ಸಿಗಂದೂರು ದೇಗುಲಕ್ಕೆ ತೆರಳುತ್ತಿದ್ದ ಬಸ್ ಅಪಘಾತ, ಶರಾವತಿ ಹಿನ್ನೀರಿಗೆ ಬಿದ್ದ ವಾಹನ!

Published : Nov 26, 2022, 09:30 PM ISTUpdated : Nov 26, 2022, 09:36 PM IST
ಸಿಗಂದೂರು ದೇಗುಲಕ್ಕೆ ತೆರಳುತ್ತಿದ್ದ ಬಸ್ ಅಪಘಾತ, ಶರಾವತಿ ಹಿನ್ನೀರಿಗೆ ಬಿದ್ದ ವಾಹನ!

ಸಾರಾಂಶ

ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ಪ್ರಯಾಣಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಶರಾವತಿ ಹಿನ್ನೀರಿಗೆ ಬಿದ್ದ ಘಟನೆ ನಡೆದಿದೆ. ಸಾಗರ ತಾಲ್ಲೂಕು ಹೊಳೆಬಾಗಿಲು ಸಮೀಪ ನಡೆದ ಅಪಘಾತ ನಡೆದಿದೆ. ಚೌಡೇಶ್ವರಿ ಅನುಗ್ರಹದಿಂದ ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಶಿವಮೊಗ್ಗ(ನ.26):  ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ತೆರಳತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಶರವಾತಿ ಹಿನ್ನೀರಿಗೆ ಬಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೊಳೆಬಾಗಿಲು ಸಮೀಪ ನಡೆದಿದೆ. 40 ಪ್ರಯಾಣಿಕರು ಈ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಸಾಗರದಿಂದ ಸಿಗಂದೂರು ಮಾರ್ಗವಾಗಿ ಚಲಿಸುವ ಗಜಾನನ ಸಾರಿಗೆ ಸಂಸ್ಥೆ ಬಸ್ ಅಪಘಾತಕ್ಕೀಡಾಗಿದೆ. ಸಿಗಂದೂರು ಚೌಡೇಶ್ವರಿ ಅನುಗ್ರಹದಿಂದ ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿದ ಬಸ್ ಭಾರಿ ಅಪಘಾತದತ್ತ ಸಾಗಿತ್ತು. ಆದರೆ ಚಾಲನಕ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಇದೇ ವೇಳೆ ಸ್ಥಳೀಯರು ಹಾಗೂ ಸಾರ್ವಜನಿಕರು ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡಿದ್ದಾರೆ.  

 

ಬೆಂಗಳೂರು: ಟೋಲ್‌ ತಪ್ಪಿಸಲು ಹೋಗಿ ರಸ್ತೆ ತಡೆಗೋಡೆಗೆ ಡಿಕ್ಕಿ, ಕ್ಯಾಬ್‌ ಪಲ್ಟಿ

ಸಿಂಗದೂರುಗೆ ತೆರಳು ನದಿ ದಾಟಬೇಕು. ಲಾಂಜ್ ಮೂಲಕ ಬಸ್ , ಇತರ ವಾಹನ ಹಾಗೂ ಜನರನ್ನು ಕೊಂಡೊಯ್ಯಲಾಗುತ್ತದೆ. ಹೀಗೆ ದೊಡ್ಡ ಗಾತ್ರದ ದೋಣಿಗೆ ಬಸ್ ಹತ್ತಿಸಲಾಯಿತು. ಆದರೆ ಸ್ಥಳವಕಾಶದ ಕೊರತೆಯಿಂದ ಚಾಲನ ನಿಯಂತ್ರಣ ಕಳೆದುಕೊಂಡಿದ್ದಾನೆ. ಇದರ ಪರಿಣಾಮ ಬಸ್ ನೇರವಾಗಿ ನದಿಗೆ ಬಿದ್ದಿದೆ. ಇದೇ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕರು ನೆರವಿಗಾಗಿ ಕಿರುಚಾಡಿದ್ದಾರೆ. ತಕ್ಷಣವೇ ಸ್ಥಳೀಯರು ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಇತ್ತ ಕ್ರೇನ್ ಮೂಲಕ ಬಸ್ ಮೇಲಕ್ಕೆತ್ತಲಾಗಿದೆ.

ಖಾಸಗಿ ಬಸ್‌ ಮರಕ್ಕೆ ಡಿಕ್ಕಿ: ಪ್ರಯಾಣಿಕರು ಅಪಾಯದಿಂದ ಪಾರು
ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಶಿವಮೊಗ್ಗದ ಸಾಗರ ತಾಲೂಕಿನ ಐಗಿನಬೈಲು ನರ್ಸರಿ ತಿರುವಿನಲ್ಲಿ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿಲ್ಲ. ಸಣ್ಣಪುಟ್ಟಗಾಯಗಳೊಂದಿಗೆ ಪ್ರಯಾಣಿಕರು ಪಾರಾಗಿದ್ದಾರೆ. ಸಾಗರದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಖಾಸಗಿ ಬಸ್ಸು ಎದುರಿಗೆ ಬಂದ ಲಾರಿಗೆ ಡಿಕ್ಕಿ ಆಗುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಯಿತು. ಬಸ್‌ನಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಗಾಯಗೊಂಡ ಕೆಲವರಿಗೆ ಸಮೀಪದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಇದೇ ವೇಳೆ ಬೇರೆ ಕಾರ್ಯಕ್ರಮದ ನಿಮಿತ್ತ ಹೊರಟಿದ್ದ ಮಾಜಿ ಶಾಸಕ ಗೋಪಾಲಕೃಷ್ಣ ಇದೇ ಮಾರ್ಗವಾಗಿ ಬರುತ್ತಿದ್ದರು. ಘಟನೆ ಕಂಡು ಕಾರು ನಿಲ್ಲಿಸಿದ ಅವರು ಪ್ರಯಾಣಿಕರಿಗೆ ಸಾಂತ್ವನ ಹೇಳಿದರಲ್ಲದೇ, ಧೈರ್ಯದ ಮಾತು ಹೇಳಿದರು.

ಭಾವುಕ ಕ್ಷಣ ಸೃಷ್ಟಿಸಿದ ಅಪಘಾತ: ಕೇರಳ ಸಾರಿಗೆ ಚಾಲಕನ ಸಮಯಪ್ರಜ್ಞೆಗೆ ಶ್ಲಾಘನೆ

ಜಲಾವೃತ ಸೇತುವೆ ಮೇಲೆ ತೆರಳುತ್ತಿದ್ದ ಬಸ್‌ ಅಪಾಯದಿಂದ ಪಾರು
ಅಪಾಯ ಲೆಕ್ಕಿಸದೇ ಜಲಾವೃತವಾದ ಸೇತುವೆ ಮೇಲೆ ತೆರಳುತ್ತಿದ್ದ ಸರ್ಕಾರಿ ಬಸ್‌ ಕ್ಷಣಾರ್ಧದಲ್ಲಿ ಅಪಾಯದಿಂದ ಪಾರಾಗಿರುವ ಘಟನೆ ವಿಜಯಪುರ ಜಿಲ್ಲೆ ದೇವರಹಿಪ್ಪಗಿ ತಾಲೂಕಿನ ಸಾತಿಹಾಳ ಗ್ರಾಮದ ಬಳಿ ನಡೆದಿದೆ. ಡೋಣಿ ಪ್ರವಾಹದಿಂದ ಇಲ್ಲಿನ ಸೇತುವೆ ಮೇಲೆ ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿದ್ದ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿದ್ದ ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ ಒಂದರ ಚಾಲಕ ಸೇತುವೆ ಮೇಲೆ ಬಸ್‌ ಅನ್ನು ಚಲಾಯಿಸಿದ್ದಾನೆ. ಈ ವೇಳೆ ಒಂದು ಹಂತದಲ್ಲಿ ಬಸ್‌ ನೀರಿನ ಸೆಳೆವಿಗೆ ಸಿಲುಕಿ ಏಕಾಏಕಿ ಸೇತುವೆ ಬಿಟ್ಟು ಪಕ್ಕಕ್ಕೆ ವಾಲಿದಂತಾಗಿದೆ. ಆ ಕ್ಷಣದಲ್ಲಿ ಚಾಲಕ ಬಸ್‌ನ ವೇಗ ಹಾಗೂ ಸ್ಟಿಯರಿಂಗ್‌ ನಿಯಂತ್ರಿಸಿದ್ದರಿಂದ ಬಸ್‌ ಸೇತುವೆ ಮಧ್ಯ ಭಾಗಕ್ಕೆ ಬಂದು ಅದೃಷ್ಟವಶಾತ್‌ ಬಸ್‌ ಹಾಗೂ ಬಸ್‌ನಲ್ಲಿದ್ದ ಪ್ರಯಾಣಿಕರು ಕ್ಷಣ ಮಾತ್ರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಿಂದ ಪ್ರಯಾಣಿಕರು ತೀವ್ರವಾಗಿ ಭಯಗೊಂಡು ಚಾಲಕನನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

PREV
Read more Articles on
click me!

Recommended Stories

ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ
ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು