
ಲಾಹೋರ್[ಸೆ.05]: ಮಾಜಿ ನಾಯಕ ಮಿಸ್ಬಾ ಉಲ್ ಹಕ್, ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹಾಗೂ ಆಯ್ಕೆಗಾರರನ್ನಾಗಿ ನೇಮಕಗೊಂಡಿದ್ದಾರೆ. ಅಚ್ಚರಿ ಎಂದರೆ ಮಿಸ್ಬಾ ತಂಡದ ನಾಯಕರಾಗಿದ್ದಾಗ ಕೋಚ್ ಆಗಿದ್ದ ಮಾಜಿ ವೇಗಿ, ವಖಾರ್ ಯೂನಿಸ್ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಮಿಸ್ಬಾ ಉಲ್ ಹಕ್ ಕೋಚ್?
ಮಿಸ್ಬಾ ಅಡಿಯಲ್ಲಿ ವಖಾರ್ ಕಾರ್ಯನಿರ್ವಹಿಸಲಿದ್ದು, ಕ್ರಿಕೆಟ್ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇಬ್ಬರಿಗೂ 3 ವರ್ಷಗಳ ಗುತ್ತಿಗೆ ನೀಡಲಾಗಿದೆ. ಏಕದಿನ ವಿಶ್ವಕಪ್ನಲ್ಲಿ ತಂಡ ಕಳಪೆ ಪ್ರದರ್ಶನ ತೋರಿದ ಕಾರಣ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಕೋಚಿಂಗ್ ಸಿಬ್ಬಂದಿಯನ್ನು ವಜಾಗೊಳಿಸಿತ್ತು. ಇನ್ನು ಆಯ್ಕೆಗೂ ಮುನ್ನ ಮಾಜಿ ಕ್ರಿಕೆಟಿಗರು ಮಿಸ್ಬಾ ಅವರನ್ನು ಕೋಚ್ ಆಗಿ ನೇಮಿಸಬಾರದು ಎಂದು ವಿರೋಧ ವ್ಯಕ್ತಪಡಿಸಿದ್ದರು.
ಪಾಕ್ ತಂಡಕ್ಕೆ ಮಿಸ್ಬಾ ಡಿಫೆನ್ಸ್ ಬೇಡ; ಕೊಹ್ಲಿ ನಿರ್ಭೀತತೆ ಬೇಕು: ರಮೀಝ್ ರಾಜ!
ಇಂಗ್ಲೆಂಡ್’ನಲ್ಲಿ ನಡೆದ 2019ರ ಏಕದಿನ ವಿಶ್ವಕಪ್ ವೇಳೆ ಪಾಕಿಸ್ತಾನ ತಂಡ ಸಮಿಫೈನಲ್ ಪ್ರವೇಶಿಸಲು ವಿಫಲವಾಗಿತ್ತು. ಹೀಗಾಗಿ ಪಾಕ್ ಕೋಚ್ ಮಿಕಿ ಅರ್ಥರ್ ಅವರ ತಲೆದಂಡವಾಗಿತ್ತು. ಇನ್ನು ಪಾಕಿಸ್ತಾನ ಪರ 75 ಟೆಸ್ಟ್ ಹಾಗೂ 162 ಏಕದಿನ ಪಂದ್ಯಗಳನ್ನಾಡಿರುವ ಮಿಸ್ಬಾ ಒಟ್ಟು 10,300ಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಇದರ ಜತೆಗೆ 56 ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ ಅನುಭವವೂ ಇದೆ.
ನಾನು ಮತ್ತೊಮ್ಮೆ ಅನುಭವಿ ವಖಾರ್ ಅವರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದಾನೆ. ನನ್ನನ್ನು ಕೋಚ್ ಆಗಿ ನೇಮಕ ಮಾಡಿದ್ದಕ್ಕೆ ಪಾಕ್ ಕ್ರಿಕೆಟ್ ಮಂಡಳಿಗೆ ಆಭಾರಿಯಾಗಿದ್ದೇನೆ. ಉತ್ತಮ ತಂಡ ಕಟ್ಟಲು ಶ್ರಮಿಸುತ್ತೇನೆ ಎಂದು ಮಿಸ್ಬಾ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.