ಪಾಕ್-ಆಸಿಸ್ ಏಕದಿನ ಸರಣಿ ಯುಎಇಗೆ ಶಿಫ್ಟ್..!

By Web DeskFirst Published Feb 11, 2019, 1:08 PM IST
Highlights

ಪಿಸಿಬಿ, ಇತ್ತೀಚೆಗಷ್ಟೇ 5 ಪಂದ್ಯಗಳ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಆಹ್ವಾನಿಸಿತ್ತು. ಆದರೆ ಭದ್ರತೆ ಕಾರಣ ನೀಡಿರುವ ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದೆ.

ಕರಾಚಿ[ಫೆ.11]: ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಗೆ ತವರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವ ಆಸೆಗೆ ಹಿನ್ನಡೆಯಾಗಿದೆ. 

ಈ ಇಬ್ಬರು ಇದ್ದರೆ ಈ ಸಲ ವಿಶ್ವಕಪ್ ನಮ್ದೇ: ರಿಕಿ ಪಾಂಟಿಂಗ್

ಪಿಸಿಬಿ, ಇತ್ತೀಚೆಗಷ್ಟೇ 5 ಪಂದ್ಯಗಳ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಆಹ್ವಾನಿಸಿತ್ತು. ಆದರೆ ಭದ್ರತೆ ಕಾರಣ ನೀಡಿರುವ ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದೆ. ಹೀಗಾಗಿ ಪಿಸಿಬಿ ಒತ್ತಡಕ್ಕೆ ಮಣಿದು ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲಿದೆ.

ವಿಶ್ವಕಪ್’ಗಾಗಿ ಆಸ್ಟ್ರೇಲಿಯಾ ತಂಡ ಕೂಡಿಕೊಂಡ ರಿಕಿ ಪಾಂಟಿಂಗ್..!

ಮಾ. 22 ರಿಂದ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಯ ವೇಳೆಗೆ ನಿಷೇಧಿತ ಕ್ರಿಕೆಟಿಗರಾದ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. ಆಸ್ಟ್ರೇಲಿಯಾ, 1998ರ ಬಳಿಕ ಪಾಕಿಸ್ತಾನದಲ್ಲಿ ಸರಣಿ ಆಡಿಲ್ಲ. 2009ರಲ್ಲಿ ಶ್ರೀಲಂಕಾ ತಂಡದ ಬಸ್ ಮೇಲೆ ಬಾಂಬ್ ದಾಳಿಯಿಂದಾಗಿ ಇತರ ತಂಡಗಳು ಇಲ್ಲಿ ಪಂದ್ಯಗಳನ್ನಾಡಲು ಹಿಂದೇಟು ಹಾಕುತ್ತಿವೆ.

click me!