ವಿಶ್ವದರ್ಜೆಯ ರಾಣಿ ಕಮಲಪತಿ ರೈಲ್ವೇ ಸ್ಟೇಶನ್‌ಗೆ ಹೆಸರು ತಂದುಕೊಟ್ಟ ಆ ದಿಟ್ಟ ಹೆಣ್ಣು!

By Bhavani BhatFirst Published Sep 10, 2024, 6:33 PM IST
Highlights

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಭೋಪಾಲ್‌ನ ರಾಣಿ ಕಮಲಪತಿ ರೈಲು ನಿಲ್ದಾಣವನ್ನು ಉದ್ಘಾಟಿಸಿದ್ದಾರೆ. ಇದು ವಿಶ್ವ ದರ್ಜೆಯ ಶ್ರೇಷ್ಠ ಮಟ್ಟದ ರೈಲು ನಿಲ್ದಾಣ. ಅಂದ ಹಾಗೆ, ಈ ಸ್ಟೇಶನ್‌ಗೆ ಹೆಸರು ತಂದುಕೊಟ್ಟ ರಾಣಿ ಕಮಲಪತಿ ಯಾರು? 
 

ರಾಣಿ ಕಮಲಪತಿ. ಇಂದಿಗೂ ಮಧ್ಯಪ್ರದೇಶದ ಜನರ ಮನದಲ್ಲಿ ಹಸಿರಾಗಿ ಉಳಿದ ನೆನಪಿನ ದಿಟ್ಟ ಹೆಣ್ಣುಮಗಳು. ಆಕೆ ಗೊಂಡ ರಾಣಿ. ಆಕೆಯ ನೆನಪಿನಲ್ಲಿ ಭೋಪಾಲದ ಹಬೀಬ್‌ಗಂಜ್‌ ರೈಲ್ವೇ ನಿಲ್ದಾಣಕ್ಕೆ ಈ ಮರುನಾಮಕರಣ ಮಾಡಲಾಗಿದೆ. ಈ ರೈಲು ನಿಲ್ದಾಣ ವಿಮಾನ ನಿಲ್ದಾಣವನ್ನೂ ಮೀರಿಸುವ  ಸೌಕರ್ಯಗಳನ್ನು ಹೊಂದಿದೆ. ಬನ್ನಿ ಈಗ ರಾಣಿ ಕಮಲಪತಿಯ ಬಗ್ಗೆ ತಿಳಿಯೋಣ. 

ರಾಣಿ ಕಮಲಪತಿ ಆಗಿನ ರಾಜ್ಯವಾದ ಸಲಾಕಾನ್‌ಪುರ, ಸೆಹೋರ್‌ನ ರಾಜ ಕಿರ್ಪಾಲ್ ಸಿಂಗ್ ಸರೌತಿಯಾನ ಮಗಳು. ಅವಳು ಕುದುರೆ ಸವಾರಿ ಪರಿಣತೆ, ಕುಸ್ತಿಪಟು ಮತ್ತು ಬಿಲ್ಲುಗಾರ್ತಿ. ತನ್ನ ತಂದೆಯ ಮಿಲಿಟರಿ ಪಡೆಗೆ ಸೇನಾಪತಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದಳು. ರಾಣಿ ಕಮಲಪತಿ ಕೇವಲ ಬುದ್ಧಿವಂತೆ,  ಧೈರ್ಯಶಾಲಿ ಮಾತ್ರ ಆಗಿರಲಿಲ್ಲ. ಸಹಾನುಭೂತಿಯುಳ್ಳವಳಾಗಿದ್ದಳು. 

Latest Videos

16ನೇ ಶತಮಾನದಲ್ಲಿ 750 ಹಳ್ಳಿಗಳನ್ನು ವಿಲೀನಗೊಳಿಸಿ ಆಳಿದ ಗಿನ್ನರ್‌ನ ಗೊಂಡ ಸೇನಾಧಿಕಾರಿ ನಿಜಾಮ್ ಷಾ ಅವರ ಏಳು ಹೆಂಡತಿಯರಲ್ಲಿ ರಾಣಿ ಕಮಲಪತಿ ಒಬ್ಬಳು. ನಿಜಾಮ್ ಷಾ 1722 ರಲ್ಲಿ ತನ್ನ ಪ್ರೀತಿಯ ಸಂಕೇತವಾಗಿ ಕಮಲಪತಿ ಮಹಲ್ ಅನ್ನು ನಿರ್ಮಿಸಿದ. ಅದಿ ಇಂದು ಮಧ್ಯಪ್ರದೇಶದ ಅತಿ ಮುಖ್ಯ ಸ್ಮಾರಕಗಳಲ್ಲಿ ಒಂದು. ಅದನ್ನು ಇಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಂರಕ್ಷಿಸುತ್ತಿದೆ. 

ನಿಜಾಮ್ ಷಾನ ದಾಯಾದಿ ಷಾ ಆಲಂ ಎಂಬಾತ, ರಾಣಿ ಕಮಲಪತಿಯನ್ನು ಕೂಡಲು ಬಯಸಿದ್ದ. ಆದರೆ ರಾಣಿ ಆತನನ್ನು ತಿರಸ್ಕರಿಸಿದಳು. ಇದರಿಂದ ರೊಚ್ಚಿಗೆದ್ದ ಆತ, ನಿಜಾಮ್‌ ಷಾಗೆ ಅನ್ನದಲ್ಲಿ ಬಿಷ ಹಾಕಿ ಕೊಲ್ಲುತ್ತಾನೆ. ಇದರ ಸೇಡನ್ನು ತೀರಿಸಿಕೊಳ್ಳಲು ರಾಣಿ, ಮೊಗಲ್‌ ಸೇನಾಧಿಕಾರಿ ದೋಸ್ತ್ ಮೊಹಮ್ಮದ್ ಖಾನ್ ಎಂಬಾತನ ಸಹಾಯವನ್ನು ಕೋರುತ್ತಾಳೆ. ಆತ ಸೈನ್ಯದ ಸಮೇತ ಬಂದು ಷಾ ಆಲಂನನ್ನು ಕೊಂದು ಹಾಕಿ ಆ ಪ್ರಾಂತ್ಯದ ಆಡಳಿತವನ್ನು ರಾಣಿಗೆ ವಹಿಸುತ್ತಾನೆ. 

ಆದರೆ ನಂತರ ದೋಸ್ತ್‌ ಮೊಹಮ್ಮದ್‌ ಖಾನ್‌ನ ಕಣ್ಣು ಕೂಡ ರಾಣಿ ಕಮಲಪತಿಯ ಮೇಲೆ ಬೀಳುತ್ತದೆ. ಅವಳೊಂದಿಗೆ ಇಡೀ ಭೋಪಾಲ್ ರಾಜ್ಯವನ್ನು ವಶಪಡಿಸಿಕೊಳ್ಳಲು ಆತ ಬಯಸುತ್ತಾನೆ. ಇದಕ್ಕಾಗಿ ಸೈನ್ಯವನ್ನು ಕಳಿಸುತ್ತಾನೆ. ಆದರೆ ಅವರ ಜೊತೆ ಹೋರಾಡಲು ಅಗತ್ಯವಾದ ಸನ್ನದ್ಧತೆ ರಾಣಿಯಲ್ಲಿರಲಿಲ್ಲ. ಹೀಗಾಗಿ ಆಕೆ ತನ್ನ ಮಾನಗೌರವವನ್ನು ಉಳಿಸಿಕೊಳ್ಳಲು ʼಜೌಹರ್‌ʼ ಹೋಗುತ್ತಳೆ. ಜಲಸಮಾಧಿ ಆಗುತ್ತಾಳೆ. ಇದು ಆಗಿನ ರಾಣಿಯರು ಅನುಸರಿಸುತ್ತಿದ್ದ ಒಂದು ಬಗೆಯ ಆತ್ಮತ್ಯಾಗ ಪದ್ಧತಿ. 

ಆದರೆ ರಾಣಿ ಕಮಲಪತಿ ಮಾತ್ರ ಮಧ್ಯಪ್ರದೇಶದ ಜನತ ಪ್ರಜ್ಞೆಯಲ್ಲಿ ಸ್ವಾಭಿಮಾನ ತ್ಯಾಗಗಳ ಪಾತ್ರವಾಗಿ ಜೀವಂತವಾಗಿ ಇದ್ದಾಳೆ. ಈಗ ವಿಶ್ವ ದರ್ಜೆಯ ರೈಲು ನಿಲ್ದಣಕ್ಕೆ ಇಂಥ ಭವ್ಯ ವ್ಯಕ್ತಿತ್ವದ ಹೆಸರನ್ನು ಇಡಲಾಗಿದೆ. ಇದನ್ನು ಹಿಂದೆ ಹಬೀಬ್‌ಗಂಜ್ ರೈಲು ನಿಲ್ದಾಣ ಎಂದು ಕರೆಯಲಾಗುತ್ತಿತ್ತು. ಇದು ನಿಸ್ಸಂದೇಹವಾಗಿ ಭಾರತದ ಅತ್ಯುತ್ತಮ ಖಾಸಗಿ ರೈಲು ನಿಲ್ದಾಣ. 

ವರ್ಲ್ಡ್‌ ಕ್ಲಾಸ್‌ ರೈಲ್ವೆ ಸ್ಟೇಶನ್‌ ಆಗಿರುವ ಕಮಲಪತಿಯಲ್ಲಿ ಈ ಕೆಳಗಿನ ಎಲ್ಲಾ ಸೌಲಭ್ಯಗಳು ಇವೆ. 

1) ಕ್ಲಾಕ್ ರೂಮ್ಸ್/ ಸೇಫ್ಟಿ ಲಾಕರ್ಸ್: ರಾಣಿ ಕಮಲಾಪತಿ ರೈಲ್ವೇ ನಿಲ್ದಾಣದಲ್ಲಿ ಸುರಕ್ಷತಾ ಲಾಕರ್‌ಗಳೊಂದಿಗೆ ಕ್ಲೋಕ್ ರೂಮ್‌ಗಳ ಸೌಲಭ್ಯ ಲಭ್ಯವಿದೆ. ಲಗೇಜ್ ಇಡುವುದಕ್ಕೆ ಮತ್ತು ಭದ್ರತೆಗಾಗಿ ಪ್ರಯಾಣಿಕರಿಗೆ ಕ್ಲೋಕ್‌ರೂಮ್‌ಗಳನ್ನು ಒದಗಿಸಲಾಗಿದೆ. 

2) ವಿಶ್ರಾಂತಿ ಕೊಠಡಿಗಳು/ ವಸತಿ ನಿಲಯಗಳು: RKMP ರೈಲ್ವೇ ನಿಲ್ದಾಣ ದೀರ್ಘ ಪ್ರಯಾಣಕ್ಕೆ ಮುನ್ನ ಸ್ವಲ್ಪ ಸಮಯ ಉಳಿಯಲು ಬಯಸುವ ಪ್ರಯಾಣಿಕರಿಗೆ ಸ್ವಚ್ಛವಾದ ಸಿಂಗಲ್, ಡಬಲ್ ಮತ್ತು ಡಾರ್ಮಿಟರಿ ಆಕ್ಯುಪೆನ್ಸಿ ಕೋಣೆಗಳನ್ನು ಒದಗಿಸಿದೆ. ಕೊಠಡಿಗಳು 24X7 ಪವರ್ ಬ್ಯಾಕಪ್‌ನೊಂದಿಗೆ ಸುಸಜ್ಜಿತವಾಗಿವೆ.

3) ಗಾಲಿಕುರ್ಚಿ ಸೌಲಭ್ಯಗಳು: ಅಂಗವಿಕಲರು ಮತ್ತು ದೈಹಿಕವಾಗಿ ಅಶಕ್ತ ಪ್ರಯಾಣಿಕರಿಗೆ ನಿಲ್ದಾಣದಲ್ಲಿ ಗಾಲಿಕುರ್ಚಿಗಳು ಮತ್ತು ಬ್ಯಾಟರಿ ಚಾಲಿತ ಕಾರುಗಳನ್ನು ಒದಗಿಸಲಾಗಿದೆ.

4) ಕಿಡ್ಸ್ ಪ್ಲೇ ಝೋನ್: ರಾಣಿಕಮಲಪತಿ ರೈಲು ನಿಲ್ದಾಣದಲ್ಲಿ ಮಕ್ಕಳಿಗಾಗಿ ಸುರಕ್ಷಿತ ಆಟದ ವಲಯ ಒದಗಿಸಲಾಗಿದೆ. ಈ ವಲಯ ಆಟಿಕೆ ರೈಲುಗಳನ್ನು ಒಳಗೊಂಡಿದೆ. ಮಕ್ಕಳು ಆನಂದಿಸಲು, ರೈಲು ಪ್ರಯಾಣದ ದಣಿವಿನ ನಂತರ ಅಥವಾ ಮೊದಲು ತಮ್ಮ ಸಮಯವನ್ನು ಕಳೆಯಲು ಹೊಂದಲು ಸ್ಥಳವನ್ನು ಮೀಸಲಿಟ್ಟಿದೆ. 

5) ಫುಡ್ ಕೋರ್ಟ್ ಏರಿಯಾ: ನಿಲ್ದಾಣ ಆಹಾರ ಮಳಿಗೆಗಳಿಗೆ ಮೀಸಲಾದ ಸ್ಥಳವನ್ನು ಒದಗಿಸಿದೆ. ಅಲ್ಲಿ ನಿಮ್ಮ ಹಸಿವಿನ ಕ್ರೇವಿಂಗ್‌ ಪೂರೈಸಲು ಬೇಕಾದ ಪ್ರತಿಯೊಂದು ಆಹಾರ ಪದಾರ್ಥದ ಮಳಿಗೆಯನ್ನೂ ಕಾಣಬಹುದು. ಇದು ಎಲ್ಲಾ ಸ್ವಾದ, ರುಚಿ ವೈವಿಧ್ಯಗಳನ್ನು ಹೊಂದಿದೆ. ಪ್ರಯಾಣಿಕರ ವಿವಿಧ ಆಯ್ಕೆಗಳನ್ನು ಪೂರೈಸಲು ವೈವಿಧ್ಯಮಯ ಹಿನ್ನೆಲೆಗಳಿಂದ ಲಭ್ಯವಿದೆ. ಫುಡ್ ಕೋರ್ಟ್‌ನಿಂದ ನೀವು ಖರೀದಿಸುವ ಆಹಾರದ ಗುಣಮಟ್ಟ, ರುಚಿ ಮತ್ತು ಪ್ರಕಾರ ಅವಲಂಬಿಸಿ ಬೆಲೆ ಬದಲಾಗುತ್ತದೆ.

6) ಸಿಸಿಟಿವಿ ಕಣ್ಗಾವಲು: ಪ್ರಯಾಣಿಕರಿಗೆ ಸುರಕ್ಷಿತ ಕ್ಯಾಂಪಸ್ ಒದಗಿಸಲು ಮತ್ತು ಭದ್ರತಾ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು RKMP ಕಾಯುವ ಕೊಠಡಿಗಳು, ಮೀಸಲಾತಿ ಕೌಂಟರ್, ಪಾರ್ಕಿಂಗ್ ಪ್ರದೇಶ, ಪ್ರವೇಶ / ನಿರ್ಗಮನ, ಕಾಲು ಸೇತುವೆಗಳಲ್ಲಿ ವೀಡಿಯೊ ಕಣ್ಗಾವಲು ವ್ಯವಸ್ಥೆ ಇಡಲಾಗಿದೆ. ನಿಲ್ದಾಣದ ಆವರಣದಲ್ಲಿ ಯಾವುದೇ ಕುಚೇಷ್ಟೆ, ಕಿಡಿಗೇಡಿತನ ಮಾಡುವಂತಿಲ್ಲ. ಇದರಿಂದ ಪ್ರಯಾಣಿಕರು ಸುರಕ್ಷಿತ ಪ್ರಯಾಣದ ಅನುಭವ.

7) ಲಿಫ್ಟ್‌ಗಳು, ಎಲಿವೇಟರ್‌, ಎಸ್ಕಲೇಟರ್‌: ವಯಸ್ಸಾದವರು, ಮಕ್ಕಳು, ಅಶಕ್ತರು ಸುಗಮವಾಗಿ ಓಡಾಡಲು, ತಮ್ಮ ಬ್ಯಾಗುಗಳನ್ನು ಸಾಗಿಸಲು, ಕಾನ್ಕೋರ್ಸ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಿಗೆ ಒಯ್ಯಲು ಸುಲಭವಾಗುವಂತೆ, ವಯಸ್ಸಾದವರ ವೇಗವನ್ನು ಹೊಂದಿಸುವ ನಿಧಾನವಾದ ಇಳಿಜಾರುಗಳು ಮತ್ತು ಎಸ್ಕಲೇಟರ್‌ಗಳು ಇವೆ. ಜೊತೆಗೆ ವಿಶಾಲವಾದ ಲಿಫ್ಟ್‌ಗಳು.

ಭಾರತೀಯ ರೈಲ್ವೆ ನಿಯಮ: ಸ್ಲೀಪರ್ ಕೋಚ್ ಬುಕ್ ಮಾಡಿದ್ದರೂ ಮಧ್ಯದ ಸೀಟಿನಲ್ಲಿ ಈ ಸಮಯದಲ್ಲಿ ಮಲಗುವಂತಿಲ್ಲ!
 

8) ಅಂಗವಿಕಲರಿಗೆ ಪಾರ್ಕಿಂಗ್: ನಿಲ್ದಾಣದಲ್ಲಿ ಅಂಗವಿಕಲರಿಗೆ ಪ್ರತ್ಯೇಕ ಪಾರ್ಕಿಂಗ್ ಸ್ಥಳವಿದೆ. ಇದು ಸಾಮಾನ್ಯ ಪಾರ್ಕಿಂಗ್‌ ಜಾಗದ ದಟ್ಟಣೆಯ ತೊಂದರೆ ಇವರಿಗೆ ಆಗದಂತೆ ನೋಡಿಕೊಳ್ಳುತ್ತದೆ. ಅವರಿಗೆ ಯಾವುದೇ ಅನನುಕೂಲತೆ ಉಂಟಾಗದಂತೆ ನೋಡಿಕೊಳ್ಳುತ್ತದೆ. ಕೊನೆಯ ಕ್ಷಣದ ತೊಂದರೆ ತಪ್ಪಿಸಲು ಪಾರ್ಕಿಂಗ್ ಪ್ರದೇಶದ ಕಾಯ್ದಿರಿಸುವಿಕೆಯೂ ಲಭ್ಯ.

9) ವಾಶ್‌ರೂಮ್‌ಗಳು ಮತ್ತು ಕುಡಿಯುವ ನೀರು: ಪ್ರಯಾಣಿಕರಿಗೆ ನೈರ್ಮಲ್ಯದ ವಾತಾವರಣವನ್ನು ಖಚಿತಪಡಿಸಿಕೊಳ್ಳಲು RKMPಯ ಪ್ರತಿ ಪ್ಲಾಟ್‌ಫಾರ್ಮ್‌ನಲ್ಲಿ ಪುರುಷ ಮತ್ತು ಮಹಿಳಾ ಪ್ರಯಾಣಿಕರಿಗೆ ಪ್ರತ್ಯೇಕ ವಾಶ್‌ರೂಮ್‌ಗಳಿವೆ. ಜೊತೆಗೆ ಸುರಕ್ಷಿತ ಕುಡಿಯುವ ನೀರಿನ ಸೌಲಭ್ಯ ಸಹ. 

10) ವಿಐಪಿ ಲೌಂಜ್ ಮತ್ತು ವೈಫೈ ಸೌಲಭ್ಯ: ನಿಲ್ದಾಣದಲ್ಲಿ ಸಂಪೂರ್ಣ ಹವಾನಿಯಂತ್ರಿತ ಸೌಲಭ್ಯಗಳೊಂದಿಗೆ ಎಕ್ಸಿಕ್ಯೂಟಿವ್‌ ಲಾಂಜ್‌ಗಳನ್ನು ಒದಗಿಸಲಾಗಿದೆ. ಅಲ್ಲಿ ರೈಲ್ವೇ ಪ್ರಯಾಣಿಕರು ತಮ್ಮ ರೈಲುಗಳಿಗಾಗಿ ಕಾಯುತ್ತಿರುವಾಗ ಉಳಿಯಬಹುದು. ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಉಚಿತ ವೈಫೈ ಸೌಲಭ್ಯವೂ ಇದೆ. 

ಇವೆಲ್ಲವೂ ಈ ನಿಲ್ದಾಣ ಉಳಿದ ನಿಲ್ದಾಣಗಳಿಗಿಂತ ಎದ್ದು ಕಾಣುವಂತೆ ಮಾಡುತ್ತದೆ. ಇವೆಲ್ಲದರ ಹೊರತಾಗಿ RKMPಯಲ್ಲಿ ಸಮರ್ಪಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ, ನೀರು ನಿರ್ವಹಣಾ ವ್ಯವಸ್ಥೆ, ಸೌರ ಫಲಕಗಳು ಮತ್ತು ಭವ್ಯವಾದ ಏರ್ ಕಾನ್ಕೋರ್ಸ್ ಇವೆ.

ಜಗತ್ತಿನ ನಾಲ್ಕನೇ ಅತಿದೊಡ್ಡ ರೈಲು ಜಾಲ ಹೊಂದಿದ ಭಾರತದ ರೈಲ್ವೆ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು!
 

click me!