
ರಾಜ್‌ಕೋಟ್(ಅ.04): ಪಾದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ ಟೀಂ ಇಂಡಿಯಾ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಹಲವು ದಾಖಲೆ ಬರೆದಿದ್ದಾರೆ. ಶಾ ಸೆಂಚುರಿ ಸಿಡಿಸುತ್ತಿದ್ದಂತೆ, ಕ್ರಿಕೆಟ್ ದಿಗ್ಗಜರು, ಅಭಿಮಾನಿಗಳು ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪೃಥ್ವಿ ಶಾ ಸೆಂಚುರಿ ಸಂದರ್ಭವನ್ನ ಬಳಸಿಕೊಂಡ ಡ್ಯುರೆಕ್ಸ್ ಕಾಂಡೋಮ್ ಕಂಪೆನಿ 19ರ ಯುವ ಪೋರನಿಗೆ ಅಭಿನಂದನೆ ಸಲ್ಲಿಸಿದೆ. ಕಾಂಡೋಮ್ ಜಾಹೀರಾತು ಸ್ಟೈಲ್‌ನಲ್ಲಿ ಶಾಗೆ ಶುಭಾಶಯ ಹೇಳಿದೆ. ಮೊದಲ ಪ್ರಯತ್ನ ಯಾವುತ್ತು ವಿಶೇಷವಾಗಿರುತ್ತೆ ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ: ಸ್ಮಿತ್ ಬಾಲ್ ಟ್ಯಾಂಪರಿಂಗ್ ವಿವಾದ: ಆಸೀಸ್ ಪಡೆ ಕಾಲೆಳೆದ ಕಾಂಡೊಮ್ ಕಂಪನಿ..!
ಕಾಂಡೋಮ್ ಕಂಪೆನಿಯ ಟ್ವೀಟ್, ಸೆಂಚುರಿ ವೀರ ಪೃಥ್ವಿ ಶಾ ಕಾಲೆಳೆದಿದ್ದೋ ಅಥವಾ ಅಭಿನಂದಿಸಿದ್ದೋ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಆದರೆ ಕಾಂಡೋಮ್ ಕಂಪೆನಿ ಈ ರೀತಿ ಸೆಂಚುರಿ ಹಾಗೂ ವಿಶೇಷ ಸಂದರ್ಭಗಳನ್ನ ಬಳಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ.
ಇದನ್ನೂ ಓದಿ: ಸೋನಂ ದಂಪತಿಗೆ ಕಾಂಡೋಮ್ ಕಂಪನಿಯಿಂದ ತಮಾಷೆಯ ಟ್ವೀಟ್
ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮದುವೆ ಸಂದರ್ಭದಲ್ಲೂ ಕಾಂಡೋಮ್ ಕಂಪೆನಿ ಇದೇ ರೀತಿ ಟ್ವೀಟ್ ಮಾಡಿತ್ತು. ಇತ್ತೀಚೆಗೆ ಬಾಲಿವುಡ್ ನಟಿ ಸೋನಮ್ ಕಪೂರ್ ಮದುವೆಗೂ ಕಾಂಡೋಮ್ ಕಂಪೆನಿ ತಮಾಷೆ ಟ್ವೀಟ್ ಮಾಡಿತ್ತು.
ಇದನ್ನೂ ಓದಿ: ಸನ್ನಿ ಲಿಯೋನ್ ಕಾಂಡೋಮ್ ಅವಾಂತರ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.