ಡಾ ರಾಜ್‌ಕುಮಾರ್ ಅವರಿಗೆ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಇಲ್ಲದ ಆ ಕಾಲದಲ್ಲಿಯೇ ಬಾಲಿವುಡ್ ಚಿತ್ರರಂಗದೊಂದಿಗೆ, ಅಲ್ಲಿನ ದೊಡ್ಡ ಬರಹಗಾರರೊಂದಿಗೆ ನಂಟು ಬೆಳೆದಿತ್ತು. ಪ್ರಿನ್ಸ್ ಸಲೀಮ್ ಹೆಸರಿನಲ್ಲಿ 1969ರಲ್ಲಿ ಈ ಕಥೆಯನ್ನು ಸಲೀಮ್ ಅವರು ಬರೆದಿದ್ದರು. ಅದು ಮೊದಲಿಗೆ 'ದೋ ಭಾಯಿ' ಹೆಸರಿನಲ್ಲಿ..
ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ (Dr Rajkumar) ಅವರು ಕನ್ನಡ ಚಿತ್ರರಂಗಕ್ಕೆ ಯಾವತ್ತೂ ಮಹಾನ್ ಕಿರೀಟ ಇದ್ದಂತೆ. ಅವರು ನಟಿಸಿದಷ್ಟು ಚಿತ್ರಗಳಲ್ಲಿ ಬೇರೆ ಯಾರೂ ನಟಿಸಿಲ್ಲ ಎಂಬ ಸಂಗತಿ ಒಂದು ವಿಶೇಷತೆಯಾದರೆ, ಅವರಷ್ಟು ಸರಳ-ಸಜ್ಜನಿಕೆ ಹೊಂದಿದ್ದ ವ್ಯಕ್ತಿಗೂ ಕೂಡ ತುಂಬಾ ವಿರಳ ಎಂಬುದು ಮತ್ತೊಂದು ವಿಶೇಷತೆ. ಅಂಥ ನಟ ಡಾ ರಾಜ್‌ಕುಮಾರ್ ಅವರಿಗೆ ಬಾಲಿವುಡ್ ನಂಟು ಸಹಾ ಇತ್ತು ಎಂಬ ಸಂಗತಿ ಅನೇಕರಿಗೆ ತಿಳಿದಿಲ್ಲ.
ಹೌದು, ಡಾ ರಾಜ್‌ಕುಮಾರ್ ಅವರಿಗೆ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಇಲ್ಲದ ಆ ಕಾಲದಲ್ಲಿಯೇ ಬಾಲಿವುಡ್ ಚಿತ್ರರಂಗದೊಂದಿಗೆ, ಅಲ್ಲಿನ ದೊಡ್ಡ ಬರಹಗಾರರೊಂದಿಗೆ ನಂಟು ಬೆಳೆದಿತ್ತು. ಅದು ಇಂದಿನ ಸ್ಟಾರ್ ನಟ ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್. 'ಸಲೀಮ್-ಜಾವೇದ್' ಹೆಸರಿನಲ್ಲಿ ಹಲವು ದಶಕಗಳ ಕಾಲ ಹಿಂದಿ ಚಿತ್ರರಂಗದವನ್ನು ಆಳಿದ್ದ ಈ ಜೋಡಿ ಬರೆದ ಕಥೆಯೇ ಡಾ ರಾಜ್ ನಟನೆಯ 'ಪ್ರೇಮದ ಕಾಣಿಕೆ. ನಿಜ ಹೇಳಬೇಕು ಎಂದರೆ, ಈ ಕತೆ (Premada Kanike) ಜಾವೇದ್ ಇಲ್ಲದೇ ಕೇವಲ ಸಲೀಮ್ ಅವರೇ ಬರೆದಿದ್ದು ಎಂಬುದು ಸಹ ಉಲ್ಲೇಖವಿದೆ.
undefined
ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟ ಕನ್ನಡದ ಸ್ವೀಟಿ, ಅಂತೂ ಇಂತೂ ಬಾಯ್ಬಿಟ್ರು ರಾಧಿಕಾ ಕುಮಾರಸ್ವಾಮಿ!
ಪ್ರಿನ್ಸ್ ಸಲೀಮ್ ಹೆಸರಿನಲ್ಲಿ 1969ರಲ್ಲಿ ಈ ಕಥೆಯನ್ನು ಸಲೀಮ್ ಅವರು ಬರೆದಿದ್ದರು. ಅದು ಮೊದಲಿಗೆ 'ದೋ ಭಾಯಿ' ಹೆಸರಿನಲ್ಲಿ ಹಿಂದಿ ಸಿನಿಮಾ ಆಗಿ ತೆರೆಗೆ ಬಂದಿತ್ತು. ಶೋಲೆ ಬಳಿಕ ಸಲೀಮ್-ಜಾವೇದ್ ಜೋಡಿಯ ಈ ಚಿತ್ರ ತೆರೆಗೆ ಬಂದಿತ್ತು. ಇದೇ ಕಥೆ ಕನ್ನಡದಲ್ಲಿ 1976 ರಲ್ಲಿ 'ಪ್ರೇಮದ ಕಾಣಿಕೆ' ಹೆಸರಿನಲ್ಲಿ ಕನ್ನಡದಲ್ಲಿ ತೆರೆ ಕಂಡಿತ್ತು. ಈ ಚಿತ್ರದಲ್ಲಿ ಡಾ ರಾಜ್‌ಕುಮಾರ್ ಜೊತೆ ಆರತಿ, ಜಯಮಾಲಾ ನಾಯಕಿಯರಾಗಿ ನಟಿಸಿದ್ದರು. ಈ ಚಿತ್ರವನ್ನು ಕನ್ನಡದಲ್ಲಿ ವಿ ಸೋಮಶೇಖರ್ ಅವರು ನಿರ್ದೇಶನ ಮಾಡಿದ್ದರು.
ಅಷ್ಟೇ ಅಲ್ಲ, ಈ ಸಿನಿಮಾದಲ್ಲಿ ಡಾ ರಾಜ್‌ಕುಮಾರ್ ಮಕ್ಕಳಾದ ಲೋಹಿತ್ (ಪುನೀತ್ ರಾಜ್‌ಕುಮಾರ್) ಹಾಗೂ ಪೂರ್ಣಿಮಾ ಮೊಟ್ಟಮೊದಲ ಬಾರಿಗೆ ನಟಿಸಿ ತೆರೆಯಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಕಥೆ ಬಾಲಿವುಡ್ ಬರಹಗಾರರಾರ ಸಲೀಮ್-ಜಾವೇದ್ ಅವರು ಬರೆದ ಕಥೆ ಎಂಬುದು ಹಲವರಿಗೆ ತಿಳಿದಿಲ್ಲ. ಜೊತೆಗೆ, ಈ ಸಲೀಮ್-ಜಾವೇದ್ ಜೋಡಿ ದಕ್ಷಿಣ ಭಾರತದ ಚಿತ್ರರಂಗದಿಂದಲೇ ತಮ್ಮ ಕಥೆಗಾರಿಕೆ ವೃತ್ತಿಯನ್ನು ಶುರು ಮಾಡಿದ್ದು ಎಂಬುದು ಕೂಡ ಹಲವರ ಪಾಲಿಗೆ ಸೀಕ್ರೆಟ್ ಆಗಿಯೇ ಉಳಿದಿದೆ.
ರಶ್ಮಿಕಾ-ರಕ್ಷಿತ್ ಮ್ಯಾಟರ್ ಬಗ್ಗೆ ಪ್ರಮೋದ್ ಶೆಟ್ಟಿ ಏನಂದ್ರು? ಅವ್ರು ಯಾರನ್ನ ಫಾಲೋ ಮಾಡ್ತಿದಾರಂತೆ..?
ಪ್ರಿನ್ಸ್ ಸಲೀಮ್ ಕಥೆಯು ಹಿಂದಿಯಲ್ಲಿ ದೋ ಭಾಯಿ, ಕನ್ನಡದಲ್ಲಿ ಪ್ರೇಮದ ಕಾಣಿಕೆ, ತಮಿಳಿನಲ್ಲಿ ಪೊಲ್ಲಾಧವನ್ (Polladhavan) ಹಾಗು ಮತ್ತೆ ಹಿಂದಿಯಲ್ಲಿ 1981ರಲ್ಲಿ ರಾಜ್ ಹೆಸರಿನಲ್ಲಿ ಸಿನಿಮಾಗಳಾಗಿ ತೆರೆ ಕಂಡಿದೆ. ಒಂದೇ ಕಥೆಯು ಹಲವು ಚಿಕ್ಕಪುಟ್ಟ ಬದಲಾವಣೆಯೊಂದಿಗೆ ಮೂರು ಭಾಷೆಗಳಲ್ಲಿ ತೆರೆ ಕಂಡು ಎಲ್ಲಾ ಕಡೆ ಸೂಪರ್ ಹಿಟ್ ದಾಖಲಿಸಿತ್ತು ಎಂಬುದು ವಿಶೇಷ ಸಂಗತಿ ಎನ್ನಬಹುದು.
ಆ ಕಾಲದಲ್ಲೊ, ಅಂದರೆ 60-70ರ ದಶಕದಲ್ಲಿ ಮಾಧ್ಯಮಗಳು ಈಗಿನಷ್ಟು ಹೆಚ್ಚಾಗಿ ಇರಲಿಲ್ಲ. ಈ ಕಾರಣಕ್ಕೆ ಹಲವು ಸಂಗತಿಗಳು ಹೊರಜಗತ್ತನ್ನು ತಲುಪುತ್ತಲೇ ಇರಲಿಲ್ಲ. ಇಂದಿನ ಕಾಲದಲ್ಲಿ ಹಾಗಲ್ಲ, ಎಲ್ಲಾ ವಿಷಯಗಳೂ ಮೀಡಿಯಾ ಹಾಗು ಸೋಷಿಯಲ್ ಮೀಡಿಯಾ ಮೂಲಕ ಕ್ಷಣಾರ್ಧದಲ್ಲಿ ಇಡಿ ಜಗತ್ತನ್ನೂ ತಲುಪಬಲ್ಲವು. ಆದರೆ, ಅಂದಿನ ಸಂಗತಿಗಳೂ ಕೂಡ ಇಂದು ರೀಚ್ ಆಗುತ್ತಿವೆ ಎಂಬುದು ಸಂತೋಷ ಹಾಗೂ ಸಮಾಧಾನದ ಸಂಗತಿ ಎನ್ನಬಹುದು.
ಒಟ್ಟಿನಲ್ಲಿ, ಕನ್ನಡದ ವರನಟ ಡಾ ರಾಜ್‌ಕುಮಾರ್ ಅವರಿಗೆ 70ರ ದಶಕದಲ್ಲಿಯೇ ಬಾಲಿವುಡ್ ಬರಹಗಾರರಿಂದ ಪಡೆದ ಕಥೆ ಸಿನಿಮಾ ಆಗಿತ್ತು. ಅದೇ ಸಲೀಮ್ ಖಾನ್ ಮಗ ಸಲ್ಮಾನ್ ಖಾನ್ ಇಂದು ಬಾಲಿವುಡ್ ಸ್ಟಾರ್ ನಟರಲ್ಲಿ ಒಬ್ಬರಾಗಿ ಖ್ಯಾತಿ ಪಡೆದಿದ್ದಾರೆ. ಡಾ ರಾಜ್‌ಕುಮಾರ್ ಮಾತ್ರವಲ್ಲ, ಪುನೀತ್ ರಾಜ್‌ಕುಮಾರ್ ಕೂಡ ಸಲೀಮ್ ಅವರ ಕಥೆಯ ಮೂಲಕವೇ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದಾರೆ ಎಂಬುದು ಕೂಡ ಗಮನಸಿಬೇಕಾದ ಸಂಗತಿ.
ಪವಿತ್ರಾ ಗೌಡ ಹಳೆಯ ವಿಡಿಯೋ ಯಾಕಿಷ್ಟು ವೈರಲ್ ಆಗ್ತಿದೆ? ಅಂಥದ್ದು ಏನಿದೆ ಅದ್ರಲ್ಲಿ ನೋಡಿ..!
ಈ ಸಂಗತಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಈಗ ತಿಳಿದರೂ ಖಂಡಿತ ಖುಷಿ ಪಡುತ್ತಾರೆ ಎನ್ನಬಹುದು. ಏಕೆಂದರೆ, ಈಗ ಮೊದಲಿನಂತೆ ಸೌತ್-ನಾರ್ತ್ ಎಂಬ ಭೇದ-ಭಾವ ಇಲ್ಲ. ಈಗ ಇಡೀ ಇಂಡಿಯಾ ಸಿನಿಮಾರಂಗ ಎಂದು ಕರೆಯವುಷ್ಟು ಭಾರತೀಯ ಚಿತ್ರರಂಗ ಬದಲಾಗಿದೆ. ಜೊತೆಗೆ, ಪ್ಯಾನ್ ಇಂಡಿಯಾ ಟ್ರೆಂಡ್ ನಡೆಯುತ್ತಿರುವ ಕಾರಣಕ್ಕೆ, ಕನ್ನಡ ಚಿತ್ರರಂಗ ಹಾಗೂ ಬಾಲಿವುಡ್ ಎಂಬ ವ್ಯತ್ಯಾಸ ಅಷ್ಟೇನೂ ಗೋಚಿರಿಸುತ್ತಿಲ್ಲ.