ಬೆಂಗ್ಳೂರಿನ ಬೈಕ್‌ ರೇಸರ್‌ಗೆ ವಿಶ್ವ ಕಿರೀಟ!

By Web Desk  |  First Published Aug 13, 2019, 8:17 AM IST

ಮೋಟಾರ್‌ ಸೈಕ್ಲಿಂಗ್‌ ಫೆಡರೇಷನ್‌ (ಎಫ್‌ಐಎಂ) ಬಾಜಾ ಕ್ರಾಸ್‌ ಕಂಟ್ರಿ ವಿಶ್ವಕಪ್‌ನ ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ಐಶ್ವರ್ಯ ಮೊದಲ ಸ್ಥಾನ ಪಡೆದು ಇತಿಹಾಸ ಬರೆದಿದ್ದಾರೆ.


ವಾರ್ಪಲೋಟಾ (ಹಂಗೇರಿ): ಅಂತಾರಾಷ್ಟ್ರೀಯ ಮೋಟಾರ್‌ ಸೈಕ್ಲಿಂಗ್‌ ಫೆಡರೇಷನ್‌ (ಎಫ್‌ಐಎಂ) ಬಾಜಾ ಕ್ರಾಸ್‌ ಕಂಟ್ರಿ ವಿಶ್ವಕಪ್‌ನ ಮಹಿಳಾ ವಿಭಾಗದಲ್ಲಿ ಐಶ್ವರ್ಯ ಮೊದಲ ಸ್ಥಾನ ಪಡೆದು ಇತಿಹಾಸ ಬರೆದಿದ್ದಾರೆ. 4  ರ‌್ಯಾಲಿಗಳಲ್ಲಿಂದ ಒಟ್ಟು 65 ಅಂಕ ಪಡೆದ ಐಶ್ವರ್ಯ, 4 ಅಂಕಗಳಿಂದ 2ನೇ ಸ್ಥಾನ ಪಡೆದ ಪೋರ್ಚುಗಲ್‌ನ ರಿಟಾ ವಿಯೆರಾ ವಿರುದ್ಧ ಗೆಲುವು ಸಾಧಿಸಿದರು.

250 ಸಿಸಿ ಬೈಕ್‌ನಲ್ಲೇ ಸಾಧನೆ!

Tap to resize

Latest Videos

ಐಶ್ವರ್ಯ ಸಾಧನೆ ಹಿಂದೆ ದೊಡ್ಡ ಸಾಹಸವಿದೆ. ವಿಶ್ವಕಪ್‌ನ 4 ರ‌್ಯಾಲಿಗಳ ಪೈಕಿ ಎರಡು ರ‌್ಯಾಲಿಗಳಲ್ಲಿ ಅವರು ಕಡಿಮೆ ಸಾಮರ್ಥ್ಯದ ಬೈಕ್‌ ಚಲಾಯಿಸಿದರು. ಇತರೆ ರೈಡರ್‌ಗಳು 450 ಸಿಸಿ ಬೈಕ್‌ಗಳನ್ನು ಚಲಾಯಿಸಿದರೆ, ಐಶ್ವರ್ಯ 250 ಸಿಸಿ ಬೈಕ್‌ನಲ್ಲೇ ಸಾಹಸ ಮೆರೆದರು. ಎರಡು ರ‌್ಯಾಲಿಗಳ ಪೈಕಿ ಕೊನೆಯಲ್ಲಿ ನಡೆದ ಹಂಗೇರಿಯನ್‌ ಬಾಜ ಸಹ ಒಂದು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಡಿಮೆ ಸಾಮರ್ಥ್ಯದ ಬೈಕ್‌ ಆಗಿದ್ದರಿಂದ ಐಶ್ವರ್ಯಗೂ ಇತರೆ ರೈಡರ್‌ಗಳಿಗೂ 20ರಿಂದ 25 ನಿಮಿಷ ವ್ಯತ್ಯಾಸವಿರುತ್ತಿತ್ತು. ಅಲ್ಲದೇ ಅನಗತ್ಯ ಪೆನಾಲ್ಟಿಸಹ ಹಾಕಲಾಯಿತು. ಇದೆಲ್ಲದರ ನಡುವೆ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು ಅಮೋಘ ಸಾಧನೆಯೇ ಸರಿ.

ಮಾಡೆಲಿಂಗ್‌ನಲ್ಲೂ ಸೈ!

ಐಶ್ವರ್ಯ ಬೈಕ್‌ ರೇಸಿಂಗ್‌ ಜತೆ ಮಾಡೆಲಿಂಗ್‌ ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ. ಪ್ರತಿಷ್ಠಿತ ಬ್ರಾಂಡ್‌ಗಳ ಫೋಟೋಶೂಟ್‌ಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

click me!