ಬಿಲಿಯಾರ್ಡ್ಸ್ ದಿಗ್ಗಜ ಪಂಕಜ್ ಅಡ್ವಾಣಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. 22ನೇ ಚಾಂಪಿಯನ್‌ಶಿಪ್ ಗೆದ್ದ ಪಂಕಜ್ ಅಡ್ವಾಣಿಗೆ ಇದೀಗ ದೇಶವೇ ಅಭಿನಂದನೆ ಸಲ್ಲಿಸುತ್ತಿದೆ.
ನವದೆಹಲಿ(ಸೆ.17) : ಬಿಲಿಯಾರ್ಡ್ಸ್ ದಿಗ್ಗಜ ಎಂದು ಗುರುತಿಸಿಕೊಂಡಿರುವ ಭಾರತದ ಪಂಕಜ್ ಅಡ್ವಾಣಿ ಇದೀಗ ವಿಶ್ವ ಬಿಲಿಯಾರ್ಡ್ಸ್ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ 22ನೇ ವಿಶ್ವ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಟ್ರೋಫಿ ಗೆದ್ದ ಅಡ್ವಾಣಿಯನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
Congratulations ! The entire nation is proud of your accomplishments. Your tenacity is admirable. Best wishes for your future endeavours. https://t.co/OVjkL2HIFy
— Narendra Modi (@narendramodi)ಇದನ್ನೂ ಓದಿ: ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್: ಪಂಕಜ್‌ಗೆ 22ನೇ ವಿಶ್ವ ಕಿರೀಟ!
‘ಪಂಕಜ್ ಅಡ್ವಾಣಿಗೆ ಅಭಿನಂದನೆಗಳು. ದೇಶವೇ ನಿಮ್ಮ ಸಾಧನೆಗೆ ಹೆಮ್ಮೆಪಡುತ್ತದೆ. ನಿಮ್ಮ ಸ್ಥಿರತೆ ಶ್ಲಾಘನೀಯ, ನಿಮ್ಮ ಭವಿಷ್ಯಕ್ಕೆ ಶುಭಹಾರೈಸುತ್ತೇನೆ’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸಹ ಪಂಕಜ್‌ಗೆ ಟ್ವೀಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.