ವಿಶ್ವಕಪ್ ಟೂರ್ನಿ ಬಲಿಕ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ. ವಿಂಡೀಸ್ ಪ್ರವಾಸ, ಸೌತ್ ಆಫ್ರಿಕಾ ವಿರುದ್ದದ ಸರಣಿ, ವಿಜಯ್ ಹಜಾರೆ ಟೂರ್ನಿ ಸೇರಿದಂತೆ ಯಾವ ಸರಣಿಯಲ್ಲೂ ಧೋನಿ ಪಾಲ್ಗೊಂಡಿಲ್ಲ. ಇದೀಗ ಧೋನಿ ಅಲಭ್ಯತೆಗೆ ಕಾರಣ ಬಹಿರಂಗವಾಗಿದೆ.
ರಾಂಚಿ(ಸೆ.26): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ವಿಶ್ವಕಪ್ ಟೂರ್ನಿ ಬಳಿಕ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಇದೀಗ ನವೆಂಬರ್ ವರೆಗೂ ಧೋನಿ ಅಲಭ್ಯ ಅನ್ನೋ ಮಾಹಿತಿ ಹೊರಬಿದ್ದಿದೆ. ಧೋನಿ ಅಲಭ್ಯತೆಗೆ ಕಾರಣ ನಿಗೂಢವಾಗಿತ್ತು. ಇದೀಗ ಟೀಂ ಇಂಡಿಯಾದಿಂದ ದೂರ ಉಳಿಯಲು ಕಾರಣ ಬಹಿರಂಗ ವಾಗಿದೆ.
ಇದನ್ನೂ ಓದಿ: ಜನಮೆಚ್ಚಿದ ನಾಯಕರ ಸಮೀಕ್ಷೆ; ನಂ.1 ಮೋದಿ, ನಂತ್ರ ಧೋನಿ!
ಎಂ.ಎಸ್.ಧೋನಿ ಬೆನ್ನು ನೋವಿನ ಸಮಸ್ಯೆಯಿಂದ ಬಳಸುತ್ತಿದ್ದಾರೆ. ಜೊತೆಗೆ ಮಣಿಕಟ್ಟು ನೋವು ಕೂಡ ಕಾಣಿಸಿಕೊಂಡಿದೆ. ಕಳೆದ ಐಪಿಎಲ್ ಟೂರ್ನಿ ವೇಳೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಪಂದ್ಯದ ನಡುವೆ ತುರ್ತು ಚಿಕಿತ್ಸೆ ಪಡೆದಿದ್ದ ಧೋನಿಗೆ ವಿಶ್ವಕಪ್ ಟೂರ್ನಿಯಲ್ಲೂ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಧೋನಿ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ: ಧೋನಿ ನಿವೃತ್ತಿ ಒತ್ತಡ; ಯುವರಾಜ್ ಸಿಂಗ್ ಪ್ರತಿಕ್ರಿಯೆಗೆ ಎಲ್ಲರೂ ಗಪ್‌ಚುಪ್!
ಧೋನಿಗೆ ಬೆನ್ನು ನೋವು ಅನ್ನೋ ಸುದ್ದಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಧೋನಿಯನ್ನು ಮತ್ತೆ ಮೈದಾನದಲ್ಲಿ ನೋಡಲು ಬಯಸಿದ್ದ ಅಭಿಮಾನಿಗಳು ಇಂಜುರಿಯಿಂದ ಧೋನಿ ಕ್ರಿಕೆಟ್‌ಗೆ ಗುಡ್ ಬೈ ಹೇಳಲಿದ್ದಾರೆ ಅನ್ನೋ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಧೋನಿ ಇಂಜುರಿ ಕುರಿತು ಬಿಸಿಸಿಐ ಅಧಿಕೃತ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: ನವೆಂಬರ್‌ವರೆಗೆ ಧೋನಿಗೆ ವಿಶ್ರಾಂತಿ; ಬಾಂಗ್ಲಾ ಸರಣಿಗೂ ಅಲಭ್ಯ?
IPL ಟೂರ್ನಿಯಲ್ಲಿ ಧೋನಿ ಬೆನ್ನು ನೋವಿನ ಕಾರಣದಿಂದ ಒಂದು ಪಂದ್ಯದಿಂದ ಹೊರಗುಳಿದಿದ್ದರು. ಈ ಪಂದ್ಯದಲ್ಲಿ ಸುರೇಶ್ ರೈನಾ ತಂಡವನ್ನು ಮುನ್ನಡೆಸಿದ್ದರು. ಇದೇ ಕಾರಣದಿಂದ ಧೋನಿ ಕ್ರಿಕೆಟ್‌ನಿಂದ ವಿಶ್ರಾಂತಿಗೆ ಜಾರಿದ್ದಾರೆ.
ಇದನ್ನೂ ಓದಿ: ಧೋನಿ IPL ಭವಿಷ್ಯ; CSK ಮಾಲೀಕ ಬಿಚ್ಚಿಟ್ಟ ಸೀಕ್ರೆಟ್!
ವಿಶ್ವಕಪ್ ಟೂರ್ನಿ ಬಳಿಕ ಧೋನಿ, ವೆಸ್ಟ್ ಇಂಡೀಸ್ ಪ್ರವಾಸಕ್ಕೈ ಗೈರಾಗಿದ್ದರು. ಈ ವೇಳೆ ಭಾರತೀಯ ಸೇನೆ ಜೊತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಸೌತ್ ಆಫ್ರಿಕಾ ವಿರುದ್ಧದ ಸರಣಿಯಿಂದಲೂ ಧೋನಿ ಹಿಂದೆ ಸರಿದ್ದರು. ಮುಂಬರುವ ಬಾಂಗ್ಲಾದೇಶ ವಿರುದ್ದಧ ಟಿ20 ಸರಣಿ ಹಾಗೂ ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟೂರ್ನಿಗೂ ಧೋನಿ ಲಭ್ಯರಿಲ್ಲ.
ಇದನ್ನೂ ಓದಿ: ಟ್ವೀಟ್ ಮಾಡೋವಾಗ ಇನ್ಮೇಲೆ ಯೋಚನೆ ಮಾಡ್ತಿನಿ ಕೊಹ್ಲಿ!
ಧೋನಿ ಅಲಭ್ಯರಾಗುತ್ತಿದ್ದಂತೆ ವಿದಾಯ ಹೇಳಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಇತ್ತ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮೂಲಕ ಧೋನಿಗೆ ಟ್ರಿಬ್ಯೂಟ್ ಸಲ್ಲಿಸಿದ್ದರು. ಇದನ್ನೇ ತಪ್ಪಾಗಿ ಅರ್ಥೈಸಿ ಧೋನಿ ವಿದಾಯಕ್ಕೆ ಸಜ್ಜಾಗಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು. ಕೊನೆಗೆ ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ್ದರು. ಇದೇ ವೇಳೆ ಮಾಜಿ ಕ್ರಿಕೆಟಿಗರರು ಸೇರಿದಂತೆ ಹಲವು ಕ್ರಿಕೆಟ್ ಪಂಡಿತರು ಧೋನಿ ವಿದಾಯಕ್ಕೆ ಒತ್ತಡ ಹೇರಿದ್ದರು. ಆದರೆ ಧೋನಿ ವಿಶ್ವಕಪ್ ಟೂರ್ನಿ ಬಳಿಕ ಭಾರತೀಯ ಸೇನೆಗೆ ಬಿಟ್ಟರೆ ಇನ್ಯಾರ ಕೈಗೂ ಸಿಕ್ಕಿಲ್ಲ.