ಇಂಡೋ-ಕಿವೀಸ್ ಕೊನೆಯ ಟಿ20 ಪಂದ್ಯದಲ್ಲಿ ಅಪರೂಪದ ದಾಖಲೆ ಬರೆದ ಧೋನಿ

By Web Desk  |  First Published Feb 11, 2019, 2:22 PM IST

ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯವಾಡುವ ಮೂಲಕ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಟಿ20 ಕ್ರಿಕೆಟ್‌ನಲ್ಲಿ 300ನೇ ಪಂದ್ಯವನ್ನಾಡಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತದ ಆಟಗಾರ ಎನಿಸಿದ್ದಾರೆ.


ಹ್ಯಾಮಿಲ್ಟನ್[ಫೆ.11]: ಟೀಂ ಇಂಡಿಯಾದ ಅನುಭವಿ ಕ್ರಿಕೆಟಿಗ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯನ್ನಾಡುವ ಮೂಲಕ ವಿನೂತನ ದಾಖಲೆ ಬರೆದಿದ್ದಾರೆ.

ಕಿವೀಸ್ ನೆಲದಲ್ಲಿ ಟೀಂ ಇಂಡಿಯಾದ ಟಿ20 ಸರಣಿ ಗೆಲುವು ಮರೀಚಿಕೆ

Tap to resize

Latest Videos

ಹೌದು, ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯವಾಡುವ ಮೂಲಕ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಟಿ20 ಕ್ರಿಕೆಟ್‌ನಲ್ಲಿ 300ನೇ ಪಂದ್ಯವನ್ನಾಡಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತದ ಆಟಗಾರ ಎನಿಸಿದ್ದಾರೆ. ಐಪಿಎಲ್, ದೇಶೀಯ ಕ್ರಿಕೆಟ್ ಲೀಗ್ ಸೇರಿದಂತೆ ಎಲ್ಲಾ ಟಿ20 ಮಾದರಿಯ ಪಂದ್ಯಗಳು ಇದರಲ್ಲಿ ಸೇರಿವೆ. ರೋಹಿತ್ (298), ರೈನಾ (296), ದಿನೇಶ್ ಕಾರ್ತಿಕ್ (260), ಗಂಭೀರ್/ಹರ್ಭಜನ್ (251), ಕೊಹ್ಲಿ (250) ನಂತರದ ಸ್ಥಾನದಲ್ಲಿದ್ದಾರೆ. 

ವಿಶ್ವಕಪ್ ತಂಡದಲ್ಲಿ ಧೋನಿಗೆ ಸ್ಥಾನ: ಯುವಿ ಹೇಳೋದೇನು...?

ಇನ್ನು ಒಟ್ಟಾರೆ ಜಗತ್ತಿನ ಟಿ20 ಕ್ರಿಕೆಟ್’ನಲ್ಲಿ ಅತಿಹೆಚ್ಚು ಪಂದ್ಯವಾಡಿದ ದಾಖಲೆ ವೆಸ್ಟ್ ಇಂಡೀಸ್ ಆಲ್ರೌಂಡರ್ ಕಿರಾನ್ ಪೊಲ್ಲಾರ್ಡ್ ಹೆಸರಿನಲ್ಲಿದೆ. ಪೊಲ್ಲಾರ್ಡ್ 446ಪಂದ್ಯಗಳನ್ನಾಡುವ ಮೂಲಕ ಅಗ್ರಸ್ಥಾನದಲ್ಲಿದ್ದರೆ, ಮತ್ತೋರ್ವ ವಿಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೋ 429 ಪಂದ್ಯವನ್ನಾಡುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.  

ಧೋನಿ ಮಿಂಚಿನ ಸ್ಟಂಪಿಂಗ್’ಗೆ ಪೆವಿಲಿಯನ್ ಸೇರಿದ ಸೈಫರ್ಟ್

ಮುನ್ನೂರನೇ ಪಂದ್ಯವಾಡಿದ ಧೋನಿ ಬ್ಯಾಟಿಂಗ್’ನಲ್ಲಿ ನಿರಾಸೆ ಅನುಭವಿಸಿದರು, ವಿಕೆಟ್’ಕೀಪಿಂಗ್’ನಲ್ಲಿ ಮಿಂಚಿದ್ದಾರೆ. ಕಣ್’ಮಿಟುಕಿಸುವುದರೊಳಗಾಗಿ ಟಿಮ್ ಸೈಫರ್ಟ್ ಅವರನ್ನು ಸ್ಟಂಪೌಟ್ ಮಾಡಿದ ಧೋನಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ 34 ಸ್ಟಂಪೌಟ್ ಮಾಡುವ ಮೂಲಕ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. ಕಳೆದ ವರ್ಷವೇ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಕಮ್ರಾನ್ ಅಕ್ಮಲ್[32] ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದ್ದ ಧೋನಿ, ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಇನ್ನುಳಿದಂತೆ ಆಫ್ಘಾನಿಸ್ತಾನದ ಮೊಹಮ್ಮದ್ ಶೆಹಜಾದ್ ಹಾಗೂ ಬಾಂಗ್ಲಾದೇಶದ ಮುಷ್ಫೀಕರ್ ರಹೀಮ್ ತಲಾ 28 ಸ್ಟಂಪಿಂಗ್ಸ್ ಮಾಡಿದ್ದಾರೆ. 

click me!