ವಿಶ್ವ ಸ್ನೂಕರ್ ತಂಡದ ವಿಭಾಗದಲ್ಲಿ ಪಂಕಜ್ ಅಡ್ವಾಣಿ ಹಾಗೂ ಆದಿತ್ಯ ಮೆಹ್ತಾ ಜೋಡಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಮಾಂಡಲೇ(ಸೆ.26): ಭಾರತದ ತಾರಾ ಸ್ನೂಕರ್ ಪಟು ಪಂಕಜ್ ಅಡ್ವಾಣಿ ಹಾಗೂ ಆದಿತ್ಯ ಮೆಹ್ತಾ ಜೋಡಿ, ಬುಧವಾರ ಮುಕ್ತಾಯವಾದ ಐಬಿಎಸ್‌ಎಫ್ ವಿಶ್ವ ಸ್ನೂಕರ್ ತಂಡಗಳ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಂಕಜ್ 23ನೇ ವಿಶ್ವ ಕಿರೀಟ ಗೆದ್ದ ಸಾಧನೆ ಮಾಡಿದ್ದಾರೆ.
ಪಂಕಜ್ ಅಡ್ವಾಣಿಗೆ ಪ್ರಧಾನಿ ಮೋದಿ ಅಭಿನಂದನೆ...
IBSF World Team Snooker Champions 🏆 Huge congrats to my teammate for a fantastic performance and your maiden World Title 👏🙌 Thrilled to have our hands on this trophy 😀😀 pic.twitter.com/dSOb8MXF9u
— Pankaj Advani (@PankajAdvani247)ಈ ಪ್ರಶಸ್ತಿಯೊಂದಿಗೆ ಐಬಿಎಸ್ಎಫ್ನ ಎಲ್ಲಾ ವಿಭಾಗಗಳಲ್ಲೂ ವಿಶ್ವ ಚಾಂಪಿಯನ್ ಆದ ಸಾಧನೆಯನ್ನು ಪಂಕಜ್ ಮಾಡಿದ್ದಾರೆ. ಕಳೆದ ವಾರವಷ್ಟೇ ಅವರು ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ಗೆದ್ದಿದ್ದರು.
ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಶಿಪ್: ಪಂಕಜ್‌ಗೆ 22ನೇ ವಿಶ್ವ ಕಿರೀಟ!
ರೋಚಕತೆಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಭಾರತ 1 ತಂಡ, ಥಾಯ್ಲೆಂಡ್ 2 ತಂಡದ ವಿರುದ್ಧ 5-2 ಫ್ರೇಮ್ಗಳಲ್ಲಿ (65-31, 9-69, 74-8, 21-64, 55-44, 72-23, 83-9) ಜಯ ಗಳಿಸಿತು. ಅಕ್ಟೋಬರ್ನಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ನಲ್ಲಿ ಅಡ್ವಾಣಿ ಪಾಲ್ಗೊಳ್ಳಲಿದ್ದಾರೆ.