ಕರೀನಾ ಕಪೂರ್ ಬೇಡಿಕೆ ಈಡೇರಿಸಿದ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್!

Published : Aug 12, 2019, 03:25 PM IST
ಕರೀನಾ ಕಪೂರ್ ಬೇಡಿಕೆ ಈಡೇರಿಸಿದ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್!

ಸಾರಾಂಶ

ಬಾಲಿವುಡ್ ನಟಿ ಕರೀನಾ ಕಪೂರ್,ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಬಳಿಕ ವಿಶೇಷ ಮನವಿ ಮಾಡಿದ್ದಾರೆ. ಇತ್ತ ಕಪಿಲ್ ಕೂಡ ಕರೀನಾ ಬೇಡಿಯನ್ನು ಅಷ್ಟೇ ಸಂತಸದಲ್ಲಿ ಈಡೇರಿಸಿದ್ದಾರೆ. ಕರೀನಾ ಕಪೂರ್ ಬೇಡಿಕೆ ಏನು? ಇಲ್ಲಿದೆ ವಿವರ.  

ಮುಂಬೈ(ಆ.12): ಟೀಂ ಇಂಡಿಯಾ ಮಾಜಿ ನಾಯಕ, 1983ರಲ್ಲಿ ಭಾರತಕ್ಕೆ  ವಿಶ್ವಕಪ್ ಗೆಲ್ಲಿಸಿಕೊಟ್ಟ ಹೀರೋ ಕಪಿಲ್ ದೇವ್, ಅಭಿಮಾನಿಗಳ ಬೇಡಿಕೆಯನ್ನು ಬಹುತೇಕ ಪೂರೈಸಿದ್ದಾರೆ. ಇದೇ ರೀತಿ ಬಾಲಿವುಡ್ ನಟಿ ಕರೀನಾ ಕಪೂರ್,  ಮಾಜಿ ಕ್ರಿಕೆಟಿಗನ ಬಳಿ ವಿಶೇಷ ಬೇಡಿಕೆಯನ್ನಿಟ್ಟಿದ್ದರು. ಇನ್ನೂ ಕಪಿಲ್ ದೇವ್ ಕೂಡ ಅಷ್ಟೇ ಸಂತಸದಲ್ಲಿ ಕರೀನಾ ಬೇಡಿಕೆಯನ್ನು ಈಡೇರಿಸಿದರು.

ಇದನ್ನೂ ಓದಿ: 1983 ವಿಶ್ವಕಪ್ ಬಯೋಪಿಕ್; ರಣವೀರ್ ಲುಕ್‌ಗೆ ಕಪಿಲ್ ಕ್ಲೀನ್ ಬೋಲ್ಡ್! 

ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡ ಕಪಿಲ್ ದೇವ್‌ಗೆ ಕರೀನಾ ಕಪೂರ್ ಮನವಿ ಮಾಡಿದ್ದರು. ಕಪಿಲ್ ಪಾಲ್ಗೊಂಡ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿರು ಕರೀನಾ, ತಮ್ಮ ಮಗ ತೈಮೂರ್ ಆಲಿ ಖಾನ್‌ಗಾಗಿ ಬ್ಯಾಟ್‌ನಲ್ಲಿ ಆಟೋಗ್ರಾಫ್ ನೀಡುವಂತೆ ಕರೀನಾ ಕೇಳಿಕೊಂಡಿದ್ದಾರೆ. 

ಇದನ್ನೂ ಓದಿ: ಕೋಚ್‌ ಆಯ್ಕೆ: ಕಪಿಲ್‌ ದೇವ್ ಸಮಿತಿಗೆ ಗ್ರೀನ್‌ ಸಿಗ್ನಲ್‌

ತಕ್ಷಣವೇ ಕಪಿಲ್ ದೇವ್  ಬ್ಯಾಟ್‌ನಲ್ಲಿ ಸಂದೇಶವನ್ನು ಬರೆದು, ಸಹಿ ಹಾಕಿದ್ದಾರೆ. ಕಪಿಲ್ ಸಹಿ ಮಾಡಿದ ಬ್ಯಾಟ್ ಪಡೆದ ಕರೀನಾ, ಇದು ನನ್ನ ಮಗನಿಗೆ ಕೊಡುವ ಅತ್ಯಂತ ಶ್ರೇಷ್ಠ ಉಡುಗೊರೆ ಎಂದು ಕರೀನಾ ಹೇಳಿದ್ದಾರೆ.  ಸೈಫ್ ಆಲಿ ಖಾನ್ ಹಾಗೂ ಕರೀನಾ ದಂಪತಿ ಪುತ್ರ ತೈಮೂರ್ ಕ್ರಿಕೆಟಿಗನಾಗಲಿ ಎಂದು ಕರೀನಾ ಹೇಳಿದ್ದಾರೆ. ಸೈಫ್ ತಂದೆ ಮನ್ಸೂರ್ ಆಲಿ ಖಾನ್ ಪಟೌಡಿ, ಭಾರತ ಕಂಡ ಅತ್ಯಂತ ಶ್ರೇಷ್ಠ ನಾಯಕರಾಗಿದ್ದರು. 

 

ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಕುರಿತ ಬಯೋಪಿಕ್ ಬಾಲಿವುಡ್‌ನಲ್ಲಿ ತಯಾರಾಗುತ್ತಿದೆ. ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.ಈ ಮೂಲಕ 1983ರ ವಿಶ್ವಕಪ್ ಹೀರೋ ಕಪಿಲ್ ದೇವ್ ಸದಾ ಸುದ್ದಿಯಲ್ಲಿದ್ದಾರೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!
2025ರಲ್ಲಿ ಪಾಕಿಸ್ತಾನಿಯರು ಗೂಗಲ್‌ ಸರ್ಚ್‌ನಲ್ಲಿ ಹುಡುಕಿದ್ದು ಟೀಂ ಇಂಡಿಯಾದ ಈ ಆಟಗಾರನನ್ನು! ಆದ್ರೆ ಅದು ಕೊಹ್ಲಿ, ರೋಹಿತ್ ಅಲ್ಲ!