
ಲಂಡನ್(ಜು.20): ನಿಧಾನಗತಿ ಬೌಲಿಂಗ್ ಮಾಡಿದ ತಪ್ಪಿಗೆ ಇನ್ಮುಂದೆ ನಾಯಕರಿಗೆ ನಿಷೇಧದ ಶಿಕ್ಷೆ ವಿಧಿಸುವ ಬದಲು ಅಂಕಗಳ ಕಡಿತಗೊಳಿಸಲು ಹಾಗೂ ತಂಡದ ಎಲ್ಲಾ ಆಟಗಾರರಿಗೂ ದಂಡ ವಿಧಿಸಲು ಐಸಿಸಿ ತೀರ್ಮಾನಿಸಿದೆ.
ಕ್ರಿಕೆಟ್ ಸ್ಫೂರ್ತಿ ಕಾಪಾಡಲು ಐಸಿಸಿ ಫೇಲ್?
ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಿಂದಲೇ ಇದನ್ನು ಜಾರಿಗೊಳಿಸಲು ನಿರ್ಧರಿಸಿದೆ. ಈ ಮೂಲಕ ಐಸಿಸಿ ಮಹತ್ವದ ನಿರ್ಣಯ ಕೈಗೊಂಡಿದ್ದು, ನಾಯಕರು ಮಾತ್ರ ನಿಷೇಧದ ಭೀತಿಯಿಂದ ನಿರಾಳರಾಗಿದ್ದಾರೆ.
ಮುಂದಿನ ವಿಶ್ವಕಪ್ ವೇಳೆ ಈ ಮೂರು ರೂಲ್ಸ್ ಚೇಂಜ್ ಆದ್ರೆ ಒಳ್ಳೇದು..!
‘ನಿಧಾನ ಗತಿಯ ಬೌಲಿಂಗ್ ತಪ್ಪಿಗೆ ಇನ್ಮುಂದೆ ನಾಯಕನಿಗೆ ನಿಷೇಧದ ಶಿಕ್ಷೆ ವಿಧಿಸುವುದಿಲ್ಲ. ನಿಧಾನಗತಿ ಬೌಲಿಂಗ್‌ಗೆ ನಾಯಕ ಮಾತ್ರನಲ್ಲ ಇಡೀ ತಂಡವೇ ಕಾರಣವಾಗಿರುತ್ತದೆ. ಹೀಗಾಗಿ ಇಡೀ ತಂಡಕ್ಕೆ ಶಿಕ್ಷೆ ನೀಡಲು ಐಸಿಸಿ ಮುಂದಾಗಿದೆ. ಈ ಹಿಂದಿನ ನಿಯಮದ ಪ್ರಕಾರ ಒಂದು ವರ್ಷದಲ್ಲಿ 2 ಪಂದ್ಯಗಳಲ್ಲಿ ನಿಧಾನ ಗತಿಯ ಬೌಲಿಂಗ್ ಮಾಡಿದರೆ, ತಂಡದ ನಾಯಕನನ್ನು ಒಂದು ಪಂದ್ಯದಿಂದ ನಿಷೇಧಗೊಳಿಸಲಾಗುತ್ತಿತ್ತು. ಆದರೆ, ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಪ್ರತಿ ಪಂದ್ಯದ ಬಳಿಕ ತಂಡಗಳಿಗೆ ಅಂಕಗಳನ್ನು ನೀಡಲಿದ್ದು, ನಿಧಾನ ಗತಿ ಬೌಲಿಂಗ್ ಮಾಡಿದರೆ ಈ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಜಿಂಬಾಬ್ವೆ BAN..!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.