ಆಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಆಫ್ರಿಕಾ ಸ್ಟಾರ್ ಆಲ್ರೌಂಡರ್ ಕೋಚ್..!

By Kannadaprabha News  |  First Published Sep 28, 2019, 12:48 PM IST

ಆಫ್ಘಾನಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಲ್ಯಾನ್ಸ್ ಕ್ಲೂಸ್ನರ್ ನೇಮಕವಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 


ನವದೆಹಲಿ[ಸೆ.28]: ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಲ್ಯಾನ್ಸ್ ಕ್ಲೂಸ್ನರ್ ಆಫ್ಘಾನಿಸ್ತಾನ ಕ್ರಿಕೆಟ್‌ನ ಪ್ರಧಾನ ಕೋಚ್ ಆಗಿ ನೇಮಕವಾಗಿದ್ದಾರೆ. ಫಿಲ್ ಸಿಮನ್ಸ್ ಗುತ್ತಿಗೆ ಅವಧಿ ಪೂರ್ಣಗೊಂಡ ಕಾರಣ ಪ್ರಧಾನ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದರು. 

Former South Africa all-rounder Lance Klusener has been appointed as new Head Coach by the Afghanistan Cricket Board.

Read more: https://t.co/oMxqse76NG pic.twitter.com/pLsCLNDlhU

— Afghanistan Cricket Board (@ACBofficials)

Tap to resize

Latest Videos

ಯಾರದೋ ಕೇಸಲ್ಲಿ ಸಿಲುಕಿದ ಭಾರತ ಕ್ರಿಕೆಟ್ ಸಿಬ್ಬಂದಿ

ಆಫ್ಘಾನಿಸ್ತಾನ ಕ್ರಿಕೆಟ್ ಸಂಸ್ಥೆ (ಎಸಿಬಿ) 50 ಅರ್ಜಿ ಸ್ವೀಕರಿಸಿದ್ದು, ಲೆವೆಲ್ 4 ಪ್ರಮಾಣೀಕೃತ ಕ್ಲೂಸ್ನರ್ ಅವರನ್ನೇ ಆಯ್ಕೆ ಮಾಡಿತು. ನವೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ತವರಿನ ಸರಣಿ ನೂತನ ಪ್ರಧಾನ ಕೋಚ್ ಕ್ಲೂಸ್ನರ್‌ಗೆ ಮೊದಲ ಪರೀಕ್ಷೆಯಾಗಿರಲಿದೆ.

ಧೋನಿ ಮಿಸ್ಸಿಂಗ್ ಕಹನಿಗೆ ಸಿಕ್ಕಿದೆ ರೋಚಕ ಟ್ವಿಸ್ಟ್..!

ಕೋಚ್ ಹುದ್ದೆಗೆ ಆಯ್ಕೆಯಾದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಲ್ಯಾನ್ಸ್ ಕ್ಲೂಸ್ನರ್, ವಿಶ್ವಕ್ರಿಕೆಟ್’ನ ಅದ್ಭುತ ಪ್ರತಿಭಾನ್ವಿತ ಆಟಗಾರರಿಂದ ಕೂಡಿರುವ ತಂಡದ ಜತೆ ಕಾರ್ಯ ನಿರ್ವಹಿಸಲು ಉತ್ಸುಕನಾಗಿದ್ದೇನೆ. ಆಫ್ಘಾನಿಸ್ತಾನ ತಂಡದ ಸಾಮರ್ಥ್ಯವೇನು ಎನ್ನುವುದು ಎಲ್ಲರಿಗೂ ಗೊತ್ತಿದೆ. ಇನ್ನಷ್ಟು ಕಠಿಣ ಶ್ರಮಪಟ್ಟರೆ ಆಫ್ಘನ್ ವಿಶ್ವದ ಬಲಿಷ್ಠ ತಂಡವಾಗಿ ರೂಪುಗೊಳ್ಳಲಿದೆ. ಆಫ್ಘನ್ ತಂಡ ಇನ್ನೊಂದು ಹಂತಕ್ಕೇರಲು ನೆರವಾಗುವ ರೀತಿಯಲ್ಲಿ ಕೆಲಸ ಮಾಡುತ್ತೇನೆ. 
 

click me!