* ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಈಜು ತಂಡದಲ್ಲಿ ಸ್ಥಾನ ಪಡೆದ ಶ್ರೀಹರಿ ನಟರಾಜ್
* ಕಾಮನ್‌ವೆಲ್ತ್ ಗೇಮ್ಸ್‌ಗೆ ನಾಲ್ವರು ಸದಸ್ಯರನ್ನೊಳಗೊಂಡ ಭಾರತ ತಂಡ ಪ್ರಕಟ
* ದೆಹಲಿಯ ಕುಶಾಗ್ರ ರಾವತ್ ಹಾಗೂ ಮಧ್ಯಪ್ರದೇಶದ ಅದ್ವೈತ್ ಪಾಗೆ ಕೂಡಾ ಸ್ಥಾನ
ನವದೆಹಲಿ(ಜೂ.26): ಕರ್ನಾಟಕದ ತಾರಾ ಈಜುಪಟು ಶ್ರೀಹರಿ ನಟರಾಜ್ (Srihari Nataj) ಮತ್ತು ಕೇರಳದ ಸಾಜನ್ ಪ್ರಕಾಶ್ (Sajan Prakash) ಅವರು ಕಾಮನ್‌ವೆಲ್ತ್ ಕ್ರೀಡಾಕೂಟದ (Commonwealth Games 2022) ಈಜು ಸ್ಪರ್ಧೆಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಶನಿವಾರ ಭಾರತ ಈಜು ಫೆಡರೇಷನ್(ಎಸ್‌ಎಫ್‌ಐ) ಗೇಮ್ಸ್‌ಗೆ ನಾಲ್ವರು ಸದಸ್ಯರ ಭಾರತ ತಂಡವನ್ನು ಶನಿವಾರ ಪ್ರಕಟಿಸಿತು. ತಂಡದಲ್ಲಿ ದೆಹಲಿಯ ಕುಶಾಗ್ರ ರಾವತ್ ಹಾಗೂ ಮಧ್ಯಪ್ರದೇಶದ ಅದ್ವೈತ್ ಪಾಗೆ ಕೂಡಾ ಸ್ಥಾನ ಪಡೆದುಕೊಂಡಿದ್ದಾರೆ.
ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ನಾಲ್ವರು ಈಜು ಸ್ಪರ್ಧಿಗಳನ್ನು ಕಳುಹಿಸುವ ಅವಕಾಶವನ್ನು ಎಸ್‌ಎಫ್‌ಐ ಪಡೆದುಕೊಂಡಿತ್ತು. ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಸ್ಪರ್ಧಿಸಿದ್ದ ಶ್ರೀಹರಿ ಈ ಬಾರಿ 50 ಮೀ., 100 ಮೀ. ಮತ್ತು 200 ಮೀ. ಬ್ಯಾಕ್‌ಸ್ಟೊ್ರೕಕ್ ವಿಭಾಗಗಳಲ್ಲಿ ಕಣಕ್ಕಿಳಿಯುವರು. ಕಾಮನ್‌ವೆಲ್ತ್ ಕೂಟದ ಈಜು ಸ್ಪರ್ಧೆಯಲ್ಲಿ ಭಾರತ ಇದುವರೆಗೂ ಪದಕ ಜಯಿಸಿಲ್ಲ.
ಕಾಮನ್ವೆಲ್ತ್: ಅಥ್ಲೆಟಿಕ್ಸ್‌ಗೆ ಶಂಕರ್ ಸೇರಿ ಐವರು
ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್‌ನ ಅಥ್ಲೆಟಿಕ್ಸ್ ತಂಡಕ್ಕೆ ಹೈಜಂಪ್ ಪಟು ತೇಜಸ್ವಿನ್ ಶಂಕರ್‌ರನನ್ನು ಪರಿಗಣಿಸಬೇಕೆಂದು ಹೈಕೋರ್ಚ್ ಸೂಚಿಸಿದ ಬೆನ್ನಲ್ಲೇ ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್(ಎಎಫ್‌ಐ) ಶಂಕರ್ ಸೇರಿ ಐವರನ್ನು ತಂಡಕ್ಕೆ ಸೇರಿಸಿದೆ. ಆದರೆ ನಿಗದಿಪಡಿಸಿದ ಕೋಟಾ ಹೆಚ್ಚಿಸಲು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಒಪ್ಪಿಗೆ ನೀಡಬೇಕಿದೆ ಎಂದಿದೆ.
AIFF Election: ಸೆಪ್ಟೆಂಬರ್ 16ರೊಳಗೆ ಚುನಾವಣೆ ನಡೆಸಲು ಫಿಫಾ ಡೆಡ್‌ಲೈನ್
ಕಳೆದ ವಾರ 36 ಮಂದಿಯ ಅಥ್ಲೆಟಿಕ್ಸ್ ತಂಡವನ್ನು ಪ್ರಕಟಿಸಲಾಗಿತ್ತು. ಆದರೆ ತಮ್ಮನ್ನು ಹೊರಗಿಟ್ಟಿದ್ದನ್ನು ಪ್ರಶ್ನಿಸಿ ಶಂಕರ್ ಹೈಕೋರ್ಚ್ ಮೆಟ್ಟಿಲೇರಿದ್ದರು. ಸದ್ಯ ಶಂಕರ್ ಸೇರಿ ಐವರನ್ನು ತಂಡಕ್ಕೆ ಸೇರಿಸಲಾಗಿದೆ. ಆದರೆ 36 ಮಂದಿಗಿಂತ ಹೆಚ್ಚಿನ ಅಥ್ಲೀಟ್‌ಗಳನ್ನು ಕಳುಹಿಸಬೇಕಾದರೆ ಎಎಫ್‌ಐ ಗೇಮ್ಸ್ ಆಯೋಜಕರಲ್ಲಿ ಮನವಿ ಮಾಡಬೇಕಿದ್ದು, ಒಪ್ಪಿದರೆ ಮಾತ್ರ ಐವರು ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಎಎಫ್‌ಐ ಶಂಕರ್ ಜೊತೆ ಹೆಪಥ್ಲೀಟ್ ಸ್ವಪ್ನಾ ಬರ್ಮನ್, ಮ್ಯಾರಥಾನ್ ರನ್ನರ್‌ಗಳಾದ ಸ್ರಿನ್ ಬುಗಾತ, ಅನೀಶ್ ಥಾಪ, ರಿಲೇ ಓಟಗಾರ್ತಿ ಜಿಲ್ನಾ ಹೆಸರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ.
ಬಾತ್ರಾ ಐಒಎ ಅಧ್ಯಕ್ಷರಾಗಿ ಇರಬಾರದು: ಕೋರ್ಚ್
ನವದೆಹಲಿ: ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಅಧ್ಯಕ್ಷರಾಗಿ ಕಾರ‍್ಯನಿರ್ವಹಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ನರೇಂದ್ರ ಬಾತ್ರಾ ಅವರಿಗೆ ಶುಕ್ರವಾರ ಡೆಲ್ಲಿ ಹೈಕೋರ್ಚ್ ನಿರ್ದೇಶಿಸಿದೆ. ಒಲಿಂಪಿಯನ್, ಹಾಕಿ ವಿಶ್ವಕಪ್ ವಿಜೇತ ತಂಡದ ಸದಸ್ಯ ಅಸ್ಲಂ ಖಾನ್ ಅವರ ಅರ್ಜಿ ವಿಚಾರಣೆ ನಡೆಸಿದ ದಿನೇಶ್ ಶರ್ಮಾ ಅವರಿದ್ದ ನ್ಯಾಯಪೀಠ ಈ ಅದೇಶ ನೀಡಿತು. ಬಾತ್ರಾ ಅವರನ್ನು ಕಳೆದ ತಿಂಗಳು ಡೆಲ್ಲಿ ಹೈಕೋರ್ಚ್ ಐಒಎ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ, ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾಗಿದ್ದ ಅನಿಲ್ ಖನ್ನಾ ಅವರನ್ನು ಹಂಗಾಮಿ ಅಧ್ಯಕ್ಷರಾಗಿ ನೇಮಿಸಿತ್ತು. ಆದರೆ ಬಾತ್ರಾ ಐಒಎ ಸಭೆಗಳಲ್ಲಿ ಹಾಜರಾಗುತ್ತಿದ್ದರು ಎಂದು ದೂರಲಾಗಿತ್ತು.