ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಿ.ವಿ ಸಿಂಧು ಗೆಲುವಿನ ನಾಗಾಲೋಟ ಮುಂದುವರೆಸಿದ್ದು, ಜಪಾನಿನ ನೊಜೊಮಿ ಒಕುಹಾರ ಮಣಿಸಿ ಸೆಮೀಸ್‌ಗೇರಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಜಕಾರ್ತ(ಜು.20): ಭಾರತದ ತಾರಾ ಶಟ್ಲರ್ ಪಿ.ವಿ. ಸಿಂಧು, ಇಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಒಲಿಂಪಿಕ್ ಬೆಳ್ಳಿ ವಿಜೇತೆ ಸಿಂಧು, ಜಪಾನ್‌ನ ನೊಜೊಮಿ ಒಕುಹಾರ ವಿರುದ್ಧ 21-14, 21-7 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಕೇವಲ 44 ನಿಮಿಷಗಳ ಆಟದಲ್ಲಿ ಒಕುಹಾರ ರನ್ನು ಮಣಿಸುವಲ್ಲಿ ಸಿಂಧು ಯಶಸ್ವಿಯಾದರು.
ಇಂಡೋನೇಷ್ಯಾ ಓಪನ್: ಸಿಂಧು ಕ್ವಾರ್ಟರ್‌ಫೈನಲ್‌ಗೆ ಲಗ್ಗೆ
ಸೆಮೀಸ್‌ನಲ್ಲಿ ಸಿಂಧು, 2ನೇ ಶ್ರೇಯಾಂಕಿತೆ ಚೀನಾದ ಚೆನ್ ಯು ಫೀ ರನ್ನು ಎದುರಿಸಲಿದ್ದಾರೆ. ಈ ಋತುವಿನಲ್ಲಿ ಮೊದಲ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಸಿಂಧು, ಪಂದ್ಯದ ಆರಂಭದಿಂದಲೂ ಜಪಾನ್ ಶಟ್ಲರ್ ಒಕುಹಾರ ಮೇಲೆ ಸವಾರಿ ನಡೆಸಿದರು. ಒಂದು ಹಂತದಲ್ಲಿ 10-6 ರಿಂದ ಮುನ್ನಡೆದಿದ್ದ ಸಿಂಧುರನ್ನು ಕೆಲ ಕಾಲ ಒಕುಹಾರ ತಬ್ಬಿಬ್ಬು ಮಾಡಿದರು. ಆದರೆ ಮೊದಲ ಗೇಮ್‌ನ ಅಂತ್ಯಕ್ಕೆ 7 ಅಂಕಗಳ ಅಂತರ ಕಾಯ್ದುಕೊಂಡ ಸಿಂಧು ಮುನ್ನಡೆದರು.
2ನೇ ಗೇಮ್‌ನಲ್ಲಿ ಸಿಂಧು ಪ್ರಾಬಲ್ಯ ಸಾಧಿಸುವಲ್ಲಿ ಯಶಸ್ವಿಯಾದರು. 14 ಅಂಕಗಳ ಅಂತರದಲ್ಲಿ ಒಕುಹಾರರನ್ನು ಸಿಂಧು ಹಿಂದಿಕ್ಕಿ ಪಂದ್ಯ ಗೆದ್ದರು.