ದಿನೇಶ್‌ ಕಾರ್ತಿಕ್ ಸೇರಿ ಈ ನಾಲ್ವರಿಗೂ ಒಲಿಯಲಿಲ್ಲ ಟೆಸ್ಟ್​ ಕ್ರಿಕೆಟ್‌ ಯಶಸ್ಸು..!

Published : Jun 26, 2022, 11:32 AM IST
ದಿನೇಶ್‌ ಕಾರ್ತಿಕ್ ಸೇರಿ ಈ ನಾಲ್ವರಿಗೂ ಒಲಿಯಲಿಲ್ಲ ಟೆಸ್ಟ್​ ಕ್ರಿಕೆಟ್‌ ಯಶಸ್ಸು..!

ಸಾರಾಂಶ

* ಟೀಂ ಇಂಡಿಯಾ ಪರ ಮಿಂಚಿನ ಪ್ರದರ್ಶನ ತೋರುತ್ತಿರುವ ದಿನೇಶ್ ಕಾರ್ತಿಕ್ * ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸಿಕ್ಕಷ್ಟು ಯಶಸ್ಸು ಟೆಸ್ಟ್‌ನಲ್ಲಿ ಸಿಕ್ಕಿಲ್ಲ * ಯುವಿ, ರೈನಾಗೂ ಸಿಕ್ಕಿಲ್ಲ ಟೆಸ್ಟ್‌ ಕ್ರಿಕೆಟ್‌ನಲ್ಲಿ ಯಶಸ್ಸು

ಬೆಂಗಳೂರು(ಜೂ.26): ಯಾವುದೇ ಒಬ್ಬ ಆಟಗಾರ ಮೂರು ಫಾರ್ಮ್ಯಾಟ್ ಕ್ರಿಕೆಟ್ ಆಡೋ ಕನಸು ಕಂಡಿರುತ್ತಾನೆ. ಮೂರು ಮಾದರಿ ಕ್ರಿಕೆಟ್​ನಲ್ಲೂ ರಾಷ್ಟ್ರೀಯ ತಂಡವನ್ನ ಪ್ರತಿನಿಧಿಸಬೇಕು, ಆ ಮೂಲಕ ಇಂಟರ್​ ನ್ಯಾಷನಲ್ ಕ್ರಿಕೆಟ್​ನಲ್ಲಿ ಮಿಂಚಬೇಕು ಅನ್ನೋದು ಆತನ ಮಹದಾಸೆ. ಆದರೆ ಮೂರು ಫಾಮ್ಯಾಟ್​ನಲ್ಲಿ ಆಡೋರು ತೀರ ಕಡಿಮೆ. ಕೆಲವರು ಶಾರ್ಟ್​ ಫಾರ್ಮ್ಯಾಟ್​ಗೆ ಸೀಮಿತವಾಗಿದ್ದರೆ, ಕೆಲವರು ಟೆಸ್ಟ್ ಕ್ರಿಕೆಟ್​ಗೆ ಸೀಮಿತವಾಗ್ತಾರೆ. ಹಾಗಂದ ಮಾತ್ರಕ್ಕೆ ಅವರು ಎಲ್ಲಾ ಫಾರ್ಮ್ಯಾಟ್ ಕ್ರಿಕೆಟ್ ಆಡಿಲ್ಲ ಅಂತಲ್ಲ. ಆಡಿಯೂ ವಿಫಲರಾಗಿ ಒಂದೇ ಫಾರ್ಮ್ಯಾಟ್​ಗೆ ಸೀಮಿತ ಆಗಿರ್ತಾರೆ.

ದಿನೇಶ್ ಕಾರ್ತಿಕ್ (Dinesh Karthik) ವಿಷ್ಯಕ್ಕೆ ಬರೋಣ. 2004ರಲ್ಲಿ ಇಂಟರ್ ನ್ಯಾಷನಲ್ ಕ್ರಿಕೆಟ್ ಆರಂಭಿಸಿದ್ದ ಡಿಕೆ, ಮೂರು ಮಾದರಿ ಕ್ರಿಕೆಟ್ ಅನ್ನೂ ಆಡಿದ್ರು. ಆದ್ರೆ ಅವರಿಗೆ ಟೆಸ್ಟ್​ ಯಾಕೋ ಒಗ್ಗಿ ಬರಲಿಲ್ಲ. ನಿಧಾನವಾಗಿ ಟೆಸ್ಟ್​ ಟೀಮ್​ನಿಂದ ಡ್ರಾಪ್ ಆದ್ರು. ಶಾರ್ಟ್​ ಫಾರ್ಮ್ಯಾಟ್​ಗೆ ಸೀಮಿತವಾದ್ರು. ಶಾರ್ಟ್​ ಫಾರ್ಮ್ಯಾಟ್​ನಲ್ಲಿ ಎಷ್ಟೇ ಉತ್ತಮ ಪ್ರದರ್ಶನ ನೀಡಿದ್ರೂ ಕಾರ್ತಿಕ್​ಗೆ ಟೆಸ್ಟ್​ ತಂಡಕ್ಕೆ ಬುಲಾವ್ ಬರಲೇ ಇಲ್ಲ. 26 ಟೆಸ್ಟ್, 94 ಒನ್​ಡೇ, 37 ಟಿ20 ಮ್ಯಾಚ್ ಆಡಿದ್ದಾರೆ. ಇದರಲ್ಲೇ ಗೊತ್ತಾಗುತ್ತೆ ಡಿಕೆ ಶಾರ್ಟ್​ ಫಾಮ್ಯಾಟ್​​ಗೆ ಸೀಮಿತವಾಗಿದ್ದಾರೆ.

ವಯಸ್ಸಾದ ನಂತರ ಟೆಸ್ಟ್​ ಕ್ರಿಕೆಟ್​ಗೆ ಸೀಮಿತ: 

ಹೌದು, 35 ಪ್ಲಸ್ ವಯಸ್ಸಾದ್ರೆ ಸಾಕು ಆಟಗಾರರು, ಶಾರ್ಟ್​ ಫಾಮ್ಯಾಟ್​ನಿಂದ ದೂರ ಸರಿದು ಟೆಸ್ಟ್ ಕ್ರಿಕೆಟ್​ಗೆ ಸೀಮಿತವಾಗ್ತಾರೆ. ಆದರೆ ಡಿಕೆ ಮಾತ್ರ ಇದಕ್ಕೆ ವಿರುದ್ಧ. ಟೆಸ್ಟ್, ಒನ್​ಡೇಯಲ್ಲಿ ಸ್ಥಾನ ಕಳೆದುಕೊಂಡು, ಟಿ20 ಫಾಮ್ಯಾಟ್​ಗೆ ಸೀಮಿತವಾಗಿದ್ದಾರೆ. ಅದು 37ನೇ ವಯಸ್ಸಿನಲ್ಲಿ. ಇದು ಡಿಕೆ ತಾಕತ್ತು ಅಂತಿದೆ ವರ್ಲ್ಡ್​ ಕ್ರಿಕೆಟ್.

ವಿಶ್ವಕಪ್ ವಿಜೇತರಿಗೆ ಟೆಸ್ಟ್​ ಕ್ರಿಕೆಟ್ ಕೈ ಹಿಡಿಯಲಿಲ್ಲ:

ಡಿಕೆ ಮಾತ್ರವಲ್ಲ, ಇನ್ನೂ ನಾಲ್ಕು ಆಟಗಾರರಿಗೆ ಟೆಸ್ಟ್ ಕ್ರಿಕೆಟ್ ಕೈ ಹಿಡಿದೇ ಇಲ್ಲ. ಶಾರ್ಟ್‌ ಫಾರ್ಮ್ಯಾಟ್​ನಲ್ಲಿ ಯುವರಾಜ್ ಸಿಂಗ್, ಸಿಕ್ಸರ್ ಕಿಂಗ್. ಆದ್ರೆ ಯುವಿ ಕೆಲವೇ ಕೆಲ ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ ಅಷ್ಟೆ. ಇನ್ನು ಯುವಿ ಜೊತೆ ಮ್ಯಾಚ್​​ ಫಿನಿಶ್ ಮಾಡ್ತಿದ್ದ ಸುರೇಶ್ ರೈನಾ ಸಹ ಟೆಸ್ಟ್​ ಕ್ರಿಕೆಟ್​ ಕೈ ಹಿಡಿಯಲಿಲ್ಲ. ಎರೆಡೆರಡು ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದರೂ ಹೆಚ್ಚಾಗಿ ಟೆಸ್ಟ್​ ಕ್ರಿಕೆಟ್ ಆಡಲಿಲ್ಲ ಅನ್ನೋ ಬೇಸರದಲ್ಲೇ ರಿಟೈರ್ಡ್​ ಆಗಿ ಬಿಟ್ಟರು.

ಮಗನ ಫಸ್ಟ್‌ ಫೋಟೋ ಜೊತೆ ಹೆಸರನ್ನೂ ರೀವಿಲ್‌ ಮಾಡಿದ ಕ್ರಿಕೆಟಿಗ Yuvraj Singh

2003ರ ಒನ್​ಡೇ ವರ್ಲ್ಡ್​ಕಪ್ ಹೀರೋ, ಆಶಿಶ್ ನೆಹ್ರಾ, 35 ಪ್ಲಸ್ ವಯಸ್ಸಿನಲ್ಲಿ ಟಿ20 ಕ್ರಿಕೆಟ್ ಆಡಿದ್ರು. ಆದರೆ ಅವರು ಆಡಿದ್ದು ಬೆರಳೆಣಿಕೆಯಷ್ಟು ಟೆಸ್ಟ್ ಮಾತ್ರ. ಇನ್ನು ಈಗ ಟೀಂ ಇಂಡಿಯಾದ ಮೂರು ಫಾಮ್ಯಾಟ್ ನಾಯಕನಾಗಿರೋ ರೋಹಿತ್ ಶರ್ಮಾಗೂ ಟೆಸ್ಟ್ ಕೈ ಹಿಡಿದಿಲ್ಲ. ಭಾರತ ಟೆಸ್ಟ್ ತಂಡದ ನಾಯಕನಾಗಿರಬಹುದು. ಆದ್ರೆ ಇನ್ನೊಬ್ಬ ನಾಯಕ ಹುಟ್ಟುಕೊಳ್ಳುವವರೆಗೆ ಮಾತ್ರ . 15 ವರ್ಷಗಳಿಂದ ಟೀಂ ಇಂಡಿಯಾ ಪರ ಆಡುತ್ತಿದ್ದರೂ, ಹಿಟ್​ಮ್ಯಾನ್ ಇದುವರೆಗೂ 50 ಟೆಸ್ಟ್​ ಸಹ ಆಡಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?