ಚೆನ್ನೈ(ಸೆ.17): ಟೀಂ ಇಂಡಿಯಾ ಆಫ್ ಸ್ಪಿನ್ನರ್ ಆರ್ ಅಶ್ವಿನ್‌ಗೆ ಹುಟ್ಟು ಹಬ್ಬದ ಸಂಭ್ರಮ. 33ನೇ ವಸಂತಕ್ಕೆ ಕಾಲಿಟ್ಟಿರುವ ಆರ್ ಅಶ್ವಿನ್, ಭಾರತ ಕಂಡ ಅತ್ಯಂತ ಶ್ರೇಷ್ಠ ಸ್ಪಿನ್ನರ್. ಸೆ.17, 1986ರಲ್ಲಿ ಹುಟ್ಟಿದ ಅಶ್ವಿನ್, ಸದ್ಯ ಟೀಂ ಇಂಡಿಯಾ ಟೆಸ್ಟ್ ತಂಡದ ಪ್ರಮುಖ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಜೊತೆಗೆ ಮುನಿಸು; ಟೀಕೆಗೆ ಆರ್ ಅಶ್ವಿನ್ ತಿರುಗೇಟು!
ಬಿ.ಟೆಕ್ ಎಂಜಿನಿಯರಿಂಗ್ ಪದವಿ ಪಡೆದಿರುವ ಆರ್ ಅಶ್ವಿನ್, ಎಂಜಿನೀಯರ್ ಬದಲು ಕ್ರಿಕೆಟ್ ಆಯ್ಕೆ ಮಾಡಿಕೊಂಡರು. ಕಠಿಣ ಪ್ರಯತ್ನ, ನಿರಂತರ ಅಭ್ಯಾಸದಿಂದ ಅಶ್ವಿನ್ ಭಾರತದ ತಂಡದ ಯಶಸ್ವಿ ಕ್ರಿಕೆಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸ್ಪಿನ್ ಮೋಡಿ ಮೂಲಕ ಹಲವು ದಾಖಲೆ ಬರೆದಿರುವ ಆರ್ ಅಶ್ವಿನ್‌ಗೆ ಕ್ರಿಕೆಟಿಗರು ಶುಭಹಾರೈಸಿದ್ದಾರೆ.
ಇದನ್ನೂ ಓದಿ: ವಿಚಿತ್ರ ಬೌಲಿಂಗ್ ಶೈಲಿಯಿಂದ ವಿಕೆಟ್ ಕಿತ್ತ ಅಶ್ವಿನ್
ಅಕ್ಟೋಬರ್ 2 ರಿಂದ ಆರಂಭಗೊಳ್ಳಲಿರುವ ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ ಕಣಕ್ಕಿಳಿಯಲಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆರ್ ಅಶ್ವಿನ್ ಆಯ್ಕೆಯಾಗಿದ್ದರೂ, ಎರಡೂ ಟೆಸ್ಟ್ ಪಂದ್ಯದಲ್ಲಿ ಆಡೋ ಅವಕಾಶ ಸಿಕ್ಕಿರಲಿಲ್ಲ. ಇದೀಗ ತವರಿನಲ್ಲಿ ಅಶ್ವಿನ್‌ಗೆ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಿವೆ.
2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಆರ್ ಅಶ್ವಿನ್, ಟೆಸ್ಟ್, ಏಕದಿನ ಹಾಗೂ ಟಿ20 ಮೂರು ಮಾದರಿಯಲ್ಲಿ ಮಿಂಚಿದ್ದಾರೆ.
ಆರ್ ಅಶ್ವಿನ್ 65 ಟೆಸ್ಟ್ ಪಂದ್ಯದಲ್ಲಿ 342 ವಿಕೆಟ್ ಕಬಳಿಸಿರುವ ಅಶ್ವಿನ್, ಏಕದಿನದಲ್ಲಿ 150 ಹಾಗೂ ಟಿ20ಯಲ್ಲಿ 52 ವಿಕೆಟ್ ಕಬಳಿಸಿದ್ದಾರೆ.
ಟೆಸ್ಟ್ ಮಾದರಿಯಲ್ಲಿ ಆರ್ ಅಶ್ವಿನ್ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿಯೂ ಗುರುತಿಸಿಕೊಂಡಿದ್ದಾರೆ. 4 ಸೆಂಚುರಿ ಸಿಡಿಸೋ ಮೂಲಕ ದಾಖಲೆ ಬರೆದಿದ್ದಾರೆ.
ಆರ್ ಅಶ್ವಿನ್ ದಾಖಲೆ:
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.