
ನವದೆಹಲಿ[ನ.29]: ’ಭಾರತ ಮಹಿಳಾ ತಂಡದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್, ಸದಾ ಪ್ರತ್ಯೇಕವಾಗಿರಲು ಬಯಸುತ್ತಿದ್ದರು. ಹಾಗಾಗಿ ಟೂರ್ನಿಯ ವೇಳೆ ಅವರನ್ನು ಸಂಭಾಳಿಸೋದು ಕಷ್ಟವಾಗುತ್ತಿತ್ತು’ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ರಮೇಶ್ ಪೊವಾರ್ ತಿರುಗೇಟು ನೀಡಿದ್ದಾರೆ.
ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಹಾಗೂ ಕ್ರಿಕೆಟ್ ಚಟುವಟಿಕೆಗಳ ಪ್ರಧಾನ ವ್ಯವಸ್ಥಾಪಕ ಸಾಬಾ ಕರೀಂ ಎದುರು ಹಾಜರಾಗಿದ್ದ ಕೋಚ್ ಪೊವಾರ್, ಮಿಥಾಲಿ ಅವರೊಂದಿಗೆ ವ್ಯವಹರಿಸುವುದು ಕಠಿಣ ಸಾಧ್ಯ’ ಎಂದು ಹೇಳಿದ್ದಾರೆ.
ಮಂಗಳವಾರವಷ್ಟೇ ಭಾರತ ತಂಡದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್, ಟಿ20 ವಿಶ್ವಕಪ್ ಸೆಮಿಫೈನಲ್’ನಿಂದ ನಮ್ಮನ್ನು ಹೊರಗಿಡಲು ಕೋಚ್ ರಮೇಶ್ ಪೊವಾರ್ ಗರ್ವವೇ ಕಾರಣ. ಅಲ್ಲದೇ ನನ್ನನ್ನು ಬಹಳಷ್ಟು ಅವಮಾನಿಸಿರುವುದು ಸೇರಿದಂತೆ ಹಲವು ವಿಷಯಗಳ ಕುರಿತು ಆರೋಪಿಸಿ, ಬಿಸಿಸಿಐ ಅಧಿಕಾರಿಗಳಿಗೆ ಸುದೀರ್ಘ ಪತ್ರ ಬರೆದಿದ್ದರು.
ಹಿರಿಯ ಆಟಗಾರ್ತಿ ಮಿಥಾಲಿ ಅವರೊಂದಿಗೆ ವೃತ್ತಿಪರ ಸಂಬಂಧ ಅತ್ಯಂತ ಪ್ರಯಾಸಕರವಾದದ್ದು. ಅಲ್ಲದೆ ನಾನು ಅವರನ್ನು ಬಹಳಷ್ಟು ಸಾರಿ ಇತರ ಆಟಗಾರರೊಂದಿಗೆ ಇರದೆ, ಪ್ರತ್ಯೇಕವಾಗಿರುವುದನ್ನು ನೋಡಿದ್ದೇನೆ. ಹಾಗಾಗಿ ಅವರನ್ನು ಸಂಭಾಳಿಸುವುದು ಅತ್ಯಂತ ಕಷ್ಟಕರ’ ಎಂದು ಬಿಸಿಸಿಐ ಪವಾರ್ ಎದುರು ಹೇಳಿದ್ದಾರೆ.
ಟಿ20 ವಿಶ್ವಕಪ್ ಸೆಮಿಫೈನಲ್’ನಲ್ಲಿ ಮಿಥಾಲಿ ಕೈಬಿಟ್ಟಿರುವುದನ್ನು ಪೊವಾರ್ ಸಮರ್ಥಿಸಿಕೊಂಡಿದ್ದಾರೆ. ಮಿಥಾಲಿ ಬ್ಯಾಟಿಂಗ್ ಸ್ಟ್ರೈಕ್’ರೇಟ್ ಕಡಿಮೆ ಇದ್ದುದ್ದೇ ಅವರನ್ನು ತಂಡದಿಂದ ಹೊರಗಿಡಲು ಕಾರಣ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.