ವೈಯುಕ್ತಿಕ ದಾಖಲೆಗಳು ತೃಪ್ತಿ ಕೊಡುತ್ತವೆ, ಆದರೆ..? ವಾಸೀಂ ಜಾಫರ್ ಹೇಳಿದ್ದೇನು..?

By Web DeskFirst Published Nov 28, 2018, 3:49 PM IST
Highlights

ನಾನು ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಇರಾನಿ ಟ್ರೋಫಿಯಲ್ಲಿ ಗರಿಷ್ಠ ರನ್ ಬಾರಿಸಿದ್ದೇನೆ. ಈ ಸಾಧನೆ ನನಗೆ ಸಾಕಷ್ಟು ತೃಪ್ತಿ ಹಾಗೂ ನೆಮ್ಮದಿಯನ್ನು ನೀಡಿದೆ. ತಂಡದ ಗೆಲುವಿನಲ್ಲಿ ನನ್ನ ಕೊಡುಗೆಯೂ ಇದ್ದಾಗ ಇನ್ನಷ್ಟು ಖಷಿಯಾಗುತ್ತದೆ.

ವಿದರ್ಭ[ನ.28]: ಇತ್ತೀಚೆಗಷ್ಟೇ ರಣಜಿ ಕ್ರಿಕೆಟ್’ನಲ್ಲಿ 11 ಸಾವಿರ ರನ್ ಪೂರೈಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎನ್ನುವ ಕೀರ್ತಿಗೆ ಪಾತ್ರರಾಗಿದ್ದ ಭಾರತದ ಅನುಭವಿ ಕ್ರಿಕೆಟಿಗ ವಾಸೀಂ ಜಾಫರ್ ವೈಯುಕ್ತಿಕ ದಾಖಲೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ವೈಯುಕ್ತಿಕ ದಾಖಲೆಗಳು ತೃಪ್ತಿ ನೀಡುತ್ತದೆ. ಆದರೆ ತಮ್ಮ ಉತ್ತಮ ಪ್ರದರ್ಶನದಿಂದ ತಂಡ ಗೆಲುವು ಸಾಧಿಸಿದರೆ ಅದಕ್ಕಿಂತ ಹೆಚ್ಚಿನ ಸಂತೋಷ ಪಡುವಂತಹದ್ದು ಬೇರೇನು ಇರಲು ಸಾಧ್ಯವಿಲ್ಲ ಎಂದು ವಿದರ್ಭ ತಂಡದ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.

ತಂಡಕ್ಕೆ ಭಾರವಾದ್ರೆ ಬ್ಯಾಗ್ ಪ್ಯಾಕ್ ಮಾಡುತ್ತೇನೆ: ವಾಸಿಮ್ ಜಾಫರ್!

ನಾನು ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಇರಾನಿ ಟ್ರೋಫಿಯಲ್ಲಿ ಗರಿಷ್ಠ ರನ್ ಬಾರಿಸಿದ್ದೇನೆ. ಈ ಸಾಧನೆ ನನಗೆ ಸಾಕಷ್ಟು ತೃಪ್ತಿ ಹಾಗೂ ನೆಮ್ಮದಿಯನ್ನು ನೀಡಿದೆ. ತಂಡದ ಗೆಲುವಿನಲ್ಲಿ ನನ್ನ ಕೊಡುಗೆಯೂ ಇದ್ದಾಗ ಇನ್ನಷ್ಟು ಖಷಿಯಾಗುತ್ತದೆ. ಸಾಕಷ್ಟು ರನ್ ಬಾರಿಸಿಯೋ ಇಲ್ಲವೇ ಹೆಚ್ಚು ವಿಕೆಟ್ ಕಬಳಿಯೋ ದಾಖಲೆ ನಿರ್ಮಿಸಿ ತಂಡ ಸೋತರೆ, ಆ ದಾಖಲೆಗೆ ಅರ್ಥವಿರುವುದಿಲ್ಲ. ಆದ್ದರಿಂದ ವೈಯುಕ್ತಿಕ ದಾಖಲೆಗಳ ಜತೆಗೆ ತಂಡವು ಜಯದ ನಗೆ ಬೀರಿದರೆ ಅದಕ್ಕಿಂತ ಸಂತೋಷ ಮತ್ತೊಂದು ಇರಲಾರದು ಎಂದು ಹೇಳಿದ್ದಾರೆ.

ಜಾಫರ್ ಭರ್ಜರಿ ದ್ವಿಶತಕ; ವಯಸ್ಸು 40, ಆದರೆ ದಾಖಲೆಗಳು...

1996ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ 40 ವರ್ಷದ ಜಾಫರ್ ಇದುವರೆಗೆ 245 ಪಂದ್ಯಗಳನ್ನು ಆಡಿದ್ದಾರೆ. ಇನ್ನು ಭಾರತ ಪರ 31 ಟಸ್ಟ್ ಪಂದ್ಯಗಳನ್ನಾಡಿ 1,944 ರನ್ ಬಾರಿಸಿದ್ದಾರೆ. ಇದರಲ್ಲಿ 2 ದ್ವಿಶತಕಗಳು ಸೇರಿವೆ.

ಸಂಭಾವನೆಯಿಲ್ಲದೇ ರಣಜಿ ಆಡಿದ ಜಾಫರ್; ರಿಯಲ್ ರೋಲ್ ಮಾಡೆಲ್ ಎಂದ ಗಂಭೀರ್

click me!