭಿಮಾನಿ ಸರ್ವಣ ಹರಿ, ಹಾರ್ದಿಕ್ ಪಾಂಡ್ಯ ಅಭಿಮಾನಿ ಮಕುಂದನ್ ಪ್ರಮುಖಕರು.
ಇದನ್ನೂ ಓದಿ: ರ‍್ಯಾಂಪ್ ಮೇಲೆ ಹಾರ್ದಿಕ್ ವಾಕ್; ರಣವೀರ್ ಸಂಗ ಎಂದ ಫ್ಯಾನ್ಸ್!
undefined
ಮುಕುಂದನ್ ಹಲವು ಬಾರಿ ಹಾರ್ದಿಕ್ ಪಾಂಡ್ಯನನ್ನು ಭೇಟಿಯಾಗಿದ್ದಾರೆ. ಹಾರ್ಜಿಕ್ ಪಾಂಡ್ಯ ಹೆಸರನ್ನು 16 ವಿವಿದ ಭಾಷೆಗಳಲ್ಲಿ ಟ್ಯಾಟ್ಯು ಹಾಕಿಸಿಕೊಂಡಿರುವ ಮುಕುಂದನ್, ಪಾಂಡ್ಯ ಎಲ್ಲಿ ಆಡಿದರೂ ಪ್ರತ್ಯಕ್ಷರಾಗುತ್ತಾರೆ. ಇದೀಗ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಆಟವನ್ನು ನೋಡಲು ಬಯಸಿದ್ದ ಮುಕುಂದನ್ ಅಪಘಾತಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದರು. ಈ ವಿಚಾರ ತಿಳಿದ ಪಾಂಡ್ಯ ತಕ್ಷಣವೇ ನೆರವಿಗೆ ಧಾವಿಸಿದ್ದಾರೆ.
ಇದನ್ನೂ ಓದಿ: ಪಾಂಡ್ಯ ಖರೀದಿಸಿದ 4 ಕೋಟಿ ಮೌಲ್ಯದ ನೂತನ ಕಾರಿನ ಮೈಲೇಜ್ 7 ಕಿ.ಮೀ
ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾದಿಂದ ವಿಶ್ರಾಂತಿ ಪಡೆದಿದ್ದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿಗೆ ಆಯ್ಕೆಯಾಗಿದ್ದರು. ಹಲವು ದಿನಗಳ ಬಳಿಕ ಪಾಂಡ್ಯನನ್ನು ಮೈದಾನದಲ್ಲಿ ನೋಡಲು ಬಯಿಸಿದ್ದ ಮುಕುಂದನ್, ಮೊದಲ ಟಿ20 ಪಂದ್ಯಕ್ಕಾಗಿ ಧರ್ಮಶಾಲಾಗೆ ತೆರಳಿದ್ದರು. ಮೂಲತಃ ಕೊಯಂಬತ್ತೂರಿನ ಮುಕುಂದನ್, ರಸ್ತೆ ಮಾರ್ಗವಾಗಿ ಧರ್ಮಶಾಲಾಗೆ ತೆರಳಲು ನಿರ್ಧರಿಸಿದ್ದರು.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಜೊತೆ ಸಂಬಂಧ; ಮೌನ ಮುರಿದ ಉರ್ವಶಿ ರೌಟೆಲಾ!
ಬರೋಬ್ಬರಿ 3000 ಕಿ.ಮೀ ದೂರದ ಪ್ರಯಾಣ ಆರಂಭಿಸಿದ ಮಕುಂದನ್, ಮಧ್ಯಪ್ರದೇಶದ ಜಬಲ್‌ಪುರ ಬಳಿ ಅಫಘಾತಕ್ಕೀಡಾದರು. ತಕ್ಷಣವೇ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದರು. ಹೀಗಾಗಿ ಪಕ್ಕದಲ್ಲೇ ಇದ್ದ ನರ್ಸಿಂಗ್ ಹೋಂಗೆ ಮಕುಂದನ್‌ನ್ನು ದಾಖಲಿಸಲಾಯಿತು. ಗಂಭೀರ ಗಾಯವಾಗಿದ್ದ ಕಾರಣ ವೈದ್ಯರು ಸರ್ಜರಿ ಮಾಡಲು ಸೂಚಿಸಿದ್ದಾರೆ.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಕೋಚ್ ಆಗಲು ಪಾಕ್ ಮಾಜಿ ಕ್ರಿಕೆಟಿಗನ ಬಯಕೆ!
ಅಷ್ಟರಲ್ಲೇ ಹಾರ್ದಿಕ್ ಪಾಂಡ್ಯ ಅಭಿಮಾನಿ ಅಪಘಾತಕ್ಕೀಡಾದ ಸುದ್ದಿ ಮಧ್ಯಪ್ರದೇಶ ಮಾಧ್ಯಗಳಲ್ಲಿ ವರದಿಯಾಯಿತು. ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿಯಲ್ಲಿ ಬ್ಯುಸಿಯಾಗಿದ್ದ ಹಾರ್ದಿಕ್ ಪಾಂಡ್ಯಗೂ ಅಭಿಮಾನಿ ಅಪಘಾತಕ್ಕೆ ತುತ್ತಾದ ವಿಚಾರ ತಿಳಿಯಿತು. ತಕ್ಷಣವೇ ನೆರವಿಗೆ ಧಾವಿಸಿದ ಪಾಂಡ್ಯ ಅಭಿಮಾನಿಗೆ ಸರ್ಜರಿ ಮಾಡಲು ಉತ್ತಮ ಆಸ್ಪತ್ರೆಗೆ ಸೂಚಿಸಿದರು. ಬಳಿಕ ಮಕುಂದನ್ ಚಿಕಿತ್ಸೆಯ ಎಲ್ಲಾ ವೆಚ್ಚವನ್ನು ಹಾರ್ಧಿಕ್ ಪಾಂಡ್ಯ ಭರಿಸಿದ್ದಾರೆ.
ಸೆ.21ಕ್ಕೆ ಮುಕುಂದನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಳಿಕ ಮಕುಂದನ್ ಹಾಗೂ ಕುಟುಂಬಸ್ಥರಿಗೆ ಕೊಯಂಬತ್ತೂರಿಗೆ ತೆರಳಲು ವಾಹನದ ವ್ಯವಸ್ಥೆಯನ್ನು ಹಾರ್ದಿಕ್ ಪಾಂಡ್ಯ ಮಾಡಿದ್ದಾರೆ. ಸದ್ಯ ಮಕುಂದನ್ ಚೇತರಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಪಾಂಡ್ಯ ನೆರವು ನೆನೆದು ಮಕುಂದನ್ ಹಾಗೂ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಪಾಂಡ್ಯ ಸಹಾಯಕ್ಕೆ ಧನ್ಯವಾದ ಹೇಳಲು ನಮ್ಮಲ್ಲಿ ಪದಗಳೇ ಇಲ್ಲ ಎಂದಿದ್ದಾರೆ.