Shivamogga Harsha Murder Case: ಶಿವಮೊಗ್ಗ ಹರ್ಷ ಹತ್ಯೆ ಪ್ರಕರಣವನ್ನು ತನಿಖೆ ಮಾಡುತ್ತಿದ್ದ ರಾಷ್ಟ್ರೀಯ ತನಿಖಾ ತಂಡ ನ್ಯಾಯಾಲಯಕ್ಕೆ 750 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದೆ. ರಾಜ್ಯ ಪೊಲೀಸ್ ಇಲಾಖೆಯಿಂದ ಪ್ರಕರಣವನ್ನು ಎನ್‌ಐಎಗೆ ವರ್ಗಾವಣೆ ಮಾಡಲಾಗಿತ್ತು.
ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂಬಂಧ National Investigation Agency ತಂಡ ದೋಷಾರೋಪ ಪಟ್ಟಿ ಸಲ್ಲಿಸಿದೆ. ಸುಮಾರು 750 ಪುಟಗಳ ಚಾರ್ಜ್‌ಶೀಟನ್ನು ಇಂದು ನ್ಯಾಯಾಲಯಕ್ಕೆ ಸಲ್ಲಿಸಿದೆ. ಹತ್ತು ಮಂದಿ ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಲಾಗಿದ್ದು, ಆರೋಪಿಗಳಿಗೆ ಹಿಂದೂ ಸಂಘಟನೆಯ ಕಾರ್ಯಕರ್ತನ ಹತ್ಯೆ ಮಾಡುವ ಉದ್ದೇಶವಿತ್ತು ಎಂದು ಆರೋಪಿಸಲಾಗಿದೆ. ಹರ್ಷ ಹತ್ಯೆಗಾಗಿ ಮೊದಲೇ ಹೊಂದು ಹಾಕಿ ಕಾದು ಕುಳಿತು ಹತ್ಯೆ ಮಾಡಲಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಹಳೆಯ ದ್ವೇಷ ಇಟ್ಟುಕೊಂಡು ಹರ್ಷನನ್ನೇ ಹತ್ಯೆ ಮಾಡಬೇಕು ಎಂದು ಪ್ಲಾನ್ ರೂಪಿಸಲಾಗಿತ್ತು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಶಿವಮೊಗ್ಗ ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಭಯ ಹುಟ್ಟಿಸಬೇಕು ಎಂಬ ಕಾರಣಕ್ಕಾಗಿಯೇ ಕೊಲೆ ಮಾಡಲಾಗಿದೆ ಎಂದೂ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.
ಭಾರೀ ಸೆನ್ಸೇಷನ್ ಸೃಷ್ಟಿಸಿದ್ದ ಹತ್ಯೆ:
ಕರ್ನಾಟಕದಲ್ಲಿ ಹರ್ಷ ಹತ್ಯೆ ಪ್ರಕರಣ ಸೆನ್ಷೇಷನ್ ಸೃಷ್ಟಿಸಿತ್ತು. ನಂತರ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವರ್ಗಾಯಿಸಲಾಗಿತ್ತು.ಎಫ್ ಐ ಆರ್ ದಾಖಲಿಸಿಕೊಂಡ ಎನ್‌ಐಎ ತನಿಖೆಯನ್ನು ಆರಂಭಿಸಿತ್ತು. NIA ದಾಖಲಿಸಿಕೊಂಡ ಎಫ್‌ಐಆರ್‌ನಲ್ಲಿ ಸ್ಪೋಟಕ ಅಂಶಗಳು ದಾಖಲಾಗಿತ್ತು.
ಯುವತಿಯೊಬ್ಬಳ ವಿಚಾರಕ್ಕೆ ಕೊಲೆಯಾಗಿದೆ ಎಂಬ ಗಾಸಿಪ್ ಕೇಳಿ ಬಂದಿದ್ದವು. ಆದರೆ ಎನ್ಐಎ ದಾಖಲಿಸಿರೋ ಎಫ್ಐಆರ್ ನಲ್ಲಿ ಇದ್ಯಾವ ಅಂಶವೂ ಉಲ್ಲೇಖ ಆಗಿರಲಿಲ್ಲ. ಬದಲಾಗಿ ಶಾಕಿಂಗ್ ವಿಚಾರವೊಂದು ರಾಷ್ಟ್ರೀಯ ತನಿಖಾದಳ ಫಸ್ಟ್ ಇನ್ವೆಷ್ಟಿಗೇಷನ್ ರಿಪೋರ್ಟ್‌ನಲ್ಲಿ ಉಲ್ಲೇಖಿಸಿತ್ತು.
ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ -NIA) ತನ್ನ ಪ್ರಾಥಮಿಕ ವರದಿಯಲ್ಲಿ ಹರ್ಷ ಕೊಲೆ ಹಿಂದೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹುನ್ನಾರ ಅಡಗಿತ್ತು ಎಂದು ಹೇಳಿತ್ತು. ಕೋಮುಗಲಭೆ (Communal Violence) ಎಂದು ಆರೋಪಿಸಿತ್ತು.
ಇದನ್ನೂ ಓದಿ: ಹತ್ಯೆಯಾದ ಹರ್ಷ ಮನೆಗೆ ಬಿಎಸ್ವೈ ಭೇಟಿ: 25 ಲಕ್ಷ ರೂ. ಪರಿಹಾರ ವಿತರಣೆ
ಹರ್ಷ ಕೊಲೆ ಪ್ರಕರಣದಲ್ಲಿ 10 ಆರೋಪಿಗಳನ್ನು ತನಿಖಾ ತಂಡ ಬಂಧಿಸಿತ್ತು. ಆರೋಪಿಗಳಿಗೆ ಸಮಾಜದಲ್ಲಿ ಭಯ ಹುಟ್ಟಿಸುವ ಉದ್ದೇಶವಿತ್ತು. ಸಮಾಜದ ಸ್ವಾಸ್ಥ್ಯ ಹಾಳು ಮಾಡಿ, ಕೋಮುಗಲಭೆ ಸೃಷ್ಟಿಸುವುದು, ಮಾರಕಾಸ್ತ್ರವನ್ನು ಝಳಪಿಸಿ ಜನರಲ್ಲಿ ಭಯ ಹುಟ್ಟಿಸುವ ಉದ್ದೇಶವಿತ್ತು ಎಂದು ಎನ್‌ಐಎ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು.
ಇದನ್ನೂ ಓದಿ:
ಹಿಂದೆ ಹರ್ಷನ ಕೊಲೆಗೆ ಹಲವು ಕಾರಣಗಳು ಕೇಳಿ ಬಂದಿದ್ದವು. ಆದರೆ ಎನ್ಐಎ ಎಫ್ಐ ಆರ್ ನಲ್ಲಿ ಉಲ್ಲೇಖ ಮಾಡಿರೋ ಅಂಶಗಳು ಮಾತ್ರ ಬೇರೆಯೇ ಹೇಳುತ್ತಿದ್ದವು. ಫೆಬ್ರುವರಿ 20ರಂದು ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನನ್ನ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಕೊಲೆ ಆರೋಪಿಗಳನ್ನ ಬಂಧಿಸಿದ್ದ ಶಿವಮೊಗ್ಗ ಪೊಲೀಸರಿಂದ ಹಲವು ಮಾಹಿತಿಗಳು ಹೊರ ಬಿದ್ದಿದ್ದವು. ಆರೋಪಿಗಳ ಮತ್ತು ಹರ್ಷನ ಜಗಳದಿಂದ ಕೊಲೆಯಾಯ್ತು ಅಂತಾ ಕೆಲವರು ಆರೋಪಿಸುತ್ತಿದ್ದರೆ ಸಾಮಾಜಿಕ ಜಾಲತಾಣದ ಪೋಸ್ಟ್ ನಿಂದ ಕೊಲೆಯಾಗಿದೆ ಎಂದು ಕೆಲವರು ಹೇಳಿದ್ದರು.
35 ಎಫ್‌ಐಆರ್ ದಾಖಲು:
ಹರ್ಷ ಹತ್ಯೆ ಪ್ರಕರಣದ ಬಳಿಕ ಸಂಭವಿಸಿದ ಗಲಭೆಗೆ ಸಂಬಂಧಿಸಿ ಒಟ್ಟು 35 ಎಫ್‌ಐಆರ್(FIR) ಅನ್ನು ದಾಖಲಿಸಲಾಗಿತ್ತು. 144ನೇ ಸೆಕ್ಷನ್ ಉಲ್ಲಂಘನೆ, ಕೆಎಸ್‌ಆರ್‌ಟಿಸಿ ಮತ್ತು ಕೆಎಸ್‌ಆರ್‌ಪಿ ವಾಹನಗಳ ಜಖಂಗೊಳಿಸಿರುವುದು, ಖಾಸಗಿ ಬಸ್ ಹಾನಿಗೊಳಿಸಿರುವುದು, ಉಳಿದಂತೆ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಮಾಡಿರುವ ಸಂಬಂಧ ಎಫ್‌ಐಆರ್ ದಾಖಲಾಗಿತ್ತು.
ಇದನ್ನೂ ಓದಿ: Harsha Murder Case: ಆರೋಪಿಗಳ ವಿರುದ್ಧ ‘ಉಗ್ರ’ ಕಾಯ್ದೆ ಕೇಸ್ ದಾಖಲು
ಯುವತಿ ಫೋನ್ ಕರೆಗೂ, ಕೊಲೆಗೂ ಸಂಬಂಧ ಇಲ್ಲ:
ಹರ್ಷನ ಕಾಲ್ ಡಿಟೈಲ್ ಪ್ರಕಾರ ಹರ್ಷ ಹತ್ಯೆಗೂ ಮೊದಲು ಯುವತಿಯೊಬ್ಬಳು ಕರೆ ಮಾಡಿದ್ದಳು. ಹಂತಕರು ಯುವತಿಯರ ಮೂಲಕ ಕರೆ ಮಾಡಿ ಹರ್ಷನನ್ನು ಹೊರ ಕರೆಸಿ ಹತ್ಯೆಮಾಡಿದ್ದರೆಂಬ ಆರೋಪ ಕೇಳಿಬಂದಿದ್ದು, ಅದನ್ನು ಸದ್ಯ ಪೊಲೀಸರು ತಳ್ಳಿಹಾಕಿದ್ದಾರೆ. ಆಕೆಗೂ ಕೊಲೆಗೂ ಸಂಬಂಧ ಇಲ್ಲ ಎಂದು ಪೊಲೀಸರು ತಿಳಿಸಿದ್ದರು.