
ಮುಂಬೈ: ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯ ಎರಡನೇ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ಕಾರ್ಯಕ್ರಮದಲ್ಲಿ ಹಲವು ಸೆಲೆಬ್ರಿಟಿಗಳು ಹಾಗೂ ಕ್ರೀಡಾಕ್ಷೇತ್ರದ ದಿಗ್ಗಜರ ಸಮಾಗಮಕ್ಕೆ ಸಾಕ್ಷಿಯಾಗಿದೆ. ಇದೀಗ ಅನಂತ್-ರಾಧಿಕ ಮದುವೆಯ ಕಾರ್ಯಕ್ರಮದಲ್ಲಿ ಜಾಗತಿಕ ಫುಟ್ಬಾಲ್ ಸಂಸ್ಥೆ(ಫಿಫಾ) ಅಧ್ಯಕ್ಷ ಗಿಯಾನಿ ಇನ್ಫ್ಯಾಂಟಿನೋ ಬಾಲಿವುಡ್ ತಾರೆ ರಣ್ವೀರ್ ಸಿಂಗ್ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜತೆ ಬಿಂದಾಸ್ ಆಗಿ ಕುಣಿದು ಕುಪ್ಪಳಿಸಿದ್ದು, ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು, ಫಿಫಾ ಅಧ್ಯಕ್ಷ ಗಿಯಾನಿ ಇನ್ಫ್ಯಾಂಟಿನೋ ಪಂಜಾಬಿ ಖ್ಯಾತ ಗಾಯಕ ಎಬಿ ದಿಲ್ಹೋನ್ ಅವರ ಲೈವ್ ಫರ್ಫಾರ್ಮ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಮುಂಬೈನ ಜಿಯೋ ಕನ್ವೆಷನಲ್ ಹಾಲ್‌ನಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ಮದುವೆ ಕಾರ್ಯಕ್ರಮ ಜುಲೈ 12ರಿಂದ ಆರಂಭವಾಗಿದ್ದು, ಜುಲೈ 14ರ ವರೆಗೆ ನಡೆಯಲಿದೆ. ಈ ಅದ್ಧೂರಿ ಮದುವೆಗೆ ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟಿಗರು, ಜಾಗತಿಕ ಸೆಲೆಬ್ರಿಟಿಗಳು ಸೇರಿದಂತೆ ನಾನಾ ಕ್ಷೇತ್ರಗಳ ದಿಗ್ಗಜರು ಪಾಲ್ಗೊಂಡಿದ್ದಾರೆ.
ಅನಂತ್ ಅಂಬಾನಿ ಮದ್ವೆಯಲ್ಲಿ ರೇಷ್ಮೆಯಲ್ಲಿ ಮಿಂಚಿದ ಶ್ವಾನ 'ಹ್ಯಾಪ್ಪಿ': ಯಾರಿದು ವಿಶೇಷ ಅತಿಥಿ?
ಹೀಗಿತ್ತು ನೋಡಿ ಫಿಫಾ ಅಧ್ಯಕ್ಷ ಗಿಯಾನಿ ಇನ್ಫ್ಯಾಂಟಿನೋ ಡ್ಯಾನ್ಸ್:
ಇನ್ನು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಈ ಮದುವೆ ಕಾರ್ಯಕ್ರಮಕ್ಕೆ ಜಾಗತಿಕ ಸೂಪರ್ ಮಾಡೆಲ್ ಕಿಮ್ ಕರ್ದಿಶಿಯನ್, ಹಾಲಿವುಡ್ ನಟ ಹಾಗೂ ಪ್ರಖ್ಯಾತ WWE ಕುಸ್ತಿಪಟು ಜಾನ್ ಸಿನಾ, ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದಾರೆ.
ಅಂಬಾನಿ ಮಗನ ಮದುವೆಯಲ್ಲಿ ಫಿಫಾ ಅಧ್ಯಕ್ಷ ಕೂಡಾ ಡ್ಯಾನ್ಸ್ ಮಾಡಲೇಬೇಕು ಎಂದು ನೆಟ್ಟಿಗರು ಗಿಯಾನಿ ಇನ್ಫ್ಯಾಂಟಿನೋ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಕಾಲೆಳೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.