ICC World Cup 2019; ವೀಕ್ಷಣೆಯಲ್ಲಿ ದಾಖಲೆ ಬರೆದ ಟೂರ್ನಿ!

By Web DeskFirst Published Sep 17, 2019, 10:49 AM IST
Highlights

2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿ ತವರಿಗೆ ವಾಪಾಸ್ಸಾಗಿತ್ತು. ಆದರೆ ಈ ಟೂರ್ನಿ ಅತ್ಯಂತ ಯಶಸ್ವಿ ಟೂರ್ನಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ವೀಕ್ಷಕರ ಸಂಖ್ಯೆಯಲ್ಲಿ 2019ರ ಟೂರ್ನಿ ದಾಖಲೆ ಬರೆದಿದೆ. ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಕೂಡ ದಾಖಲೆ ಬರೆದಿದೆ. 
 

ದುಬೈ(ಸೆ.17) : ಇಂಗ್ಲೆಂಡ್‌ನಲ್ಲಿ ನಡೆದಿದ್ದ 2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌, ಅತಿಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಐಸಿಸಿ ಟೂರ್ನಿ ಎನಿಸಿಕೊಂಡಿದೆ. ವಿಶ್ವಕಪ್‌ ನೇರಪ್ರಸಾರವನ್ನು ವಿಶ್ವದೆಲ್ಲೆಡೆಯಿಂದ 160 ಕೋಟಿ ಜನ ವೀಕ್ಷಿಸಿದ್ದಾರೆ. 

ಇದನ್ನೂ ಓದಿ: ಕ್ರಿಕೆಟ್ ಮುಖ್ಯಸ್ಥನಿಗೆ ಜೀವ ಬೆದರಿಕೆ; 2011ರ ವಿಶ್ವಕಪ್ ತಂಡದ ಕ್ರಿಕೆಟಿಗನ ಮೇಲೆ ಆರೋಪ!

‘ಜಾಗತಿಕ ಮಟ್ಟದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್‌ ಪಂದ್ಯ ಅತಿಹೆಚ್ಚು ವೀಕ್ಷಣೆಗೆ ಒಳಗಾಗಿತ್ತು. 27.3 ಕೋಟಿ ಟೀವಿ ನೇರಪ್ರಸಾರ ಹಾಗೂ 5 ಕೋಟಿ ಜನ ಡಿಜಿಟಲ್‌ ನೇರಪ್ರಸಾರ ವೀಕ್ಷಿಸಿದ್ದರು’ ಎಂದು ಐಸಿಸಿ ತಿಳಿಸಿದೆ. ಡಿಜಿಟಲ್‌ ವೀಕ್ಷಣೆಯಲ್ಲಿ ಭಾರತ ನಂ.1 ಆಗಿ ಹೊರಹೊಮ್ಮಿತು. ‘ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ ವಿಶ್ವಕಪ್‌ ಸೆಮಿಫೈನಲ್‌ನ ಹಾಟ್‌ಸ್ಟಾರ್‌ ನೇರಪ್ರಸಾರ 2.53 ಕೋಟಿ ಜನ ವೀಕ್ಷಿಸಿದ್ದರು’ ಎಂದು ಐಸಿಸಿ ಮಾಧ್ಯಮ ವರದಿ ತಿಳಿಸಿದೆ. 

ಇದನ್ನೂ ಓದಿ: 2020ರ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಮುಂದಿರುವ ಸವಾಲುಗಳೇನು..?

25 ಅಧಿಕೃತ ವಾಹಿ​ನಿ​ಗ​ಳು 200ಕ್ಕೂ ಹೆಚ್ಚು ದೇಶ​ಗ​ಳಲ್ಲಿ ವಿಶ್ವ​ಕಪ್‌ ಪ್ರಸಾರ ಮಾಡಿ​ದ್ದವು. 2015ರ ಆವೃತ್ತಿಗೆ ಹೋಲಿ​ಸಿ​ದರೆ ಈ ವರ್ಷ ವೀಕ್ಷ​ಕರ ಸಂಖ್ಯೆಯಲ್ಲಿ ಶೇ.38ರಷ್ಟುಏರಿಕೆಯಾಗಿದೆ ಎಂದು ಸಮೀಕ್ಷೆ ಮೂಲಕ ತಿಳಿದು ಬಂದಿದೆ.
 

click me!