ಶಿವಮೊಗ್ಗ : ವರುಣನ ಅಬ್ಬರಕ್ಕೆ 30 ಮನೆಗಳು ಜಲಾವೃತ

By Web Desk  |  First Published Oct 21, 2019, 12:03 PM IST

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಾದ್ಯಂತ ವರುಣ ಅಬ್ಬರಿಸುತ್ತಿದ್ದು, ಹಲವು ಮನೆಗಳು ಜಲಾವೃತವಾಗಿವೆ.


ಶಿವಮೊಗ್ಗ [ಅ.21] : ರಾಜ್ಯದಲ್ಲಿ ಮತ್ತೊಮ್ಮೆ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಮಲೆನಾಡು ಕರಾವಳಿ ಸೇರಿದಂತೆ ಉತ್ತರ ಭಾಗವೂ ಕೂಡ ತತ್ತರಿಸುತ್ತಿದೆ. 
 
ಇತ್ತ ಶಿವಮೊಗ್ಗ ಜಿಲ್ಲೆಯ ಹೊಸನಗರ, ಸಾಗರ, ಸೊರಬ, ತೀರ್ಥಹಳ್ಳಿ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. 

ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ! ಕಾರಣವೇನು?...

Tap to resize

Latest Videos

ಶಿವಮೊಗ್ಗ ಪಟ್ಟಣದ ತಗ್ಗು ಪ್ರದೇಶದ 30ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ.  ಅಂಬೇಡ್ಕರ್ ಕಾಲೋನಿಯ ಮನೆಗಳಿಗೆ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜಕಾಲುವೆ ಮುಚ್ಚಿರುವ ಹಿನ್ನೆಲೆಯಲ್ಲಿ ನೀರು ಹರಿಯಲು ಅವಕಾಶವಿಲ್ಲದೇ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಸ್ಥಳದಕ್ಕೆ ಮೇಯರ್ ಚನ್ನಬಸಪ್ಪ ಭೇಟಿ ನೀಡಿ 

ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

click me!