ಆ್ಯಷಸ್ ಕದನ: ಪಾಂಟಿಂಗ್, ಕ್ಲಾರ್ಕ್‌ಗೆ ಆಗದ್ದು, ಪೈನೆ ಮಾಡಿ ತೋರ್ಸಿದ್ರು..!

Published : Sep 09, 2019, 06:09 PM IST
ಆ್ಯಷಸ್ ಕದನ: ಪಾಂಟಿಂಗ್, ಕ್ಲಾರ್ಕ್‌ಗೆ ಆಗದ್ದು, ಪೈನೆ ಮಾಡಿ ತೋರ್ಸಿದ್ರು..!

ಸಾರಾಂಶ

ಆ್ಯಷಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ 2-1ರ ಮುನ್ನಡೆ ಸಾಧಿಸಿದೆ. ಇದರ ಜತೆಗ ಆ್ಯಷಸ್ ಕಪ್ ತವರಿಗೆ ತೆಗೆದುಕೊಂಡು ಹೋಗುವುದನ್ನು ಖಚಿತಪಡಿಸಿಕೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಬೆಂಗಳೂರು[ಸೆ.09]: ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಆ್ಯಷಸ್ ಸರಣಿಯ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವನ್ನು ಜಯಿಸುವುದರ ಮೂಲಕ ಆಸ್ಟ್ರೇಲಿಯಾ 2-1 ಅಂತರದ ಮುನ್ನಡೆ ಸಾಧಿಸಿದೆ. ಈ ಮೂಲಕ ಟಿಮ್ ಪೈನೆ ನೇತೃತ್ವದ ಆಸ್ಟ್ರೇಲಿಯಾ ತಂಡವು ಆ್ಯಷಸ್ ಕಪ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ರಿಕಿ ಪಾಂಟಿಂಗ್ ಹಾಗೂ ಮೈಕಲ್ ಕ್ಲಾರ್ಕ್’ಗೆ ಮಾಡಲಾಗದ ಸಾಧನೆಯನ್ನು ಟಿಮ್ ಪೈನೆ ಮಾಡಿದ್ದಾರೆ. 

ಆ್ಯಷಸ್ ಕದನ: ಇಂಗ್ಲೆಂಡ್ ವಿರುದ್ಧ ಗೆದ್ದ ಆಸ್ಟ್ರೇಲಿಯಾ

ಹೌದು, 2001ರಲ್ಲಿ ಆಸ್ಟ್ರೇಲಿಯಾ ಕಡೆಯ ಬಾರಿಗೆ ಇಂಗ್ಲೆಂಡ್ ನೆಲದಲ್ಲಿ 4-1 ಆ್ಯಷಸ್ ಸರಣಿ ಗೆದ್ದು ಇತಿಹಾಸ ಬರೆದಿತ್ತು. ಆ ಬಳಿಕ ರಿಕಿ ಪಾಂಟಿಂಗ್ ಹಾಗೂ ಮೈಕೆಲ್ ಕ್ಲಾರ್ಕ್ ನೇತೃತ್ವದ ಆಸೀಸ್ ಪಡೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತಾದರೂ ಬರಿಗೈನಲ್ಲೇ ವಾಪಾಸ್ಸಾಗಿತ್ತು. ಆದರೆ ಟಿಮ್ ಪೈನೆ ನೇತೃತ್ವದ ತಂಡ ಸಾಂಪ್ರಾದಾಯಿಕ ಎದುರಾಳಿಯ ನೆಲದಲ್ಲೇ ಇನ್ನೊಂದು ಟೆಸ್ಟ್ ಪಂದ್ಯ ಬಾಕಿ ಇರುವಾಗಲೇ ಆ್ಯಷಸ್ ಕಪ್ ತವರಿಗೆ ಕೊಂಡ್ಯೊಯುವುದನ್ನು ಖಚಿತ ಪಡಿಸಿಕೊಂಡಿದೆ. ಆ್ಯಷಸ್ ಸರಣಿಯಲ್ಲಿ ಆಸ್ಟ್ರೇಲಿಯಾ 2-1ರ ಮುನ್ನಡೆ ಕಾಯ್ದುಕೊಂಡಿದ್ದು, ಸೆಪ್ಟೆಂಬರ್ 12ರಿಂದ ಕೆನಿಂಗ್’ಟನ್ ಓವಲ್’ನಲ್ಲಿ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದ್ದು, ಆಸೀಸ್ ಡ್ರಾ ಮಾಡಿಕೊಂಡರೆ ಸರಣಿ ಕೈವಶವಾಗಲಿದೆ. ಒಂದು ವೇಳೆ ಸೋತರೂ ಸರಣಿ ಸಮವಾಗಲಿದ್ದು, ಆ್ಯಷಸ್ ಟ್ರೋಫಿ ಹಾಲಿ ಚಾಂಪಿಯನ್ ಎನಿಸಿರುವ ಆಸ್ಟ್ರೇಲಿಯಾ ತಂಡದಲ್ಲೇ ಉಳಿಯಲಿದೆ.  

ಆಸ್ಟ್ರೇಲಿಯಾ ತಂಡದ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಬರೋಬ್ಬರಿ 19 ವರ್ಷಗಳ ಬಳಿಕ ಆ್ಯಷಸ್ ಕಪ್ ತನ್ನಲ್ಲೇ ಉಳಿಸಿಕೊಂಡ ಆಸೀಸ್ ಪಡೆಗೆ ಹಲವು ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿದ್ದಾರೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?