ಭಾರತ ಕೋಚ್‌ ರೇಸ್‌ನಲ್ಲಿ ಶಾಸ್ತ್ರಿ ಸೇರಿ 6 ಮಂದಿ!

By Web Desk  |  First Published Aug 13, 2019, 11:53 AM IST

ಟೀಂ ಇಂಡಿಯಾ ಕೋಚ್ ಹುದ್ದೆಗೆ ಅಳೆದು-ತೂಗಿ 6 ಮಂದಿ ಹೆಸರನ್ನು ಬಿಸಿಸಿಐ ಅಂತಿಮಗೊಳಿಸಿದ್ದು, ಹಾಲಿ ಕೋಚ್ ರವಿಶಾಸ್ತ್ರಿ ಸೇರಿದಂತೆ ಆರು ಮಂದಿ ಇದೀಗ ಕಣದಲ್ಲಿದ್ದಾರೆ. ಅಷ್ಟಕ್ಕೂ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದವರಾರು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...


ನವದೆಹಲಿ[ಆ.13]: ಭಾರತ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ರೇಸ್‌ನಲ್ಲಿ ಹಾಲಿ ಕೋಚ್‌ ರವಿಶಾಸ್ತ್ರಿ ಸೇರಿ 6 ಸದಸ್ಯರಿರುವುದಾಗಿ ತಿಳಿದುಬಂದಿದೆ. 2016ರಲ್ಲಿ ಟೀಂ ಇಂಡಿಯಾ ವ್ಯವಸ್ಥಾಪಕರಾಗಿದ್ದ ರವಿಶಾಸ್ತ್ರಿ, 2017ರಲ್ಲಿ ಕುಂಬ್ಳೆ ಕೋಚ್ ಸ್ಥಾನದಿಂದ ಕೆಳಗಿಳಿದ ಬಳಿಕ ಭಾರತ ತಂಡದ  ಮುಖ್ಯ ಕೋಚ್ ಆಗಿ ಮುಂದುವರೆದಿದ್ದಾರೆ. 

ಮತ್ತೊಂದು ಅವಧಿಗೆ ಶಾಸ್ತ್ರಿಯೇ ಟೀಂ ಇಂಡಿಯಾ ಕೋಚ್‌?

Tap to resize

Latest Videos

ಸೋಮವಾರ ಬಿಸಿಸಿಐ ಅಂತಿಮ ಪಟ್ಟಿಸಿದ್ಧಪಡಿಸಿದ್ದು, ನ್ಯೂಜಿಲೆಂಡ್‌ ಮಾಜಿ ಕೋಚ್‌ ಮೈಕ್‌ ಹೆಸ್ಸನ್‌, ಆಸ್ಪ್ರೇಲಿಯಾದ ಮಾಜಿ ಆಲ್ರೌಂಡರ್‌, ಅನುಭವಿ ಕೋಚ್‌ ಟಾಮ್‌ ಮೂಡಿ, ವಿಂಡೀಸ್‌ನ ಮಾಜಿ ಕ್ರಿಕೆಟಿಗ, ಆಫ್ಘಾನಿಸ್ತಾನದ ಮಾಜಿ ಕೋಚ್‌ ಫಿಲ್‌ ಸಿಮನ್ಸ್‌, ಭಾರತ ತಂಡದ ಮಾಜಿ ವ್ಯವಸ್ಥಾಪಕ ಲಾಲ್‌ಚಂದ್‌ ರಜಪೂತ್‌, ಭಾರತದ ಮಾಜಿ ಆಲ್ರೌಂಡರ್‌ ರಾಬಿನ್‌ ಸಿಂಗ್‌ ಹಾಗೂ ಶಾಸ್ತ್ರಿ ಇದ್ದಾರೆ. 

ಕೋಚ್‌ ಆಯ್ಕೆ: ಕಪಿಲ್‌ ದೇವ್ ಸಮಿತಿಗೆ ಗ್ರೀನ್‌ ಸಿಗ್ನಲ್‌

ಕಪಿಲ್‌ ದೇವ್‌, ಅನ್ಶುಮಾನ್‌ ಗಾಯಕ್ವಾಡ್‌, ಶಾಂತ ರಂಗಸ್ವಾಮಿ ನೇತೃತ್ವದ ಬಿಸಿಸಿಐ ಕ್ರಿಕೆಟ್‌ ಸಲಹಾ ಸಮಿತಿ ಸದ್ಯದಲ್ಲೇ 6 ಮಂದಿಯ ಸಂದರ್ಶನ ನಡೆಸಲಿದ್ದು, ಈ ವಾರಾಂತ್ಯಕ್ಕೆ ಇಲ್ಲವೇ ಮುಂದಿನ ವಾರದ ಆರಂಭದಲ್ಲಿ ನೂತನ ಕೋಚ್‌ ಘೋಷಣೆ ಮಾಡಲಿದೆ.


 

click me!