ಭಾರತ-ಜಿಂಬಾಬ್ವೆ 4ನೇ ಟಿ20 ಪಂದ್ಯ: ಸರಣಿ ಜಯದ ಕಾತರದಲ್ಲಿ ಭಾರತ

By Kannadaprabha NewsFirst Published Jul 13, 2024, 11:54 AM IST
Highlights

ಭಾರತ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ ನಾಲ್ಕನೇ ಟಿ20 ಪಂದ್ಯವು ಇಂದು ನಡೆಯಲಿದ್ದು, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಶುಭ್‌ಮನ್ ಗಿಲ್ ಪಡೆ ಸರಣಿ ಕೈವಶ ಮಾಡಿಕೊಳ್ಳಲು ಎದುರು ನೋಡುತ್ತಿದೆ.

ಹರಾರೆ: ಕಳೆದೆರಡು ಪಂದ್ಯದಲ್ಲಿ ಜಿಂಬಾಬೈ ವಿರುದ್ಧ ಅಮೋಘ ಪ್ರದರ್ಶನ ತೋರಿರುವ ಯುವ ಆಟಗಾರರನ್ನೊಳಗೊಂಡ ಭಾರತ ತಂಡ ಸದ್ಯ ಸರಣಿ ಗೆಲುವಿನ ನಿರೀಕ್ಷೆಯಲ್ಲಿದ್ದು, ಶನಿವಾರ ಸರಣಿಯ 4ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಶುಭಮನ್ ಗಿಲ್ ನಾಯಕತ್ವದ ಭಾರತ ಸದ್ಯ 2-1 ಮುನ್ನಡೆಯಲ್ಲಿದೆ.

ಆರಂಭಿಕ ಪಂದ್ಯದಲ್ಲಿ ಆಘಾತಕಾರಿ ಸೋಲು ಭಾರತೀಯ ರನ್ನು ಘಾಸಿಗೊಳಿಸಿತ್ತಾದರೂ ಬಳಿಕಪುಟಿದೆದ್ದಿದ್ದಾರೆ. ಆಂಡ್ ಪ್ರದರ್ಶನದ ಮೂಲಕ 2 ಪಂದ್ಯಗಳಲ್ಲಿ ಗೆಲುವನ್ನು ಒಲಿಸಿಕೊಂಡಿದ್ದಾರೆ. 2ನೇ ಪಂದ್ಯದಲ್ಲಿ ಆರಂಭಿಕನಾಗಿ ಅಬ್ಬರದ ಶತಕ ಸಿಡಿಸಿದ್ದ ಅಭಿಷೇಕ್ ಶರ್ಮಾ 3ನೇ ಕ್ರಮಾಂಕದಲ್ಲೂ ಅಮೋಘ ಆಟವಾಡಬೇಕಿದೆ. ಋತುರಾಜ್ ಗಾಯಕ್ವಾಡ್ ಉತ್ತಮ ಲಯದಲ್ಲಿದ್ದು, ನಾಯಕ ಶುಭಮನ್ ದೊಡ್ಡ ಇನ್ನಿಂಗ್ಸ್ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ ರವೀಂದ್ರ ಜಡೇಜಾರ ಸ್ಥಾನ ತುಂಬಲು ಎದುರು ನೋಡುತ್ತಿರುವ ವಾಷಿಂಗ್ಟನ್ ಸುಂದರ್ ಮತ್ತೊಮ್ಮೆ ಅಭೂತ ಪೂರ್ವ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ. 

Latest Videos

ದಿಗ್ಗಜ ಬೌಲರ್‌ ಜೇಮ್ಸ್‌ ಆ್ಯಂಡರ್‌ಸನ್‌ ಟೆಸ್ಟ್‌ ವೃತ್ತಿ ಬದುಕು ಮುಕ್ತಾಯ..!

ಸರಣಿಯಲ್ಲಿ ಎರಡು ಪಂದ್ಯ ಮಾತ್ರ ಬಾಕಿ ಇರುವುದರಿಂದ ಸ್ಯಾಮನ್ ಹಾಗೂ ಶಿವಂ ದುಬೆಗೆ ತಮಗೆ ಸಿಕ್ಕ ಅವಕಾಶವನ್ನು ಸಮರ್ಥ ವಾಗಿ ಬಳಸಿಕೊಳ್ಳಬೇಕಿದೆ. ಅತ್ತ ಜಿಂಬಾಬ್ಬೆ ಸುಧಾರಿತ ಪ್ರದರ್ಶನ ಮೂಲಕ ಸರಣಿಯಲ್ಲಿ ಸಮಬಲದ ನಿರೀಕ್ಷೆಯಲ್ಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಶುಭಮನ್ ಗಿಲ್‌(ನಾಯಕ), ಅಭಿಷೇಕ್‌ ಶರ್ಮಾ, ಯಶಸ್ವಿ ಜೈಸ್ವಾಲ್‌, ಋತುರಾಜ್‌ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರಿಂಕು ಸಿಂಗ್, ವಾಷಿಂಗ್ಟನ್‌ ಸುಂದರ್, ಆವೇಶ್‌ ಖಾನ್, ಮುಕೇಶ್‌ ಕುಮಾರ್, ರವಿ ಬಿಷ್ಣೋಯ್‌.

ಜಿಂಬಾಬ್ವೆ: ಇನೋಸೆಂಟ್‌, ಮಧವೆರೆ, ಬೆನೆಟ್‌, ಮೈರ್ಸ್‌, ಸಿಕಂದರ್‌(ನಾಯಕ), ಮಡಂಡೆ, ಕ್ಯಾಂಪ್‌ಬೆಲ್‌, ಮಸಕಜ, ಜೊಂಗ್ವೆ, ಮುಜರಬಾನಿ, ಚಟಾರ.

ಪಂದ್ಯ: ಸಂಜೆ 4.30ಕ್ಕೆ(ಭಾರತೀಯ ಕಾಲಮಾನ)
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್, ಸೋನಿ ಲೈವ್.
 

click me!