ಯುಎಸ್ ಓಪನ್ ಟೂರ್ನಿಯಲ್ಲಿ ಆಘಾತಕಾರಿ ಫಲಿತಾಂಶವೊಂದು ಹೊರಬಿದ್ದಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ಎಂದು ಗುರುತಿಸಿಕೊಂಡಿದ್ದ ಸ್ವಿಸ್ ಟೆನಿಸಿಗ ರೋಜರ್ ಫೆಡರರ್ ಅನಿರೀಕ್ಷಿತ ಸೋಲು ಕಾಣುವುದರ ಮೂಲಕ ತಮ್ಮ ಅಭಿಯಾನ ಮುಗಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನ್ಯೂಯಾರ್ಕ್[ಸೆ.05]: 20 ಗ್ರ್ಯಾಂಡ್‌ಸ್ಲಾಂಗಳ ಒಡೆಯ ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್, ಯುಎಸ್ ಓಪನ್ ಟೆನಿಸ್ ಗ್ರ್ಯಾಂಡ್‌ಸ್ಲಾಂನಿಂದ ಹೊರಬಿದ್ದಿದ್ದಾರೆ. ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಫೆಡರರ್, ವಿಶ್ವ ನಂ.78, ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೊವ್ ವಿರುದ್ಧ 6-3, 4-6, 6-3, 4-6, 2-6 ಸೆಟ್‌ಗಳಲ್ಲಿ ಅಚ್ಚರಿಯ ಸೋಲುಂಡರು.
28 ವರ್ಷಗಳಲ್ಲಿ ಯುಎಸ್ ಓಪನ್ ಸೆಮಿಫೈನಲ್ ಪ್ರವೇಶಿಸಿದ ಅತ್ಯಂತ ಕಡಿಮೆ ರ‍್ಯಾಂಕಿಂಗ್ ಹೊಂದಿರುವ ಆಟಗಾರ ಎನ್ನುವ ದಾಖಲೆ ಬರೆದಿರುವ ಡಿಮಿಟ್ರೊವ್, ಫೈನಲ್‌ನಲ್ಲಿ ಸ್ಥಾನಕ್ಕಾಗಿ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ವಿರುದ್ಧ ಸೆಣಸಲಿದ್ದಾರೆ.
undefined
US ಓಪನ್ 2019: ಕ್ವಾರ್ಟರ್‌ಗೆ ನಡಾಲ್ ಲಗ್ಗೆ
ಈ ಪಂದ್ಯಕ್ಕೂ ಮುನ್ನ ಫೆಡರರ್ ವಿರುದ್ಧ ಆಡಿದ್ದ ಎಲ್ಲಾ 7 ಪಂದ್ಯಗಳಲ್ಲಿ ಸೋಲುಂಡಿದ್ದ ಡಿಮಿಟ್ರೊವ್, ಟೆನಿಸ್ ಮಾಂತ್ರಿಕನ ವಿರುದ್ಧ ಮೊದಲ ಗೆಲುವು ದಾಖಲಿಸಿ ಚೊಚ್ಚಲ ಬಾರಿಗೆ ಯುಎಸ್ ಓಪನ್ ಸೆಮೀಸ್ಗೇರಿದರು. ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ವಿಜರ್‌ಲೆಂಡ್‌ನ ಸ್ಟ್ಯಾನಿಸ್ಲಾಸ್ ವಾವ್ರಿಂಕಾ ವಿರುದ್ಧ ಮೆಡ್ವೆಡೆವ್ 7-6, 6-3, 3-6, 6-1 ಸೆಟ್‌ಗಳಲ್ಲಿ ಗೆದ್ದು ಅಂತಿಮ 4ರ ಸುತ್ತು ಪ್ರವೇಶಿಸಿದರು.
ಸೆಮೀಸ್‌ಗೆ ಸೆರೆನಾ
6 ಬಾರಿ ಯುಎಸ್ ಓಪನ್ ಚಾಂಪಿಯನ್ ಅಮೆರಿಕದ ಸೆರೆನಾ ವಿಲಿಯಮ್ಸ್, ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಕಿಯಾಂಗ್ ವಾಂಗ್ ವಿರುದ್ಧ 6-1, 6-0 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಯುಎಸ್ ಓಪನ್‌ನಲ್ಲಿ ಇದು ಅವರ 100ನೇ ಗೆಲುವು ಎನ್ನುವುದು ವಿಶೇಷ. ಕೇವಲ 44 ನಿಮಿಷಗಳಲ್ಲಿ ಪಂದ್ಯ ಗೆದ್ದ ಸೆರೆನಾ, ಈ ಟೂರ್ನಿಯ ಅತಿ ವೇಗದ ಗೆಲುವಿನ ದಾಖಲೆ ಬರೆದರು.
ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಬ್ರಿಟನ್‌ನ ಜೊಹಾನ ಕೊಂಟಾ ವಿರುದ್ಧ 5ನೇ ಶ್ರೇಯಾಂಕಿತೆ ಉಕ್ರೇನ್‌ನ ಎಲೆನಾ ಸ್ವಿಟೊಲಿನಾ 6-4, 6-4 ಸೆಟ್‌ಗಳಲ್ಲಿ ಜಯಗಳಿಸಿದರು. ಸೆಮೀಸ್‌ನಲ್ಲಿ ಸೆರೆನಾ ಹಾಗೂ ಸ್ವಿಟೊಲಿನಾ ಸೆಣಸಲಿದ್ದಾರೆ.