* ಭಾರತ-ಇಂಗ್ಲೆಂಡ್ ನಡುವಿನ ಏಕೈಕ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ
* ಜುಲೈ 01ರಿಂದ ಆರಂಭವಾಗಲಿದೆ ಇಂಗ್ಲೆಂಡ್ ಎದುರಿನ ಮಹತ್ವದ ಟೆಸ್ಟ್ ಪಂದ್ಯ
* ನಾಯಕನಾಗಿ ರೋಹಿತ್ ಶರ್ಮಾಗೆ ಅಗ್ನಿಪರೀಕ್ಷೆ
ಲಂಡನ್(ಜೂ.26): ಮೆನ್ ಇನ್ ಬ್ಲೂ ಪಡೆಯಲ್ಲಿ ಬದಲಾವಣೆಯ ಪರ್ವ ಶುರುವಾಗಿದೆ. ಕ್ಯಾಪ್ಟನ್ಸಿ, ಕೋಚ್ ಹಾಗೂ ಪ್ಲೇಯರ್ಸ್ ಯಿಂದ ಹಿಡಿದು ಕಳೆದ 9 ತಿಂಗಳಲ್ಲಿ ಸಾಕಷ್ಟು ಚೇಂಜಸ್ ಆಗಿವೆ. ಹೀಗೆ ತಂಡದಲ್ಲಿ ಸಾಲು ಬದಲಾವಣೆಯಾಗ್ತಿದ್ರೂ, ಕ್ಯಾಪ್ಟನ್ ರೋಹಿತ್ ಮತ್ತು ಕೋಚ್ ದ್ರಾವಿಡ್ಗೆ ಒಂದಿಲ್ಲೊಂದು ಅಗ್ನಿಪರೀಕ್ಷೆ ಎದುರಾಗುತ್ತಲೇ ಇವೆ. ಐಪಿಎಲ್ ಬಳಿಕ ಭಾರತ ತಂಡ ಫುಲ್ ಫ್ಲೆಡ್ಜ್ ಪ್ರವಾಸ ಕೈಗೊಳ್ತಿದೆ. ಜುಲೈ 1 ರಿಂದ ಭಾರತ-ಇಂಗ್ಲೆಂಡ್ ಸರಣಿಗೆ ಕಿಕ್ಅಪ್ ಸಿಗಲಿದೆ. ಈ ಟೂರ್ ಕೋಚ್ ಮತ್ತು ಕ್ಯಾಪ್ಟನ್ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಹೌದು, ಹೊಸ ಕೋಚ್ ಮತ್ತು ಹೊಸ ಕ್ಯಾಪ್ಟನ್ ಕಂಡ ಬಳಿಕ ಟೀಂ ಇಂಡಿಯಾ (Team India) ಮೊದಲ ಆಂಗ್ಲರ ನಾಡಿಗೆ ಕಾಲಿಟ್ಟಿದೆ. ತವರಿನಲ್ಲಿ ರೋಹಿತ್-ರಾಹುಲ್ ಜೋಡಿ ಮೆರಿಟ್ನಲ್ಲಿ ಪಾಸಾಗಿ ಸೈ ಅನ್ನಿಸಿಕೊಂಡಿದೆ ನಿಜ. ಆದ್ರೆ ಅಸಲಿ ಆಟ, ಅಸಲಿ ಚಾಲೆಂಜಸ್ ಇರೋದೆ ಇಂಗ್ಲೆಂಡ್ ನೆಲದಲ್ಲಿ. ಯಾಕಂದ್ರೆ ಇಂಗ್ಲೆಂಡ್ ಟೂರ್ನಿಂದಲೇ ರೋಹಿತ್ ಆ್ಯಂಡ್ ಗ್ಯಾಂಗ್ ಮುಂಬರೋ ಟಿ20 ವಿಶ್ವಕಪ್ಗೆ ರಣಕಹಳೆ ಊದಲಿದೆ.
ಆಟಗಾರ, ನಾಯಕನಾಗಿ ಪಾಸಾಗ್ತಾರಾ ರೋಹಿತ್..? :
ಕಿಂಗ್ ಕೊಹ್ಲಿ ಬಳಿಕ ರೋಹಿತ್ ಶರ್ಮಾ ತಂಡದ ಚುಕ್ಕಾಣಿ ಹಿಡಿದಿದ್ದಾರೆ. ಇಂತಹ ಹಿಟ್ಮ್ಯಾನ್ ಪ್ಲೇಯರ್ ಮತ್ತು ನಾಯಕನಾಗಿ ಇಂಗ್ಲೆಂಡ್ ನೆಲದಲ್ಲಿ ಸಕ್ಸಸ್ ಕಾಣಬೇಕಾದ ಒತ್ತಡದಲ್ಲಿದ್ದಾರೆ. ಆಟಗಾರನಾಗಿ ಪ್ರತಿ ಸರಣಿಯಲ್ಲೂ ಪ್ಲಾಫ್ ಶೋ ನೀಡಿದ್ದಾರೆ. ಈ ವರ್ಷ ಎಲ್ಲಾ ಮಾದರಿ ಸೇರಿ ಒಟ್ಟು 11 ಪಂದ್ಯಗಳನ್ನ ಆಡಿದ್ದು, 23.66ರ ಸರಾಸರಿಯಲ್ಲಿ ಬರೀ 284 ರನ್ನ್ನಷ್ಟೇ ಗಳಿಸಿದ್ದಾರೆ. ಆಂಗ್ಲರ ವಿರುದ್ಧ ಬ್ಯಾಡ್ ಫಾರ್ಮ್ ನಿಂದ ಹೊರಬಂದು ರನ್ ಕೊಳ್ಳೆ ಹೊಡೆಯಬೇಕಾದ ಸವಾಲು ಎದುರಾಗಿದೆ.
ಇನ್ನು ಫುಲ್ ಟೈಮ್ ಕ್ಯಾಪ್ಟನ್ ತವರಿನಲ್ಲಿ ಗೆದ್ದಿರೋ ರೋಹಿತ್ಗೆ ಆಂಗ್ಲರ ನಾಡಿನಲ್ಲಿ ಸರಣಿ ಗೆಲ್ಲಿಸಿಕೊಡಬೇಕಾದ ಅಗ್ನಿಪರೀಕ್ಷೆ ಎದುರಾಗಿದೆ. ಈಗಾಗ್ಲೇ ಸರಣಿಯಲ್ಲಿ ಭಾರತ 2-1 ರ ಮುನ್ನಡೆ ಸಾಧಿಸಿದೆ. ಗೆದ್ದರೆ ಇತಿಹಾಸ ಬರೆಯಲಿದೆ. ಒಂದು ವೇಳೆ ಸೋತರೆ ಸಿರೀಸ್ ಗೆಲ್ಲುವ ಆಸೆ ಕಮರಲಿದೆ. ಜೊತೆಗೆ ಕ್ಯಾಪ್ಟನ್ ಆಗಿ ಮೊದಲ ವಿದೇಶಿ ಟೂರ್ನಲ್ಲಿ ಹಿನ್ನಡೆ ಅನುಭವಿಸಲಿದ್ದಾರೆ.
ವಿದೇಶಿ ನೆಲದಲ್ಲಿ ಮೊದಲ ಸಿರೀಸ್ ಗೆಲ್ಲಿಸಿಕೊಡ್ತಾರಾ ದ್ರಾವಿಡ್..? :
ಇನ್ನು ಕ್ಯಾಪ್ಟನ್ ನಷ್ಟೇ ಚಾಲೆಂಜಸ್ ಹೆಡ್ ಕೋಚ್ ದ್ರಾವಿಡ್ ಮೇಲೂ ಇದೆ. ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ತಂಡ ಆಫ್ರಿಕಾ ನೆಲದಲ್ಲಿ ಈಗಾಗ್ಲೇ ಮುಖಭಂಗ ಅನುಭವಿಸಿದೆ. ಆ ನೋವನ್ನ ಮರೆಸಬೇಕಾದ್ರೆ ಇಂಗ್ಲೆಂಡ್ ವಿರುದ್ಧ ಸರಣಿ ಗೆಲ್ಲಿಸಿ ಕೊಡಬೇಕಿದೆ. ಇದಕ್ಕೆ ಕ್ಯಾಪ್ಟನ್ ಜೊತೆಗೂಡಿ ಸೂಕ್ತ ತಂತ್ರಗಳನ್ನ ಹಣೆಯಬೇಕಿದೆ. ಜೊತೆಗೆ ಅಳೆದು ತೂಗಿ ಆಡುವ ಹನ್ನೊಂದರ ಬಳಗವನ್ನ ಕಟ್ಟಿ ರಿಯಲ್ ಟ್ಯಾಲೆಂಟ್ಗಳಿಗೆ ಚಾನ್ಸ್ ಕೊಡಬೇಕಾದ ಚಾಲೆಂಜ್ ಕೋಚ್ ರಾಹುಲ್ ದ್ರಾವಿಡ್ ಮುಂದಿದೆ.